newsfirstkannada.com

Watch: ಕೇರಳ ಬಾಂಬ್ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾದ ವ್ಯಕ್ತಿ.. ಯಾರಿವನು..?

Share :

30-10-2023

    ದೇವರ ನಾಡಿನಲ್ಲಿ ತ್ರಿವಳಿ ಬಾಂಬ್‌ಗಳ ಸ್ಫೋಟ

    ಸ್ಫೋಟದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಸಾವು

    ಬಾಂಬ್ ಸ್ಫೋಟ ಬೆನ್ನಲ್ಲೇ ದೇಶದಾದ್ಯಂತ ಹೈ-ಅಲರ್ಟ್

ದೇವರ ನಾಡಿನಲ್ಲಿ ತ್ರಿವಳಿ ಬಾಂಬ್‌ಗಳ ಸ್ಫೋಟವಾಗಿದೆ.. ಬ್ಯಾಕ್ ಟು ಬ್ಯಾಕ್​ ಬ್ಲಾಸ್ಟ್‌ನಿಂದ ಕೇರಳ ಜನ ಕಂಗಲಾಗಿಸಿದ್ದಾರೆ. ಸ್ಫೋಟ ಹಿಂದಿನ ಕರಾಳ ಸತ್ಯವನ್ನ ಕೆದಕಲು ತನಿಖಾ ತಂಡಗಳು ಫೀಲ್ಡ್​ಗಿಳಿದಿವೆ.. ಸ್ಫೋಟ ಬೆನ್ನಲ್ಲೇ ಘಟನೆಗೆ ನಾನೇ ಕಾರಣ ಅಂತ ವ್ಯಕ್ತಿಯೊಬ್ಬ ಹೊಣೆ ಹೊತ್ತು ಶರಣಾಗಿದ್ದಾನೆ.

ಕೇರಳದಲ್ಲಿ ಭೀಕರ ಬಾಂಬ್ ಸ್ಫೋಟ.. ಇಬ್ಬರು ಸಾವು

ನಿನ್ನೆ ನಡೆದ ಬಾಂಬ್ ಬ್ಲಾಸ್ಟ್ ಕೇರಳ ಜನತೆಯನ್ನ ಭಯಭೀತಗೊಳಿಸಿದೆ.. ಕೊಚ್ಚಿಯಿಂದ 10 ಕಿ.ಮೀ ದೂರದಲ್ಲಿರೋ ಕಲಮಸ್ಸೆರಿಯ ಜೆಹೋವಾಸ್​ ವಿಟ್ನಸ್​ ಕನ್ವೆನ್ಷನ್​ ಹಾಲ್​ಗೆ ಪ್ರಾರ್ಥನೆಗಾಗಿ 2000ಕ್ಕೂ ಅಧಿಕ ಕ್ರಿಶ್ಚಿಯನ್​ ಸಮುದಾಯದ ಜನರು ಆಗಮಿಸಿದ್ರು.. ಪ್ರಾರ್ಥನೆ ಆರಂಭವಾಗ್ತಿದ್ದಂತೆ ​ ಕನ್ವೆನ್ಷನ್ ಹಾಲ್​ನ ಮಧ್ಯ ಭಾಗದಲ್ಲಿ ಬಾಂಬ್​ವೊಂದು ಸ್ಫೋಟಗೊಂಡಿತ್ತು.. ಏನಾಗ್ತಿದೆ ಅಂತ ಜನರಿಗೆ ಅರಿವಾಗೋ ಅಷ್ಟರಲ್ಲೇ ಮತ್ತೆರಡು ಸ್ಫೋಟ ಸಂಭವಿಸಿದ್ವು.. ಸ್ಫೋಟದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಫೋಟಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಜಿಲ್ಲೆಯಲ್ಲಿ ಓರ್ವ ಶಂಕಿತ ವ್ಯಕ್ತಿ ಸ್ಫೋಟಕ್ಕೆ ನಾನೇ ಕಾರಣ ಎಂದು ಹೇಳಿಕೊಂಡು ಕೊಡಕರ ಪೊಲೀಸ್ ಠಾಣೆಯಲ್ಲಿ ಸೆರೆಂಡರ್​ ಆಗಿದ್ದಾನೆ. ಶರಣಾದ ವ್ಯಕ್ತಿಯನ್ನು 44 ವರ್ಷದ ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದೆ. ಈತ ಕ್ರಿಶ್ಚಿಯನ್ ಧಾರ್ಮಿಕ ಗುಂಪಿನ ಅನುಯಾಯಿ ಎಂದು ಹೇಳಿಕೊಂಡಿದ್ದಾನೆ. ಡೊಮಿನಿಕ್ ಮಾರ್ಟಿನ್ ಸ್ಫೋಟದ ಹೊಣೆ ಹೊತ್ತುಕೊಂಡಿದ್ದು, ಸ್ಪೋಟಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯಗಳನ್ನ ಸಹ ನೀಡಿದ್ದಾನೆ ಅಂತ ತಿಳಿದುಬಂದಿದೆ.

ಯಾವುದೋ ಸಂಘಟನೆಯಲ್ಲಿ ಇದ್ದುಕೊಂಡು ಹೀಗೆಲ್ಲಾ ಮಾಡಿದ್ದೇನೆ.. 16 ವರ್ಷ ವಯಸ್ಸಿನಿಂದಲೂ ಈ ಸಂಘಟನೆಯ ಜೊತೆ ಇದ್ದೇನೆ. ಆದ್ರೆ, ಈ ಸಂಘಟನೆ ದೇಶದ್ರೋಹದ ಕಾರ್ಯಕ್ಕೆ ಕೈ ಹಾಕಿತ್ತು. ಹೀಗಾಗಿ ಬಾಂಬ್ ಬ್ಲಾಸ್ಟ್ ಮಾಡಿದ್ದೇನೆ ಅಂತ ಇಡೀ ಪ್ರಕರಣವನ್ನ ತನ್ನ ಮೇಲೆ ಹಾಕಿಕೊಂಡಿದ್ದಾನೆ.

ಆರೋಪಿ ಡೊಮಿನಿಕ್ ಮಾರ್ಟಿನ್ ಜೆಹೊವಾಹ್ ವಿಟ್ನೆಸಸ್ ಗುಂಪಿನ ಸದಸ್ಯ ಎಂದು ತಿಳಿದು ಬಂದಿದೆ. ಈತ ತನ್ನದೇ ಸಮುದಾಯದ ಜೆಹೊವಾಹ್ ವಿಟ್ನೆಸಸ್ ಕೇಂದ್ರದ ಪ್ರಾರ್ಥನಾ ಮಂದಿರಕ್ಕೆ ಟಿಫಿನ್ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕ ಇಟ್ಟು ಬಂದಿದ್ದಾಗಿ ಹೇಳಿಕೊಂಡಿದ್ದಾನೆ. ಆರೋಪಿ ಡೊಮಿನಿಕ್ ಮಾರ್ಟೀನ್ ತನ್ನ ಕೃತ್ಯವನ್ನು ಸಾಬೀತುಪಡಿಸಲು ಪೊಲೀಸರಿಗೆ ಸಾಕ್ಷ್ಯವನ್ನೂ ಕೊಟ್ಟಿದ್ದಾನೆ.

ಒಟ್ಟಾರೆ, ಕೇರಳದಲ್ಲಿ ನಡೆದಿರೋ ಬಾಂಬ್ ಬ್ಲಾಸ್ಟ್‌ ದೇಶದಲ್ಲಿ ಆತಂಕವನ್ನ ಸೃಷ್ಟಿಮಾಡಿದೆ. ಜೊತೆಗೆ ದೇಶದ ಪ್ರಮುಖ ಸ್ಥಳಗಲ್ಲಿ ಹೈ-ಅಲರ್ಟ್‌ನೂ ಘೋಷಿಸಲಾಗಿದೆ. ಅದೇನೆ ಇರ್ಲಿ, ಶಂಕಿತ ಆರೋಪಿಯೇನು ನಾನೇ ಬಾಂಬ್ ಬ್ಲಾಸ್ಟ್‌ನ ರೂವಾರಿ ಎಂದು ಶರಣಾಗತಿ ಆಗಿದ್ದಾನೆ. ಆತನಿಗೆ ಬಾಂಬ್ ಸಿಕ್ಕಿದ್ಹೇಗೆ? ಆತನ ಹಿಂದೆ ಕಾಣದ ಕೈಗಳ ಕೈವಾಡವಿದ್ಯಾ ಅಂತ ತನಿಖೆ ಬಳಿಕ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಕೇರಳ ಬಾಂಬ್ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾದ ವ್ಯಕ್ತಿ.. ಯಾರಿವನು..?

https://newsfirstlive.com/wp-content/uploads/2023/10/KERAL.jpg

Load More