newsfirstkannada.com

KMF ಬ್ರ್ಯಾಂಡ್​​ಗೆ ಭಾರೀ ವಿರೋಧ.. ನಂದಿನಿ ಹಾಲು ಖರೀದಿಸಬೇಡಿ ಎಂದ ಕೇರಳ ಸಚಿವೆ!

Share :

16-06-2023

    ಕರ್ನಾಟಕದ ವಿರುದ್ಧ ಕೇರಳ ಸರ್ಕಾರದಿಂದ ದ್ವೇಷದ ರಾಜಕೀಯ..!

    ನಂದಿನಿ ಹಾಲು ಖರೀದಿಸಬೇಡಿ ಎಂದ ಕೇರಳ ಸಚಿವೆ ಚಿಂಚು ರಾಣಿ

    ಕೆಎಂಎಫ್ ನಂದಿನಿ ಹಾಲು ಮಾರಾಟಕ್ಕೆ ಕೇರಳದಲ್ಲಿ ಭಾರೀ ವಿರೋಧ

ತಿರುವನಂತಪುರಂ: ಇತ್ತೀಚೆಗೆ ಕರ್ನಾಟಕದಲ್ಲಿ ಯಥೇಚ್ಛವಾಗಿ ಮಾರಾಟ ಮಾಡುತ್ತಿದ್ದ ಗುಜರಾತ್​​ ಮೂಲದ ‘ಅಮುಲ್‌’ ಹಾಲಿಗೆ ಕನ್ನಡಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಕರ್ನಾಟಕದ ಕೆಎಂಎಫ್ ನಂದಿನಿ ಹಾಲು ಮಾರಾಟಕ್ಕೆ ಕೇರಳದಲ್ಲಿ ವಿರೋಧ ಕೇಳಿ ಬಂದಿದೆ. ನಂದಿನಿ ಹಾಲಿನ ಮಾರಾಟವನ್ನು ಖುದ್ದು ಕೇರಳದ ಪಶುಸಂಗೋಪನಾ ಸಚಿವೆ ಜೆ ಚಿಂಚು ರಾಣಿ ವಿರೋಧ ಮಾಡಿದ್ದಾರೆ. ಇನ್ಮುಂದೆ ಕೇರಳ ಸರ್ಕಾರದ ಅನುಮತಿ ಇಲ್ಲದೆ ನಂದಿನಿ ಹಾಲು ಮಾರಾಟ ಮಾಡಬೇಡಿ ಎಂದಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕೇರಳ ಸಚಿವೆ ಚಿಂಚು ರಾಣಿ, ನಂದಿನಿ ಹಾಲು ಕಳಪೆ ಗುಣಮಟ್ಟ ಹೊಂದಿದೆ. ಹೀಗಾಗಿ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ ಮಿಲ್ಮಾ ಹಾಲನ್ನೇ ಖರೀದಿಸಿ ಎಂದು ಮನವಿ ಮಾಡಿದ್ದಾರೆ. ಈ ವರ್ಷ ಕೇರಳದಲ್ಲಿ ಹೆಚ್ಚು ನಂದಿನಿ ಹಾಲು ಪಾರ್ಲರ್​ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ನಂದಿನಿ ಹಾಲು ಮಾರಾಟ ಮಾಡಲು ಕೇರಳ ಸರ್ಕಾರದ ಅನುಮತಿ ತೆಗೆದುಕೊಳ್ಳಲು ಬೇಕು ಎಂದಿದ್ದಾರೆ.

ಸದ್ಯ ಈ ಬಗ್ಗೆ ಕರ್ನಾಟಕದ ಸಹಕಾರ ಸಚಿವ ಕೆ.ಎನ್​​ ರಾಜಣ್ಣ ಮಾತಾಡಿದ್ದಾರೆ. ಕೇರಳ ಮಾತ್ರವಲ್ಲ ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ನಂದಿನಿ ಹಾಲು ಮಾರಾಟ ಮಾಡಬಹುದು. ಕೇರಳದಲ್ಲಿ ನಡೆಯೋ ನಂದಿನಿ ಹಾಲು ವ್ಯವಹಾರದಲ್ಲಿ ಯಾವುದೇ ಅನೈತಿಕ ಇಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

KMF ಬ್ರ್ಯಾಂಡ್​​ಗೆ ಭಾರೀ ವಿರೋಧ.. ನಂದಿನಿ ಹಾಲು ಖರೀದಿಸಬೇಡಿ ಎಂದ ಕೇರಳ ಸಚಿವೆ!

https://newsfirstlive.com/wp-content/uploads/2023/06/Nandini.jpg

Load More