newsfirstkannada.com

ಬಾಗಿಲು ತೆರೆದ ಅಯ್ಯಪ್ಪ ಸ್ವಾಮಿ ದೇಗುಲ; 41 ದಿನಗಳ ಕಾಲ ಶಬರಿಮಲೆಯಲ್ಲಿ ಮಂಡಲ ಪೂಜೆ

Share :

17-11-2023

    ಅಯ್ಯಪ್ಪನ ಆಶೀರ್ವಾದಕ್ಕಾಗಿ ಆಗಮಿಸಿದ ಸಾಕಷ್ಟು ಭಕ್ತರು

    ಮಂಡಳ-ಮಕರವಿಳಕ್ಕು ಯಾತ್ರೆ ಪ್ರಾರಂಭ ಹಿನ್ನೆಲೆ ಗುಡಿ ಓಪನ್

    41 ದಿನಗಳ ಕಾಲ ದೇವಾಲಯದಲ್ಲಿ ಮಂಡಲದ ವಿಶೇಷ ಪೂಜೆ

ಕೊಚ್ಚಿ: ಮಂಡಳ-ಮಕರವಿಳಕ್ಕು ಯಾತ್ರೆ ಪ್ರಾರಂಭವಾದ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೇರಳದ ಶಬರಿಮಲೆ ಆಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ದೇವಾಲಯದ ‘ತಂತ್ರಿ’ ಕಂದರಾರು ಮಹೇಶ್ ಮೋಹನರು ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಯ ಗರ್ಭಗುಡಿಯನ್ನು ತೆರೆಯಲಾಗಿದೆ.

ತೀರ್ಥಯಾತ್ರೆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಆಗಮಿಸುವುದರಿಂದ ಸಾಲುಗಳನ್ನು ನಿಯಂತ್ರಿಸಲು ಸಿಬ್ಬಂದಿ ನೇಮಕ ಕೂಡ ಮಾಡಲಾಗಿದೆ. ಈಗಾಗಲೇ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದು ಸರತಿ ಸಾಲಿನಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಮಲಯಾಳಂ ಕ್ಯಾಲೆಂಡರ್​ ಪ್ರಕಾರ 41 ದಿನಗಳ ಕಾಲ ದೇಗುಲದಲ್ಲಿ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಯಾತ್ರೆ ಆರಂಭವಾಗಲಿದೆ. ಜನವರಿ 15ರ ಮಕರ ಸಂಕ್ರಮಣ ದಿನದಂದು ಮಕರವಿಳಕ್ಕು ನೆರವೇರಲಿದ್ದು, ದೇಶದಾದ್ಯಂತ ಲಕ್ಷಾಂತರು ಭಕ್ತರು ಶಬರಿಮಲೆಗೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.

ಅಯ್ಯಪ್ಪ ಸ್ವಾಮಿ ದೇವಾಲಯ

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಮೂಲ ಸೌಕರ್ಯಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ, ಶೌಚಾಲಯ ಸೇರಿದಂತೆ ಭಕ್ತರಿಗೆ ತಂಗುವ, ಪಾರ್ಕಿಂಗ್​ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೇ ಕೇರಳ ಸರ್ಕಾರದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಗಿಲು ತೆರೆದ ಅಯ್ಯಪ್ಪ ಸ್ವಾಮಿ ದೇಗುಲ; 41 ದಿನಗಳ ಕಾಲ ಶಬರಿಮಲೆಯಲ್ಲಿ ಮಂಡಲ ಪೂಜೆ

https://newsfirstlive.com/wp-content/uploads/2023/11/AYYAPPA_TEMPLE.jpg

Load More