/newsfirstlive-kannada/media/post_attachments/wp-content/uploads/2024/08/KERALA-7.jpg)
ಮಳೆನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ, ದೇವರನಾಡಲ್ಲಿ ಭೂಕುಸಿತ ಸೃಷ್ಟಿಸಿರುವ ಸಾವಿನ ಆರ್ತನಾದಕ್ಕೆ ಕೊನೆಯೇ ಇಲ್ಲವಾಗಿದೆ. ವಯನಾಡಿನ ಗುಡ್ಡ ಕುಸಿತದ ಸ್ಥಳಕ್ಕೆ ಕ್ಷಣ ಕ್ಷಣಕ್ಕೂ ಮರಮೃದಂಗ ಹೆಚ್ಚಾಗುತ್ತಿದೆ. ಇದರ ನಡುವೆಯೇ ಗುರುತು ಸಿಗದ ಮೃತಗಳ ಅಂತ್ಯಸಂಸ್ಕಾರವು ನೆರವೇರಿದೆ.
ಕೇರಳದಲ್ಲಿ ಘನಘೋರ ದುರಂತ ನಡೆದು ಆರು ದಿನಗಳು ಕಳೆದಿವೆ. ಇಷ್ಟಾದ್ರೂ ಅಲ್ಲಿ ನರಕಸದೃಶ್ಯವೇ ಕಾಣ್ತಿದೆ. ಕಲ್ಲುಬಂಡೆ, ಕೆಸರಿನ ಮಧ್ಯೆ, ಮರದ ಬುಡಗಳ ಕೆಳಗೆ ಎಲ್ಲೆಲ್ಲೂ ಶವಗಳೇ ಕಾಣ್ತಿವೆ. ಸಾವಿನ ಎದುರು ಹೋರಾಡಿ ಬದುಕಿ ಬಂದವರ ಮುಖದಲ್ಲಿ ಕರಾಳತೆಯ ಕರಿಛಾಯೆ ಇನ್ನೂ ಆವರಿಸಿದೆ. ಇದರ ನಡುವೆಯೇ ಗುರುತು ಸಿಗದ ಮೃತಗಳ ಅಂತ್ಯಸಂಸ್ಕಾರವು ನೆರವೇರಿದೆ.
ಇದನ್ನೂ ಓದಿ:ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!
/newsfirstlive-kannada/media/post_attachments/wp-content/uploads/2024/08/KERALA-6.jpg)
ಮೇಪಾಡಿಯ ಪುತ್ತುಮಲ ಎಂಬಲ್ಲಿ ಗುರುತು ಸಿಗದ ಮೃತ ದೇಹಗಳ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ನೆರವೇರಿಸಿದೆ. ಕಳೆದ ರಾತ್ರಿ 30 ಮೃತ ದೇಹಗಳ ಪೈಕಿ 8 ಮೃತಗಳ ಸಂಸ್ಕಾರ ನಡೆಸಲಾಗಿದೆ. ಸರ್ವ ಧರ್ಮ ಸಂಪ್ರದಾಯದ ವಿಧಿವಿಧಾನದ ಮೂಲಕ ಅಂತ್ಯಕ್ರಿಯೆ ಮಾಡಲಾಯ್ತು. ಇನ್ನು ಉಳಿದ ಮೃತದೇಹಗಳ ಅಂತ್ಯಕ್ರಿಯೆಯನ್ನು ಇವತ್ತು ನೆರವೇರಲಿದೆ.
ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 369ಕ್ಕೆ ಏರಿಕೆ
ಗುಡ್ಡ ಕುಸಿತದಿಂದ ಸರ್ವನಾಶವಾಗಿರುವ ನಾಲ್ಕು ಗ್ರಾಮಗಳಲ್ಲಿ ಕಳೆದ 6 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ವಯನಾಡು ಜನರ ಜೀವನಾಡಿ ಎನಿಸಿರುವ ಚಾಲಿಯಾರ್ ನದಿಯಲ್ಲಿ ಇನ್ನೂ ಮೃತದೇಹಗಳು ತೇಲಿಬರುತ್ತಿವೆ. ನದಿಯು ಈಗ ದುಃಖದ ಸಾಗರವಾಗಿ ಮಾರ್ಪಟ್ಟಿದೆ. 6ನೇ ದಿನದ ಕಾರ್ಯಾಚರಣೆ ವೇಳೆ ಚಾಲಿಯಾರ್​ ನದಿಯಲ್ಲಿ ಮತ್ತೆ 18 ಶವಗಳು ಸಿಕ್ಕಿದ್ದು ಸಾವಿನ ಸಂಖ್ಯೆ 369ಕ್ಕೆ ಏರಿಕೆಯಾಗಿದೆ. ಮುಂಡಕೈ ಪ್ರದೇಶದಲ್ಲಿ ಇನ್ನೂ 64 ಜನರು ನಾಪತ್ತೆ ಆಗಿದ್ದಾರೆ. ಸದ್ಯ ನಾಪತ್ತೆ ಆಗಿರುವವರಿಗಾಗಿ ಇವತ್ತು ಕೂಡ ಶೋಧ ಕಾರ್ಯ ನಡೆಯಲಿದೆ. 7ನೇ ದಿನದ ಶೋಧ ಕಾರ್ಯಕ್ಕೆ ರಕ್ಷಣಾ ಪಡೆಗಳು ಸಜ್ಜಾಗಿವೆ.
ಯಜಮಾನಿ ಕಣ್ಣಿಗೆ ಕಾಣ್ತಿದ್ದಂತೆ ಓಡೋಡಿ ಬಂದ ಶ್ವಾನ
ಚೂರಲ್ ಮಲದಲ್ಲಿ ಗುಡ್ಡ ಕುಸಿತ ಹಿನ್ನಲೆ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಮೂಕಪ್ರಾಣಿಗೆ ಇದರ ಬಗ್ಗೆ ಏನು ಗೊತ್ತು ಹೇಳಿ.. ಕಳೆದ 6 ದಿನಗಳಿಂದ ತನ್ನನ್ನು ಸಾಕಿದವರಿಗಾಗಿ ಹುಡುಕುತ್ತಾ.. ಕಾಯುತ್ತ ಈ ಶ್ವಾನ ಅಲೆದಾಡುತ್ತಿತ್ತು.. ಕುಟುಂಬಸ್ಥರು ಕಾಳಜಿ ಕೇಂದ್ರದಿಂದ ತಾವಿದ್ದ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಒಡತಿಯನ್ನು ನೋಡಿದ ಶ್ವಾನ ಓಡೋಡಿ ಬಂದಿದ್ದು, ಇಷ್ಟು ದಿನ ನನ್ನ ಬಿಟ್ಟು ಎಲ್ಲಿ ಹೋಗಿದ್ದೆ ಎಂದು ಅಪ್ಪಿಕೊಂಡಿದೆ. ಈ ವೇಳೆ ಶ್ವಾನ ಹಾಗೂ ಒಡತಿ ಕಣ್ಣೀರು ಹಾಕಿದ ಘಟನೆ ಮನಕಲಕುವಂತಿತ್ತು.
/newsfirstlive-kannada/media/post_attachments/wp-content/uploads/2024/08/KERALA_RAIN_2.jpg)
ವಯನಾಡ್ ಭೂಕುಸಿತಕ್ಕೆ ಮಿಡಿದ ಸಿನಿಮಾ ರಂಗ
ವಯನಾಡ್​ ದುರಂತದಲ್ಲಿ ಪ್ರಾಣ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಹಲವು ನಿರ್ಗತಿಕರಾಗಿದ್ದಾರೆ. ಸಂಕಷ್ಟದಲ್ಲಿರುವ ಪರಿಸ್ಥಿತಿ ಕಂಡು ದಕ್ಷಿಣ ಭಾರತದ ಸಿನಿಮಾ ರಂಗ ಮಿಡಿದಿದೆ. ಸಂತ್ರಸ್ತರಿಗೆ ನೆರವಾಗಲು ತಮ್ಮ ಕೈಲಾದಷ್ಟು ಪರಿಹಾರ ಹಣವನ್ನು ಘೋಷಿಸಿದ್ದಾರೆ. ತೆಲುಗು ಚಿತ್ರನಟ ಚಿರಂಜೀವಿ ಮತ್ತು ಅವರ ಪುತ್ರ ರಾಮ್​​ಚರಣ್​​ ಸೇರಿ 1 ಕೋಟಿ ರೂಪಾಯಿ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇವರಷ್ಟೇ ಅಲ್ಲ. ಇನ್ನು ಹಲವು ದಾನಿಗಳು ತಮ್ಮ ಕೈಲಾದ ಸಹಾವನ್ನು ಮಾಡ್ತಿದ್ದಾರೆ.
ಒಟ್ಟಾರೆ.. ಪ್ರವಾಸಿಗರ ಸ್ವರ್ಗ ವಯನಾಡಿನಲ್ಲಿ ಭೂಕುಸಿತದ ಮರಣಮೃದಂಗ ಮುಂದುರಿದಿದೆ. ದೇವರನಾಡು ಸಾವಿನಕೂಪವಾಗಿದ್ದು, ತಮ್ಮವರನ್ನ ಕಳೆದುಕೊಂಡವರ ಸಂತ್ರಸ್ಥರ ರೋದನೆ ಹೇಳತೀರದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us