newsfirstkannada.com

ಕೇರಳ ಕೇಸ್​​ಗೆ ಬಿಗ್​ ಟ್ವಿಸ್ಟ್​​: ಬಂಧಿಸಲು ಬಂದಿದ್ದ ಬೆಂಗಳೂರು ಪೊಲೀಸರನ್ನೇ ಟ್ರ್ಯಾಪ್​​​ ಮಾಡಿದ ಆರೋಪಿ

Share :

06-08-2023

  ಆರೋಪಿಯಿಂದಲೇ ಬೆಂಗಳೂರು ಪೊಲೀಸರ ಟ್ರ್ಯಾಪ್​​

  ಕೇರಳದ ಕೊಚ್ಚಿಯಲ್ಲಿ ಬೆಂಗಳೂರು ಪೊಲೀಸರು ಅರೆಸ್ಟ್​

  ಬೆಂಗಳೂರು ಪೊಲೀಸರಿಗೆ ಆರೋಪಿ ಲವರ್​ನಿಂದ ಸಂಕಷ್ಟ!

ಬೆಂಗಳೂರು: ಇಡೀ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಕೇರಳ ಫೈಲ್ಸ್​​. ಅದು ನಿಮಗೂ ಗೊತ್ತೇ ಇದೆ. ಆದ್ರೆ ಇದೀಗ ಕೇರಳ ಪೊಲೀಸ್​​ ಸ್ಟೋರಿಯ ಕರಾಮತ್ತು ಶುರುವಾಗಿದೆ. ಕೇರಳದಲ್ಲಿ ಬೆಂಗಳೂರು ಪೊಲೀಸರ ಮೇಲೆ ಲಂಚ ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್​​ ಅಂಡ್​ ಟರ್ನ್​ ಪಡೆಯುತ್ತಿದೆ.

ಇತ್ತೀಚೆಗಷ್ಟೇ ಇನ್ಸ್​ಪೆಕ್ಟರ್​​ ಶಿವಪ್ರಕಾಶ್​ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶಿಸಿದ್ದಾರೆ. ಈ ಬೆನ್ನಲ್ಲೀಗ ಲಂಚ ಪಡೆದ ಪ್ರಕರಣಕ್ಕೆ ಆರೋಪಿಯ ಲವರ್​ ಅಲ್ಲ, ಲಾಯರ್​ ಎಂಟ್ರಿಯಾಗಿದೆ.

ಹೌದು, ಕೇರಳ ಪೊಲೀಸರಿಗೆ ಬೆಂಗಳೂರು ಪೊಲೀಸರ ಕೇಸ್ ಲೀಡ್ ಹೇಗೆ ಸಿಕ್ಕಿತ್ತು ಎಂಬುದರ ಹಿಂದೆ ರಾಜ್ಯ ಪೊಲೀಸರ ಯಡವಟ್ಟು, ಆರೋಪಿ ಅಖಿಲ್​ ಲವರ್ ಮಾಸ್ಟರ್​ ಪ್ಲಾನ್ ಇದೆ. ತಾವೇ ತೋಡಿದ ಗುಂಡಿಗೆ ತಾವೇ ಬೀಳೋದು ಅಂದ್ರೆ ಬಹುಷಃ ಇದೆ ಅನಿಸತ್ತೆ. ಕರ್ನಾಟಕ ಪೊಲೀಸರು ಆರೋಪಿ ಅಖಿಲ್​ ಬಳಿ ಒಟ್ಟು ಹತ್ತು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ರು ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ, ಮೂರು ಲಕ್ಷದ 95 ಸಾವಿರ ಪಡೆದು ಆರೋಪಿಯನ್ನ ಪೊಲೀಸರು ಕರೆ ತಂದಿದ್ರು.

ಕರ್ನಾಟಕದ ಬಾರ್ಡರ್ ಹತ್ತಿರಕ್ಕೇ ಬಂದಿದ್ದ ಇನ್ಸ್​​ಪೆಕ್ಟರ್​​ ಶಿವಪ್ರಕಾಶ್ ಆ್ಯಂಡ್ ಸಿಬ್ಬಂದಿ, ಕೊನೆ ಗಳಿಗೆಯಲ್ಲಿ ಅರೆಸ್ಟ್ ಮಾಡಿದ್ದ ಆರೋಪಿ ಕೈಗೆ ಮೊಬೈಲ್ ಕೊಟ್ಟಿದ್ದರಂತೆ. ಇದೇ ರಾಜ್ಯ ಪೊಲೀಸರು ಮಾಡಿದ ಯಡವಟ್ಟು.

ಆರೋಪಿ ಲವರ್​ ಪ್ಲಾನ್​ಗೆ ಟ್ರ್ಯಾಪ್ ಆಗಿದ್ದ ನಗರ ಪೊಲೀಸರು

ಮೊಬೈಲ್​ ಸಿಕ್ಕಿದ್ದೇ ತಡ ಆರೋಪಿ ಅಖಿಲ್​ ತನ್ನ ಲವರ್​​ ಅದರಲ್ಲೂ ವೃತ್ತಿಯಲ್ಲಿ ಲಾಯರ್​ ಆಗಿದ್ದ ಆಕೆಗೆ ಕಾಲ್​ ಮಾಡಿದ್ದ. ಜೊತೆಗೆ ನನ್ನ ಅರೆಸ್ಟ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಲವರ್​ಗೆ ಮಲೆಯಾಳಂನಲ್ಲಿ ಆರೋಪಿ ಹೇಳಿದ್ದ. ಈ ಕಡೆ ಮಲೆಯಾಳಂ ಅರ್ಥವಾಗದೆ ಹಣದ ಅರೆಂಜ್ಮೆಂಟ್ ಆಗುತ್ತಿದೆಯೇನೋ ಎಂದು ಪೊಲೀಸ್​ ಟೀಂ ಕೂಡ ಸುಮ್ಮನಾಗಿ ವಾಪಸ್​​ ಕರ್ನಾಟಕಕ್ಕೆ ತೆರಳಿದೆ. ಅಷ್ಟೋತ್ತಿಗಾಗಲೇ ನಡೆದ ವಿಷಯವನ್ನೆಲ್ಲಾ ಕೇರಳ ಪೊಲೀಸರಿಗೆ ಆರೋಪಿ ಲವರ್ ತಿಳಿಸಿದ್ದಾಳೆ. ಬಳಿಕ ಪೋಷಕರಿಂದ ಉಳಿದ ಹಣ ಕೊಡೋದಾಗಿ ಕರೆ ಮಾಡಿಸಿ ಕೇರಳ ಲಿಮಿಟ್ಸ್​​ಗೆ ನಾಲ್ವರು ಪೊಲೀಸರು ಬರುವಂತೆ ಮಾಡಿದ್ದಾರೆ. ಲಿಮಿಟ್ಸ್​​ಗೆ ಬಂದಿದ್ದೇ ತಡ ರೈಡ್ ಮಾಡಿ ಎಲ್ಲರನ್ನೂ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಆರೋಪಿಯನ್ನ ಬಂಧಿಸಬೇಕಾದರೆ ಅಥವಾ ದಾಳಿ ಮಾಡಬೇಕಾದರೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲೇಬೇಕಿತ್ತು. ಆದರೆ ಯಾವುದೇ ಸೂಚನೆ ನೀಡದೆ ವೈಟ್​​ಫೀಲ್ಡ್ ಪೊಲೀಸರು ಆರೋಪಿಯನ್ನ ಕರೆದೊಯ್ದಿದ್ರು.

ಸದ್ಯ ನೋಟಿಸ್ ನೀಡಿ ಕೇರಳ ಪೊಲೀಸರು ಆರೋಪಿಗಳನ್ನ ಬಿಟ್ಟು ಕಳುಹಿಸಿದ್ದಾರೆ. ಇತ್ತ ಕರ್ನಾಟಕದಲ್ಲಿ ಆ ನಾಲ್ವರನ್ನೂ ಸಸ್ಪೆಂಡ್‌ ಮಾಡಲಾಗಿದೆ. ಅದೇನೇ ಇದ್ರೂ ಲಂಚ ಪಡೆಯೋಕೆ ಹೋದ ಈ ಪೊಲೀಸರು ಇಂಗುತಿಂದ ಮಂಗನಂತಾಗಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳ ಕೇಸ್​​ಗೆ ಬಿಗ್​ ಟ್ವಿಸ್ಟ್​​: ಬಂಧಿಸಲು ಬಂದಿದ್ದ ಬೆಂಗಳೂರು ಪೊಲೀಸರನ್ನೇ ಟ್ರ್ಯಾಪ್​​​ ಮಾಡಿದ ಆರೋಪಿ

https://newsfirstlive.com/wp-content/uploads/2023/08/Kerala-Police.jpg

Load More