ಯುಎಸ್ಗೆ ಹಾರಿದ ಕಮಲ್ ಹಾಸನ್, ಪ್ರಭಾಸ್, ರಾಣಾ ದಗ್ಗುಬಾಟಿ!
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಹೊಸ ಸಾಂಗ್ ರಿಲೀಸ್
ಸುಮಾರು ದಿನಗಳ ಬಳಿಕ ಭಾರತಕ್ಕೆ ವಾಪಸ್ಸಾದ ನಟಿ ಆ್ಯಮಿ ಜಾಕ್ಸನ್!
ತುಂಬಾ ದಿನ ಆದ್ಮೇಲೆ ಭಾರತಕ್ಕೆ ಬಂದ ಆ್ಯಮಿ!
ನಟಿ ಆ್ಯಮಿ ಜಾಕ್ಸನ್ ತುಂಬಾ ದಿನ ಆದ್ಮೇಲೆ ಭಾರತಕ್ಕೆ ವಾಪಸ್ ಆಗಿದ್ದಾರೆ. 2018ರಲ್ಲಿ ರಜಿನಿಕಾಂತ್ ಜೊತೆ 2.0 ಚಿತ್ರದ ಬಳಿಕ ಆಮಿ ಜಾಕ್ಸನ್ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ನಡುವೆ ಬಾಯ್ ಫ್ರೆಂಡ್ ಜೊತೆ ಮದುವೆಯಾಗದೇನೆ ಒಂದು ಮಗುವಿಗೆ ಜನ್ಮನೂ ಕೊಟ್ಟರು. ಇಷ್ಟು ದಿನ ಮಗುವಿನ ಆರೈಕೆಯಲ್ಲಿದ್ದ ಆಮಿ ಜಾಕ್ಸನ್ ಈಗ ಸಿನಿಮಾ ಶೂಟಿಂಗ್ ಹಿನ್ನೆಲೆ ಭಾರತಕ್ಕೆ ಬಂದಿಳಿದಿದ್ದಾರೆ. ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಆಮಿ ಜಾಕ್ಸನ್ ತುಂಬಾ ದಿನದ ನಂತರ ಇಂಡಿಯಾಗೆ ಬಂದಿದ್ದು ತುಂಬಾ ಖುಷಿ ಆಯ್ತು ಎಂದಿರುವ ವಿಡಿಯೋ ವೈರಲ್ ಆಗಿದೆ.
ನಟಿ ಆ್ಯಮಿ ಜಾಕ್ಸನ್ ತುಂಬಾ ದಿನ ಆದ್ಮೇಲೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಆಮಿ ಜಾಕ್ಸನ್ ತುಂಬಾ ದಿನದ ನಂತರ ಇಂಡಿಯಾಗೆ ಬಂದಿದ್ದು ತುಂಬಾ ಖುಷಿ ಆಯ್ತು ಎಂದಿದ್ದಾರೆ.#newsfirstlive #newsfirstkannada #KannadaNews #Bengaluru #FilmFirst #sandalwood #bollywood @iamAmyJackson pic.twitter.com/qoyCVNXb4E
— NewsFirst Kannada (@NewsFirstKan) July 19, 2023
‘ಬಾಯ್ಸ್ ಸರಿಗಿಲ್ಲ’ ಸಾಂಗ್ ಟ್ರೆಂಡಿಂಗ್
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ‘ಬಾಯ್ಸ್ ಸರಿಗಿಲ್ಲ’ ಸಾಂಗ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಸದ್ಯ ಟ್ರೇಲರ್, ಪ್ರಮೋಷನ್ ವಿಡಿಯೋಗಳಿಂದ ಗಮನ ಸೆಳೆದಿರುವ ಹಾಸ್ಟೆಲ್ ಹುಡುಗರು ಸಿನಿಮಾ ಈಗ ಆಂಥೆಮ್ ಸಾಂಗ್ ಬಿಟ್ಟು ಹೈಪ್ ಹೆಚ್ಚಿಸಿದೆ. ಇನ್ನು ವರುಣ್ ಗೌಡ ಮತ್ತು ಸ್ನೇಹಿತರು ನಿರ್ಮಾಣ ಮಾಡಿರುವ ಈ ಚಿತ್ರವನ್ನ ನಿತೀನ್ ಕೃಷ್ಣಮೂರ್ತಿ ನಿರ್ದೇಶಿಸಿದ್ದು, 21ನೇ ತಾರೀಖ್ ಸಿನಿಮಾ ರಿಲೀಸ್ ಆಗ್ತಿದೆ.
ಘೋಸ್ಟ್ ಮೇಕಿಂಗ್ ಪ್ಲಾನ್ ಹೇಗಿತ್ತು ಗೊತ್ತಾ..?
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದ ಟೀಸರ್ ಸಖತ್ ಸದ್ದು ಮಾಡ್ತಿದೆ. ಅದರಲ್ಲೂ ಶಿವಣ್ಣ ಡೈಲಾಗ್ ಹಾಗೂ ಪಾನಿಪುರಿ ತಿನ್ನೋ ಸೀನ್ ಹೈಲೈಟ್. ಈ ಟೀಸರ್ ಮೇಕಿಂಗ್ ಮಾಡೋಕೆ ಡೈರೆಕ್ಟರ್ ಶ್ರೀನಿ ಹೇಗೆ ಪ್ಲಾನ್ ಮಾಡಿದ್ರು? ಹೇಗೆ ಸ್ಕೆಚ್ ಹಾಕಿದ್ರು ಅನ್ನೋ ಸ್ಟೋರಿಬೋರ್ಡ್ ರಿವೀಲ್ ಮಾಡಿದ್ದಾರೆ. ಇದು ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ.
ಬಾಲಿವುಡ್ಗೆ ಹೊರಟ ನಟಿ ಕೀರ್ತಿ ಸುರೇಶ್!
ಮಹಾನಟಿ ಕೀರ್ತಿ ಸುರೇಶ್ ಬಾಲಿವುಡ್ಗೆ ಎಂಟ್ರಿ ಕೊಡ್ತಾ ಇದ್ದಾರೆ. ಬಾಲಿವುಡ್ ನಟ ವರುಣ್ ಧವನ್ ಹಾಗೂ ಅಟ್ಲಿ ಕಾಂಬಿನೇಷನ್ನಲ್ಲಿ ಬರಲಿರುವ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. 2016ರಲ್ಲಿ ವಿಜಯ್ ನಟಿಸಿ ಬಿಡುಗಡೆಯಾಗಿದ್ದ ಥೇರಿ ಚಿತ್ರ ಹಿಂದಿಯಲ್ಲಿ ರಿಮೇಕ್ ಆಗ್ತಿದ್ದು, ಹಿಂದಿ ವರ್ಷನ್ನಲ್ಲಿ ವರುಣ್ ಧವನ್ಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ತಮಿಳಿನಲ್ಲಿ ಸಮಂತಾ ಮತ್ತು ಆ್ಯಮಿ ಜಾಕ್ಸನ್ ಕಾಣಿಸಿಕೊಂಡಿದ್ದರು. ಈಗ ಸಮಂತಾ ಪಾತ್ರದಲ್ಲಿ ಕೀರ್ತಿ ಸುರೇಶ್ ಬಣ್ಣ ಹಚ್ಚಲಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.
ಯುಎಸ್ನಲ್ಲಿ ಪ್ರಭಾಸ್-ಕಮಲ್ ಹಾಸನ್
‘ಪ್ರಾಜೆಕ್ಟ್ ಕೆ’ ಚಿತ್ರದ ಟೀಸರ್ ಮತ್ತು ಟೈಟಲ್ ಬಿಡುಗಡೆ ಹಿನ್ನೆಲೆ ಸ್ಟಾರ್ ನಟರು ಅಮೆರಿಕಾ ತಲುಪಿದ್ದಾರೆ. ಜುಲೈ 20ಕ್ಕೆ ಅಮೆರಿಕಾದ ಕ್ಯಾಲಿಫೋರ್ನಿಯೋದಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾದ ಕಾರ್ಯಕ್ರಮ ನಡೆಯಲಿದ್ದು, ಕಮಲ್ ಹಾಸನ್, ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಭಾಗವಹಿಸ್ತಿದ್ದಾರೆ. ಸದ್ಯ ಕಮಲ್ ಹಾಸನ್, ಪ್ರಭಾಸ್ ಯುಎಸ್ಗೆ ರೀಚ್ ಆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ