newsfirstkannada.com

ಮಹಾ ಪ್ರವಾಹ.. ಸುಮಾರು 130ಕ್ಕೂ ಹೆಚ್ಚು ಜನರು ಸಾವು, ಬೀದಿಗೆ ಬಿದ್ದ ಲಕ್ಷಾಂತರ ಮಂದಿ

Share :

18-11-2023

    ಕಳೆದ 40 ವರ್ಷಗಳಲ್ಲಿ ಅತೀ ದೊಡ್ಡ ಪ್ರವಾಹ

    ಅಕ್ಟೋಬರ್​ನಿಂದ ನಿರಂತವಾಗಿ ಸುರೀತಿದೆ ಮಳೆ

    ಕೀನ್ಯಾ, ಸೋಮಾಲಿ, ಇಥಿಯೋಪಿಯಾ ತತ್ತರ

ಕೀನ್ಯಾ, ಇಥಿಯೋಪಿಯಾ ಮತ್ತು ಸೊಮಾಲಿಯಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಸುಮಾರು 130ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಸತತ ನಾಲ್ಕು ವರ್ಷಗಳ ಬರಗಾಲನ ನಂತರ ಸೊಮಾಲಿಯದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು ಮತ್ತೆ ಜನರನ್ನು ಸಂಕಷ್ಟಕ್ಕೆ ದೂಡಿದೆ. ಅಕ್ಟೋಬರ್‌ನಿಂದ ನಿರಂತರವಾಗಿ ಈ ದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದಾರೆ. ಜೊತೆಗೆ 55 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಕೀನ್ಯಾದಲ್ಲೂ ಸುಮಾರು 50ಕ್ಕೂ ಹೆಚ್ಚು ಜನ ಪ್ರವಾಹದಿಂದ ಜೀವ ಕಳೆದುಕೊಂಡಿದ್ದಾರೆ. 30 ಸಾವಿರ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಎಂದು ಕೀನ್ಯಾದ ರೆಡ್​ ಕ್ರಾಸ್ ಸೋಸೈಟಿ ವರದಿ ಮಾಡಿದೆ. ಕೀನ್ಯಾ, ಇಥಿಯೋಪಿಯಾ, ಸುಡಾನ್ ಮತ್ತು ಸೊಮಾಲಿಯಾದಲ್ಲಿ ಕಳೆದ 40 ವರ್ಷಗಳಲ್ಲಿ ಯಾರೂ ಕೇಳಿರದ ಭೀಕರ ಪ್ರವಾಹ ಉಂಟಾಗಿದೆ.

ಅನೇಕ ಜನರು ಪತ್ತೆಯಾಗದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ತುರ್ತು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಮಳೆಯಿಂದಾಗಿ ರಸ್ತೆ, ಸೇತುವೆಗಳು ಕೊಚ್ಚಿಹೋಗಿದ್ದರಿಂದ ಕೆಲವು ಪ್ರದೇಶಗಳ ಸಂಪರ್ಕ ಕಡಿತಗೊಂಡಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾ ಪ್ರವಾಹ.. ಸುಮಾರು 130ಕ್ಕೂ ಹೆಚ್ಚು ಜನರು ಸಾವು, ಬೀದಿಗೆ ಬಿದ್ದ ಲಕ್ಷಾಂತರ ಮಂದಿ

https://newsfirstlive.com/wp-content/uploads/2023/11/KINEYA.jpg

Load More