newsfirstkannada.com

ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಕೇರಳದಲ್ಲಿ ವರುಣಾರ್ಭಟ.. ಇಂದು ಭರ್ಜರಿ ಮಳೆ, ಹಲವು ಜಿಲ್ಲೆಗೆ ರೆಡ್ ಅಲರ್ಟ್​..!

Share :

06-07-2023

    ಹಿಮಾಚಲ ಪ್ರದೇಶದಲ್ಲಿ ನದಿ ನೀರಲ್ಲಿ ಕೊಚ್ಚಿ ಹೋದ ಕಾರು

    ಕೇರಳದಲ್ಲಿ ನೀರಲ್ಲಿ ಸಿಲುಕಿದವರ ರಕ್ಷಣೆ, ಮುಳುಗಿದ ಮನೆ

    ಮಳೆ ಸೃಷ್ಟಿಸಿದ ಅವಾಂತರ.. ಉತ್ತರ ಭಾರತದ ಜನರು ತತ್ತರ

ದೇಶದಲ್ಲಿ ಲೇಟ್‌ ಆಗಿ ಎಂಟ್ರಿ ಕೊಟ್ಟಿರುವ ಮಳೆರಾಯ ಈಗ ಲೇಟೆಸ್ಟ್‌ ಆಗಿ ಆರ್ಭಟಿಸುತ್ತಿದ್ದಾನೆ. ಉತ್ತರ ಭಾರತದಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಉತ್ತರಾಖಂಡ್‌ನಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಇತ್ತ ದೇವರ ಸ್ವಂತ ನಾಡಿನಲ್ಲೂ ವರುಣ ಬಿರುಸುಗೊಂಡಿದ್ದಾನೆ.

ಉತ್ತರಾಖಂಡ್‌ನಲ್ಲಿ ವರುಣಾರ್ಭಟ.. ಕೆರೆಯಂತಾದ ರಸ್ತೆಗಳು

ಉತ್ತರಾಖಂಡ್‌ನಲ್ಲಿ ಮಳೆರಾಯನ ಆರ್ಭಟನ ಮುಂದುವರಿದಿದೆ. ಅದರಲ್ಲೂ ಡೆಹರಾಡೂನ್‌ನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಡೆಹರಾಡೂನ್‌ನಲ್ಲಿ 114 ಮಿಲಿಮೀಟರ್ ಮಳೆಯಾಗಿದ್ದು ರಾಜಧಾನಿ ಡೆಹ್ರಾಡೂನ್‌ನ ರಸ್ತೆಗಳೆಲ್ಲ ಕೆರೆಯಂತಾಗಿವೆ. ಕೆರೆಯಂತಾಗಿರುವ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ.

ಡೆಹರಾಡೂನ್‌ನಲ್ಲಿ ಮೊಣಕಾಲುವರೆಗೂ ಹರಿಯೋ ನೀರಲ್ಲಿ ಬೈಕ್‌ ಸವಾರನೊಬ್ಬ ಸಿಲುಕಿಕೊಂಡಿದ್ದ. ಅಲ್ಲದೇ, ನೀರಿನಿಂದ ಬೈಕ್‌ನ ಹೊರತರಲು ಹರಸಾಹಸ ಪಟ್ಟು ಕೊನೆಗೆ ತನ್ನ ಬೈಕ್‌ನ ನೀರಿನಿಂದ ಹೊರ ತರಲಾಗದೇ ಪರದಾಡಿದನು. ರಸ್ತೆಯಲ್ಲಿ ನಿಂತ ನೀರಲ್ಲಿ ಕಾರುಗಳು ತೇಲಾಡುತ್ತಿದ್ದವು. ಇವತ್ತು ವರುಣನ ಆಟಾಟೋಪ ಮುಂದುವರಿಯುವ ಮುನ್ಸೂಚನೆ ಇದೆ. ಹೀಗಾಗಿ ಡೆಹ್ರಾಡೂನ್ ಸೇರಿ ತೆಹ್ರಿ ಮತ್ತು ಪೌರಿ ಜಿಲ್ಲೆಗಳಲ್ಲಿ ಇವತ್ತು ಹವಾಮಾನ ಇಲಾಖೆ ಆರೆಂಜ್ ಅಲರ್ಟ್‌ ಘೋಷಿಸಿದೆ.

ಹಿಮಾಚಲ ಪ್ರದೇಶದಲ್ಲೂ ಮಳೆರಾಯನ ಆರ್ಭಟ ಮುಂದುವರಿದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣಧಾರೆ ಸುರಿಯುತ್ತಿದೆ. ಹೀಗಾಗಿ ಹರೋಲಿ ಜಿಲ್ಲೆಯ ಉನಾಸ್‌ ಬಳಿ ಸ್ವಾನ್ ರಿವರ್ ಭೋರ್ಗರೆದು ಹರಿಯುತ್ತಿದೆ. ಸೇತುವೆಯ ಮೇಲೂ ನದಿಯ ನೀರು ರಭಸವಾಗಿ ಹರಿಯುತ್ತಿದೆ. ಹೀಗೆ ಹರಿಯುತ್ತಿರೋ ನೀರಲ್ಲೇ ಕಾರೊಂದು ಸೇತುವೆ ದಾಟಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದೆ. ಮಳೆ ನೀರಿನಿಂದ ಹಲವು ಮನೆಗಳು ಜಲಾವೃತವಾಗಿವೆ.

ಕೇರಳದಲ್ಲಿ ಮಳೆಯಬ್ಬರ.. 10 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ದೇವರಸ್ವಂತ ನಾಡು ಕೇರಳದಲ್ಲಿ ಮಳೆಯ ಆರ್ಭಟ ಮುಂದುವರಿದೆ. ಹಲವು ಜಿಲ್ಲೆಗಳಲ್ಲಿ ಮಳೆ. ಜನಜೀವನ ಅಸ್ತವ್ಯಸ್ಥವಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ಇದೇ ವೇಳೆ ಜನರು ನೀರಿನ ಮಧ್ಯೆಯೇ ಸಿಲುಕಿ ಪರದಾಡುತ್ತಿದ್ರು. ಈ ವೇಳೆ ನೀರಲ್ಲಿ ಸಿಲುಕಿದ್ದವರನ್ನ ಸ್ಥಳೀಯರು ರಕ್ಷಿಸಿದ್ದಾರೆ.

ಈಗಾಗಲೇ ಮಳೆರಾಯ ಕೇರಳದಲ್ಲಿ ನಾಲ್ವರನ್ನ ಬಲಿ ಪಡೆದಿದ್ದಾನೆ. ಅಲ್ಲದೇ ಇವತ್ತು ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಕೇರಳದ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ 10 ಜಿಲ್ಲೆಗಳಲ್ಲಿ ಶಾಲಾ, ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ.

ದೇಶದಲ್ಲಿ ಲೇಟ್‌ ಆಗಿ ಎಂಟ್ರಿ ಕೊಟ್ಟಿರೋ ವರುಣದೇವ ಸದ್ಯ ಎಲ್ಲೆಲ್ಲೂ ಆಟಾಟೋಪ ಶುರುಮಾಡಿಕೊಂಡಿದ್ದಾನೆ. ಉತ್ತರಭಾರತ, ದಕ್ಷಿಣ ಭಾರತ ಎನ್ನದೇ ಎಲ್ಲೆಲ್ಲೂ ಧೋ ಅಂತಾ ಸುರಿಯುತ್ತಿದ್ದಾನೆ. ಕೆಲವೆಡೆ ಅವಾಂತರಗಳನ್ನೂ ಸೃಷ್ಟಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಕೇರಳದಲ್ಲಿ ವರುಣಾರ್ಭಟ.. ಇಂದು ಭರ್ಜರಿ ಮಳೆ, ಹಲವು ಜಿಲ್ಲೆಗೆ ರೆಡ್ ಅಲರ್ಟ್​..!

https://newsfirstlive.com/wp-content/uploads/2023/07/RAIN_UPDATE-1.jpg

Load More