newsfirstkannada.com

17 ಬಾರಿ ಚಾಕುವಿನಿಂದ ಚುಚ್ಚಿ ಪತ್ನಿ ಕೊಂದಿದ್ದ ಕೇರಳದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಮೆರಿಕ ಕೋರ್ಟ್

Share :

07-11-2023

    ಅಮೆರಿಕದ ಫ್ಲೋರಿಡಾ ನ್ಯಾಯಾಲಯದಿಂದ ಮಹತ್ವದ ತೀರ್ಪು

    2020ರಲ್ಲಿ 26 ವರ್ಷದ ಪತ್ನಿಯನ್ನ ಚುಚ್ಚಿ ಕೊಂದಿದ್ದ ಕೇರಳದ ವ್ಯಕ್ತಿ

    ಮೃತ ಜಾಯ್ ಪೋಷಕರು ಜೀವಾವಧಿ ಶಿಕ್ಷೆಗೆ ಖುಷಿ ವ್ಯಕ್ತಪಡಿಸಿದ್ದಾರೆ

ಹೆಂಡತಿಯನ್ನು ಚಾಕುವಿನಿಂದ ಬರೋಬ್ಬರಿ 17 ಬಾರಿ ಇರಿದು ಕೊಂದಿದ್ದ ಭಾರತೀಯ ಮೂಲದ ವ್ಯಕ್ತಿಗೆ ಅಮೆರಿಕದ ಫ್ಲೋರಿಡಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.

The Sun Sentinel ಸುದ್ದಿ ಪ್ರತಿಕೆ ಪ್ರಕಾರ, ಫಿಲಿಪ್ ಮ್ಯಾಥ್ಯೂ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಪತ್ನಿ ಮೆರಿನ್ ಜಾಯ್​ (26) ಅವರನ್ನು 17 ಬಾರಿ ಚಾಕುವಿನಿಂದ ಇರಿದು, ಆಕೆಯ ಮೇಲೆ ಕಾರು ಹತ್ತಿಸಿ ಕೊಂದಿದ್ದ. ಇಬ್ಬರೂ ಕೇರಳ ಮೂಲದವರಾಗಿದ್ದು, ಅಮೆರಿಕಗೆ ಉದ್ಯೋಗಕ್ಕೆ ಹೋಗಿದ್ದರು.

Broward Health Coral Springs ಆಸ್ಪತ್ರೆಯಲ್ಲಿ ಮೆರಿನ್ ಜಾಯ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಎಂಟ್ರಿಯಾಗಿದ್ದ ಫಿಲಿಪ್, ಈ ಕೃತ್ಯ ನಡೆಸಿದ್ದ. ಆಸ್ಪತ್ರೆಯ ಎದುರಿಗೇ ಕೃತ್ಯ ನಡೆಸಿದ್ದ. ಚಾಕುವಿನಿಂದ ಚುಚ್ಚಿದ ನಂತರ ಆಕೆ ಕುಸಿದು ಬಿದ್ದಿದ್ದಳು. ನಂತರ ಆಕೆಯ ಮೇಲೆ ಕಾರು ಹತ್ತಿಸಿ ಸಾಯಿಸಲು ಪ್ರಯತ್ನಿಸಿದ್ದ. ಈ ವೇಳೆ ಆಕೆಯ ಸಹೋದ್ಯೋಗಿಗಳು ಆಕೆಯ ರಕ್ಷಣೆಗೆ ಹೋದಾಗ, ಕೊಲೆ ಮಾಡಲು ಬಂದ ವ್ಯಕ್ತಿ ಯಾರೆಂದು ಬಾಯಿ ಬಿಟ್ಟಿದ್ದಳು. ಪರಿಣಾಮ ಆತನನ್ನು ಬಂಧಿಸಲು ಸುಲಭವಾಗಿತ್ತು.

ಕೊನೆಗೆ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಸಾವನ್ನಪ್ಪಿದ್ದಳು. ಕಳೆದ ಶುಕ್ರವಾರ ಕೋರ್ಟ್ ವಿಚಾರಣೆಯಲ್ಲಿ ಅಪರಾಧಿ ಮ್ಯಾಥ್ಯೂ, ಪ್ರಕರಣವನ್ನು ರದ್ದು ಮಾಡಿ ಜೈಲಿನಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದ. ವಿಚಾರಣೆ ನಡೆಸಿದ ಕೋರ್ಟ್, ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಂತೆಯೇ ಆರೋಪಿಗೆ ಅಲ್ಲಿನ ಕಾನೂನು ಪ್ರಕಾರ 5 ವರ್ಷ ಜೈಲು ಶಿಕ್ಷೆ ಆಗಲಿದೆ. ಇನ್ನು ಮರಣದಂಡನೆ ಶಿಕ್ಷೆಯಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಯಾಕೆ ಕೊಲೆ ಮಾಡಿದ..?

ವರದಿಗಳ ಪ್ರಕಾರ.. ಅಪರಾಧಿ ಫಿಲಿಪ್ ಮ್ಯಾಥ್ಯೂ ಜೊತೆಗೆ ಇರಲು ಮೆರಿನ್​ಗೆ ಇಷ್ಟ ಇರಲಿಲ್ಲ. ಆತನಿಂದ ದೂರ ಇರಲು ನಿರ್ಧರಿಸಿದ್ದಳು. ಇದೇ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ್ದ ಎನ್ನಲಾಗಿದೆ. ಜೀವಾವಧಿ ಶಿಕ್ಷೆ ಬಗ್ಗೆ ಜಾಯ್ ಅವರ ತಾಯಿ ಖುಷಿ ವ್ಯಕ್ತಪಡಿಸಿದ್ದಾಳೆ. ಮಗಳ ಮೇಲೆ ದಾಳಿ ಮಾಡಿದ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಿದೆ. ನಮ್ಮ ಕಾನೂನು ಹೋರಾಟ ಇಲ್ಲಿಗೆ ಅಂತ್ಯವಾಗಿದೆ ಎಂದಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

17 ಬಾರಿ ಚಾಕುವಿನಿಂದ ಚುಚ್ಚಿ ಪತ್ನಿ ಕೊಂದಿದ್ದ ಕೇರಳದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಮೆರಿಕ ಕೋರ್ಟ್

https://newsfirstlive.com/wp-content/uploads/2023/11/US-1.jpg

Load More