ನಮ್ಮಲ್ಲೇ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ-ಕೆಂಪಣ್ಣ
ಕೆಲಸವೇ ಮಾಡದಿದ್ದ ಮೇಲೆ ಕಮಿಷನ್ ಹೇಗೆ?-ಕೆಂಪಣ್ಣ
ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಿದ್ದರೆ ಭೇಟಿ ಮಾಡಬಹುದಿತ್ತು
ಗುತ್ತಿಗೆದಾರರ ಕಮೀಷನ್ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇವತ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನೂತನ ಸರ್ಕಾರದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಕಮೀಷನ್ ಕೇಳಿದ ಪ್ರಸಂಗ ನಡೆದಿಲ್ಲ ಎಂದಿದ್ದಾರೆ.
ಕೆಂಪಣ್ಣ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯಾಕಂದರೆ ಕಳೆದ ಎರಡು ದಿನಗಳ ಹಿಂದೆ ಬಿಬಿಎಂಪಿ ಗುತ್ತಿಗೆದಾರ ಮಂಜುನಾಥ್, ರಾಜ್ಯ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಮಾಡಿದ್ದರು. ಸರ್ಕಾರ ಗುತ್ತಿಗೆದಾರರ ಬಾಕಿ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ: ಗುತ್ತಿಗೆದಾರರು ಚಿನ್ನ, ಆಭರಣ, ಮನೆ ಎಲ್ಲವೂ ಅಡ ಇಟ್ಟಿದ್ದಾರೆ’ -ಹಣ ಬಿಡುಗಡೆ ಮಾಡಲು ಸಿದ್ದುಗೆ ಡೆಡ್ಲೈನ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಂಪಣ್ಣ, ಕೆಲಸವೇ ಮಾಡದೇ ಇದ್ದ ಮೇಲೆ ಕಮೀಷನ್ ತೆಗೆದುಕೊಳ್ಳೋದು ಹೇಗೆ? ಬಾಕಿ ಹಣ ಬಿಡುಗಡೆಗೆ ಮನವಿ ಮಾಡಿದಾಗ ಅನುದಾನ ಇಲ್ಲ ಅಂತ ಹೇಳಿದ್ರು. ನಮ್ಮಲ್ಲೇ ಕೆಲವರು ಗೊಂದಲ ಕ್ರಿಯೇಟ್ ಮಾಡುತ್ತಿದ್ದಾರೆ.
ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಬಿಬಿಎಂಪಿ ಗುತ್ತಿಗೆದಾರರು ಉದ್ದೇಶ ಪೂರ್ವಕವಾಗಿಯೇ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಎಲ್ಲಾ ಕಾಲದಲ್ಲೂ ದೊಡ್ಡ ಶಕ್ತಿಯನ್ನು ಒಡೆಯುವ ಕೆಲಸ ಮಾಡಿದ್ದಾರೆ. ಈಗಲೂ ಕೆಲವರು ಮಾಡ್ತಿದ್ದಾರೆ. ಅವೆಲ್ಲಾ ಉದ್ದೇಶಪೂರ್ವಕವಾಗಿ ಮಾಡ್ತಿರೋದು. ವಿರೋಧ ಪಕ್ಷದ ನಾಯಕರಿದ್ದರೆ ಹೋಗಿ ಮಾತನಾಡಬಹುದಿತ್ತು. ಆದರೆ ಇಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ಹೀಗಾಗಿ ನಾಯಕರನ್ನು ಭೇಟಿಯಾಗೋ ಅನಿವಾರ್ಯತೆ ಏನಿತ್ತು? ಒಡಕು ಮೂಡಿಸಲು ಉದ್ದೇಶಪೂರ್ವಕವಾಗಿ ಇದನ್ನು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ