‘ನಿಮಗೆ ತಾಕತ್ ಇದ್ದರೆ ಮಾನನಷ್ಟ ಕೇಸ್ ಹಾಕಿ ಅಂದಿದ್ದೆ’
‘ಅವ್ರ ಬಗ್ಗೆ ಮಾತಾಡಿದ್ರೆ ಸತ್ತ ಹಾವನ್ನ ಹೊಡೆದು ಎಬ್ಬಿಸಿದಂತೆ’
ಡಾ.ಸುಧಾಕರ್ ಬಗ್ಗೆ ಕೆಂಪಣ್ಣ ಏನೆಲ್ಲ ಆರೋಪ ಮಾಡಿದ್ರು?
ಬೆಂಗಳೂರು: ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮಂತ್ರಿಯಾಗಿದ್ದಾಗ ನನಗೆ ಹಾಗೂ ನಮ್ಮ ಸಂಬಂಧಿಗಳಿಗೆ ಹಲವು ಗುತ್ತಿಗೆದಾರರಿಗೆ ಬೆದರಿಕೆ ಹಾಕ್ತಿದ್ದರು ಅಂತ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸ್ಫೋಟಕ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆಂಪಣ್ಣ, ಮಾಜಿ ಸಚಿವ ಸುಧಾಕರ್ ಈಗ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳುತ್ತಿದ್ದರು. ನಿಮಗೆ ತಾಕತ್ ಇದ್ರೆ ಕೇಸ್ ಹಾಕಿ ಅಂದಿದ್ದೆ ಎಂದರು.
ಆದ್ರೆ ಅವರು ಇದುವರೆಗೂ ಯಾವ ಮೊಕದ್ದಮೆ ಹಾಕಿಲ್ಲ. ಸುಧಾಕರ್ ವಿಷಯ ಈಗ ಮಾತನಾಡಿ ಪ್ರಯೋಜನವಿಲ್ಲ, ಯಾಕಂದ್ರೆ ಸತ್ತ ಹಾವನ್ನ ಹೊಡೆದು ಎಬ್ಬಿಸಿದಂತೆ ಆಗುತ್ತದೆ. ನಾವು ವೈಯಕ್ತಿಕವಾಗಿ ಏನೇನು ಸಮಸ್ಯೆಗಳನ್ನು ಎದುರಿದ್ದೇವೆ ಅನ್ನೋದು ನಮಗೆ ಗೊತ್ತಿದೆ. ಇಂದು ಸುಧಾಕರ್ ಬಗ್ಗೆ ನಾನು ಯಾವುದೇ ಮಾತನಾಡುವುದಿಲ್ಲ. ಯಾಕಂದ್ರೆ ಅವರ ಬಗ್ಗೆ ಮಾತನಾಡಿ ಯಾವುದೇ ಪ್ರಯೋಜನ ಇಲ್ಲ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ