newsfirstkannada.com

Kempegowda Awards: ಅದಿತಿ ಅಶೋಕ್, ನಿತಿನ್ ಕಾಮತ್, ಜಯದೇವ ಹೃದ್ರೋಗ ಸಂಸ್ಥೆಗೆ ಒಲಿದ ಪ್ರಶಸ್ತಿ

Share :

26-06-2023

    2023 ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಕಟ

    ಪ್ರಶಸ್ತಿ ಪ್ರಕಟಿಸಿದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ

    ಅದಿತಿ ಅಶೋಕ್, ನಿತಿನ್ ಕಾಮತ್​ಗೆ ಒಲಿದ ಪ್ರಶಸ್ತಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಪ್ರಸಕ್ತ ಸಾಲಿನ (2023) ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಕಟ ಮಾಡಿದೆ. ದೇಶದ ಪ್ರತಿಷ್ಟಿತ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಜಿರೋಧ ಸಂಸ್ಥಾಪಕ ನಿತಿನ್ ಕಾಮತ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಗೂ ಪ್ರಶಸ್ತಿ ಒಲಿದು ಬಂದಿದೆ.

ಈ ಬಾರಿ ಇಬ್ಬರು ಗಣ್ಯರಿಗೆ, ಒಂದು ಸಂಸ್ಥೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು ವಿಶೇಷ. ನಾಳೆ ನಡೆಯಲಿರೋ ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಜತೆಗೆ 5 ಲಕ್ಷ ರೂಪಾಯಿ ನಗದು, ಕುದುರೆ ಸವಾರಿ ಮಾಡುವ ಕೆಂಪೇಗೌಡರ ಪ್ರತಿಮೆಯನ್ನು ನೀಡಲಾಗುವುದು ಎಂದಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.

ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್

  • 2012, 2013 ಮತ್ತು 2014ರಲ್ಲಿ ಸತತ ಮೂರು ಬಾರಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್​​​ ಆಗಿದ್ದರು.
  • 2013ರ ಏಷ್ಯನ್ ಯೂತ್ ಗೇಮ್ಸ್, ಯೂತ್ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್​​ನಲ್ಲಿ ಆಡಿದ ಏಕೈಕ ಭಾರತೀಯ ಗಾಲ್ಫ್ ಆಟಗಾರ್ತಿ.
  • 2015ರಲ್ಲಿ ಲೇಡೀಸ್ ಬ್ರಿಟಿಷ್ ಅಮೆಚೂರ್ ಸ್ಟ್ರೋಕ್ ಪ್ಲೇ ಚಾಂಪಿಯನ್​ಶಿಪ್​​ಗೆ ಭಾಜನರಾಗಿದ್ದರು.
  • ವಿಶ್ವ ಶ್ರೇಯಾಂಕದಲ್ಲಿ ಅಗ್ರ 50 ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಗಾಲ್ಫ್ ಆಟಗಾರ್ತಿ.
  • ಯುರೋಪಿಯನ್ ಟೂರ್ ಈವೆಂಟ್​​ನಲ್ಲಿ ಹಕ್ಕು ಸಾಧಿಸಿದ ದೇಶದ ಮೊದಲ ಮಹಿಳೆ.

ಜಿರೋಧ ಸಂಸ್ಥಾಪಕ ನಿತಿನ್ ಕಾಮತ್

  • ಭಾರತದಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಶಿಕ್ಷಣವನ್ನ ಉತ್ತೇಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
  • ಜಿರೋಧಗೆ BSE ಮತ್ತು ಡನ್ & ಬ್ರಾಡ್​ಸ್ಟ್ರೀಟ್​​ನಿಂದ ವರ್ಷದ ಉದಯೋನ್ಮುಖ ಬ್ರೋಕರೇಜ್ ಸಂಸ್ಥೆ (2015) ಎಂಬ ಬಿರುದು ಸಿಕ್ಕಿದೆ.
  • 2016ರಲ್ಲಿ ಗಮನಾರ್ಹ ಸಾಧನೆ ಮಾಡಿದ ಟಾಪ್ 10 ಭಾರತೀಯ ಉದ್ಯಮಿಗಳಲ್ಲಿ ನಿತಿನ್ ಕೂಡ ಒಬ್ಬರು.
  • 2016ರಲ್ಲಿ 30 ವರ್ಷದೊಳಗಿನ ಫೋಬ್ಸ್​​ ​ಇಂಡಿಯಾ ಮತ್ತು ಎಕನಾಮಿಕ್ಸ್ ಟೈಮ್ಸ್ ಸ್ಟಾರ್ಟ್​ ಅಪ್ ಆಫ್​ ದಿ ಇಯರ್ (ಬೂಟ್ ಸ್ಟ್ಯ್ರಾಪ್) 2016 ಪ್ರಶಸ್ತಿ ನೀಡಿದೆ.

ಜಯದೇವ ಹೃದ್ರೋಗ ಸಂಸ್ಥೆಗೂ ಪ್ರಶಸ್ತಿ

  • 1600 ಹಾಸಿಗೆ ಸಾಮಾರ್ಥ್ಯವನ್ನ ಹೊಂದಿದ್ದು, ಆಗ್ನೇಯ ಏಷ್ಯಾದ ಅತಿದೊಡ್ಡ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಿದೆ.
  • 2018ರಲ್ಲಿ ಎನ್​​ಎಬಿಹೆಚ್ ಮರು ಮಾನ್ಯತೆ ಪಡೆದ ದೇಶದ ಮೊದಲ ಸಾರ್ವಜನಿಕ ಹೃದ್ರೋಗ ಸಂಸ್ಥೆ ಎಂಬ ಹೆಗ್ಗಳಿಕೆ
  • ಪ್ರತಿದಿನ 1200 ರಿಂದ 1400 ಹೃದಯ ಸಂಬಂಧಿ ರೋಗಿಗಳ ಚಿಕಿತ್ಸೆ ನೀಡುತ್ತಿರುವ ಸಂಸ್ಥೆ.
  • ಪ್ರಸ್ತುತ ನಿರ್ದೇಶಕರಾಗಿ ಸಿ. ಎನ್. ಮಂಜುನಾಥ್ ಅವರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

Kempegowda Awards: ಅದಿತಿ ಅಶೋಕ್, ನಿತಿನ್ ಕಾಮತ್, ಜಯದೇವ ಹೃದ್ರೋಗ ಸಂಸ್ಥೆಗೆ ಒಲಿದ ಪ್ರಶಸ್ತಿ

https://newsfirstlive.com/wp-content/uploads/2023/06/Aditi-Kamat.jpg

Load More