newsfirstkannada.com

ಪತ್ನಿ, ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಗಂಡ: 40 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್‌

Share :

05-07-2023

    ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಪತಿ

    ಕೇರಳ ಮೂಲದ ಆರೋಪಿಗೆ 40 ವರ್ಷಗಳ ಕಾಲ ಜೈಲು ಶಿಕ್ಷೆ

    2012ರಲ್ಲಿ ಸಾಜು ಚೆಲವಾಲೆಲ್‌ ಜತೆ ಅಂಜು ಮದುವೆಯಾಗಿದ್ದರು

ಲಂಡನ್: ಕೇರಳ ಮೂಲದ ವ್ಯಕ್ತಿಯೊಬ್ಬರು ಯುಕೆಯಲ್ಲಿ ತನ್ನೊಂದಿಗೆ ನೆಲೆಸಿದ್ದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾರೆ. ಸಾಜು ಚೆಲವಾಲೆಲ್‌ (52) ಬಂಧಿತ ಆರೋಪಿ. ಪತ್ನಿ ಅಂಜು ಅಶೋಕ್ (35) ಮತ್ತು ಅವರ ಮಕ್ಕಳಾದ ಜೀವ ಸಾಜು (6) ಮತ್ತು ಜಾನ್ವಿ ಸಾಜು (4) ಮೃತ ದುರ್ದೈವಿಗಳು.

ಆರೋಪಿಯು ಕೇರಳ ಮೂಲದ ನಿವಾಸಿ. ಇದೀಗ ಸಾಜು ಚೆಲವಾಲೆಲ್​ಗೆ ಸ್ಥಳೀಯ ನ್ಯಾಯಾಲಯ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನಾರ್ಥಾಂಪ್ಟನ್‌ನಲ್ಲಿ ಪೊಲೀಸ್​ ಅಧಿಕಾರಿಗಳು ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಸಾಜು ಚೆಲವಾಲೆಲ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ಇದೀಗ ಅಪರಾಧಿಗೆ 40 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಪತ್ನಿ ಹಾಗೂ ಮಕ್ಕಳನ್ನು ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ಕೊಲೆಯಾದ ಪತ್ನಿ ಅಂಜು ಅಶೋಕ್ ಅವರು ಕೆಟ್ಟರಿಂಗ್‌ ಜನರಲ್ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 2012ರಲ್ಲಿ ಸಾಜು ಚೆಲವಾಲೆಲ್‌ ಜೊತೆ ಅಂಜು ಅಶೋಕ್ ಮದುವೆಯಾಗಿದ್ದರು.

ಪತಿ ಅಂಜು ಸಾಜು ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಕತ್ತು ಹಿಸುಕಿ ಪತಿ ಕೊಲೆ ಮಾಡಿದ್ದ. ಮರಣೋತ್ತರ ಪರೀಕ್ಷೆಯ ಬಳಿಕ ಇಬ್ಬರು ಮಕ್ಕಳು ಹಾಗೂ ಪತ್ನಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿದು ಬಂದಿತ್ತು. ಇದಾದ ಬಳಿಕ ಪೊಲೀಸ್​​ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಪೊಲೀಸ್​ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಬ್ರಿಟನ್ ಕೋರ್ಟ್‌ ಆರೋಪಿಗೆ 40 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿ, ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಗಂಡ: 40 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್‌

https://newsfirstlive.com/wp-content/uploads/2023/07/death-9.jpg

Load More