newsfirstkannada.com

ಚುನಾವಣೆಯಲ್ಲಿ ಹೀನಾಯ ಸೋಲು; ಬಿಜೆಪಿಗರಿಗೆ ನೀಡಿದ್ದ ಹಣ ವಾಪಸ್​​​​ ಕೇಳಿದ ನಾರಾಯಣ ಗೌಡ!

Share :

22-05-2023

    ಕೆ.ಆರ್​​ ಪೇಟೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು

    ಬಿಜೆಪಿಗರಿಗೆ ನೀಡಿದ್ದ ಹಣ ವಾಪಸ್​ ಕೇಳಿದ ಕೆ.ಸಿ ನಾರಾಯಣಗೌಡ

    ಕಾಂಗ್ರೆಸ್​, ಜೆಡಿಎಸ್​​ ಅಭ್ಯರ್ಥಿ ಎದುರು ಮಂಡಿಯೂರಿದ್ದ ಮಾಜಿ ಸಚಿವ

ಮಂಡ್ಯ: ಚುನಾವಣೆಯಲ್ಲಿ ಮತದಾರರಿಗೆ ಹಂಚಿಕೆ ಮಾಡದೆ ಇಟ್ಟುಕೊಂಡಿರುವ ಹಣವನ್ನು ವಾಪಸ್ ಕೊಟ್ಟುಬಿಡಿ ಎಂದು ಬಿಜೆಪಿ ಮುಖಂಡರಿಗೆ ಮಾಜಿ ಸಚಿವ ಕೆ.ಸಿ ನಾರಾಯಣ ಗೌಡ ಮನವಿ ಮಾಡಿದ್ದಾರೆ. ಕೆ.ಆರ್.ಪೇಟೆಯಲ್ಲಿ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಮಾತಾಡಿದ ಅವರು, ಚುನಾವಣೆಯಲ್ಲಿ ಜನರಿಗೆ ಹಂಚಲು ಹಣ ನೀಡಲಾಗಿತ್ತು. ಮತದಾರರಿಗೆ ಯಾರೆಲ್ಲಾ ಹಣ ಹಂಚಿಲ್ಲವೋ ಅವರೆಲ್ಲಾ ವಾಪಸ್ ತಂದು ಕೊಡಿ. ಆದರೆ ಕೆಲವರು ಹಣ ಹಂಚಿಲ್ಲ, ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ನನಗೆ ಆ ಹಣ ಬೇಡ, ಟ್ರಸ್ಟ್‌ಗೆ ತಂದು ಕೊಡಿ, ಜನ ಸೇವೆಗೆ ಬಳಸಿಕೊಳ್ಳೋಣ. ದೇವರು ನನಗೆ ಸಾಲ ತೀರಿಸುವಷ್ಟು ಆಶೀರ್ವಾದ ಮಾಡಿದ್ದಾನೆ. ಚುನಾವಣೆ ಖರ್ಚಿಗೆ ಇಷ್ಟು ಹಣ ಬೇಕು ಎಂದು ಸಾಲ ಮಾಡಿ ಕೊಟ್ಟಿದ್ದೆವು. ಹೀಗಾಗಿ ದುಡ್ಡು ವಾಪಸ್ ತಂದುಕೊಡಬೇಕು ಎಂದು ಹಣ ಪಡೆದು ಮೋಸ ಮಾಡಿದ ಮುಖಂಡರಿಗೆ ನಾರಾಯಣಗೌಡ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣೆಯಲ್ಲಿ ಹೀನಾಯ ಸೋಲು; ಬಿಜೆಪಿಗರಿಗೆ ನೀಡಿದ್ದ ಹಣ ವಾಪಸ್​​​​ ಕೇಳಿದ ನಾರಾಯಣ ಗೌಡ!

https://newsfirstlive.com/wp-content/uploads/2023/05/10_05-2020_MND-Narayana-Gowda-1.jpg

Load More