/newsfirstlive-kannada/media/post_attachments/wp-content/uploads/2024/08/KERALA-6.jpg)
ದೇವರುನಾಡು ಅಂತಲೇ ಪ್ರಸಿದ್ಧಿಯಾಗಿರುವ ಕೇರಳ ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಸುಂದರವಾದ ತಾಣವೀಗ ಸ್ಮಶಾನದಂತಾಗಿದೆ. ಕ್ಷಣಕ್ಷಣಕ್ಕೂ ಸಾವು-ನೋವು ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದೆ.
ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 357ಕ್ಕೆ ಏರಿಕೆ
ವಿನಾಶಕಾರಿ ಭೂಕುಸಿತಕ್ಕೆ ತುತ್ತಾಗಿರುವ ವಯನಾಡ್​ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ. ಅವಶೇಷಗಳಡಿ ಸಿಲುಕಿದ ಜನರನ್ನು ರಕ್ಷಣಾ ಪಡೆಗಳು ಆಧುನಿಕ ತಂತ್ರಜ್ಞಾನ ಬಳಸಿ ಪತ್ತೆ ಮಾಡುತ್ತಿವೆ. ಅವಶೇಷಗಳಡಿ ಸಿಲುಕಿದವರ ಉಸಿರಾಟವನ್ನು ರಡಾರ್​​ಗಳು ಪತ್ತೆ ಮಾಡಿವೆ. ಆದರೆ, ಅದು ಮಾನವರೋ ಅಥವಾ ಪ್ರಾಣಿಯೋ ಎಂಬುದು ತಿಳಿದುಬಂದಿಲ್ಲ. 5 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದರೂ, ಇನ್ನೂ ನೂರಕ್ಕೂ ಹೆಚ್ಚು ಮಂದಿ ನಾಪತ್ತೆ ಆಗಿದ್ದಾರೆ. ಇದರ ನಡುವೆ ಕೇರಳ ಸಿಎಂ ಪಿಣರಾಯ್​, ರಕ್ಷಣಾ ಕಾರ್ಯ ಅಂತಿಮ ಹಂತ ತಲುಪಿದೆ ಎಂದಿದ್ದಾರೆ. ಇದುವರೆಗೆ 357 ಜನರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
/newsfirstlive-kannada/media/post_attachments/wp-content/uploads/2024/08/KERALA_RAIN_2.jpg)
ಜಲಪಾತದ ಬಳಿ ಸಿಲುಕಿ ರಕ್ಷಣಾ ಸಿಬ್ಬಂದಿ ಪರದಾಟ
ಭೂಕುಸಿತದಲ್ಲಿ ಕೊಚ್ಚಿ ಹೋಗಿ, ಕಾಡಿನಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲಾಗ್ತಿದೆ. ಹೀಗೆ ಮುಂಡಕೈನಿಂದ ಸೂಜಿಪಾರಾವರೆಗೂ ವೈಮಾನಿಕ ಸಮೀಕ್ಷೆ ಮಾಡುವಾಗ ಫಾಲ್ಸ್ ಬಳಿ ಮೂವರು ಸಿಲುಕಿಕೊಂಡಿರುವುದು ಪತ್ತೆ ಆಗಿದೆ. ಕೂಡಲೇ ಇಂಡಿಯನ್ ಕೋಸ್ಟ್ ಗಾರ್ಡ್ ಹೆಲಿಕಾಫ್ಟರ್​ ದುರ್ಗಮ ಜಲಪಾತದ ಬಳಿ ತೆರಳಿ, ಮೂವರನ್ನು ರಕ್ಷಣೆ ಮಾಡಿದ್ದು, ಈ ದೃಶ್ಯ ಬಲು ರೋಚಕವಾಗಿದೆ.
ಬದುಕು ಕಟ್ಟಿಕೊಳ್ಳಲು ಬಂದವನು ಭೂಕುಸಿತದಲ್ಲಿ ಕಣ್ಮರೆ
ವಯನಾಡು ಭೂಕುಸಿತದ ದುರಂತದಲ್ಲಿ ಸಾವು ನೋವಿನ ಕಥೆ ಒಂದೆಡೆಯಾದ್ರೆ, ಉದ್ಯೋಗ ಹರಿಸಿ ವಯನಾಡಿಗೆ ಬಂದ ಹೊರರಾಜ್ಯದವರ ಕಣ್ಣೀರ ಕಥೆ ಮತ್ತೊಂದೆಡೆ..
ಬದುಕು ಕಸಿದ ಭೂಕುಸಿತ
ಬಿಹಾರ ಮೂಲದ ರೆಂಜಿತ್​ ಎಂಬ ಯುವಕನಿಗೆ ಮದುವೆ ಫಿಕ್ಸ್​ ಆಗಿತ್ತು. ಹೀಗಾಗಿ ಮದುವೆಗೆ ಹಣಹೊಂದಿಸಲು ಉದ್ಯೋಗರ ಅರಸಿ ವಯನಾಡಿಗೆ ಬಂದಿದ್ದ. ದುರಂತ ಏನಂದ್ರೆ, ರೆಂಜಿತ್​ ಕೂಡ ಭೂಕುಸಿತದಲ್ಲಿ ಕಣ್ಮರೆಯಾಗಿದ್ದಾನೆ. ಬರುವ ಅಕ್ಟೋಬರ್​ನಲ್ಲಿ ರೆಂಜಿತ್​ನ ಮದುವೆ ನಡೆಯಬೇಕಿತ್ತು. ಇದೀಗ ರೆಂಜಿತ್ ಅವರ​ ಸಹೋದರ ಸಂಬಂಧಿ ವಯನಾಡಿಗೆ ಆಗಮಿಸಿದ್ದು, ರೆಂಜಿತ್​ನಗಾಗಿ ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ:ಧೋನಿ ಉಳಿಸಿಕೊಳ್ಳಲು BCCI ಮುಂದೆ ಹಳೇ ಅಸ್ತ್ರ ಇಟ್ಟ CSK ; ಕಾವ್ಯ ಮಾರನ್ ತೀವ್ರ ವಿರೋಧ..!
/newsfirstlive-kannada/media/post_attachments/wp-content/uploads/2024/07/KERALA_2.jpg)
ರಕ್ಷಣಾ ಕಾರ್ಯಾದಲ್ಲಿ ಸೇನಾ ಶ್ವಾನಗಳ ಕಾರ್ಯವೂ ಶ್ಲಾಘನೀಯ
ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನೆಯ ಶ್ವಾನಗಳು ಕೂಡ ಸಾಥ್​ ನೀಡಿದೆ. ಮಾಯ, ಮುರ್ಫಿ, ಮ್ಯಾಗಿ, ಸಾರಾ ಎಂಬ ಶ್ವಾನಗಳು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡು ಮಣ್ಣನಡಿ ಸಿಲುಕಿರುವವರನ್ನು ಪತ್ತೆ ಮಾಡ್ತಿವೆ. ಕಷ್ಟದಲ್ಲಿರುವ ಸಂತ್ರಸ್ತರಿಗಾಗಿ ಇಡೀ ದೇಶವೇ ನೆರವಿನ ಹಸ್ತಚಾಚುತ್ತಿದೆ. ಹಲವು ದಾನಿಗಳು ನಿರಾಶ್ರಿತರ ಸಹಾಯಕ್ಕಾಗಿ ಕೇರಳ ಸಿಎಂ ರಿಲೀಫ್​ ಫಂಡ್​ಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಕರ್ನಾಟಕ ಸರ್ಕಾರವು ಕೂಡ ನಿರಾಶ್ರಿತರಿಗಾಗಿ ನೂರು ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ.
ಇದನ್ನೂ ಓದಿ:ಒಂದೇ ವರ್ಷಕ್ಕೆ ಬೇಡವಾದ ಪಾಂಡ್ಯ.. ಮುಂಬೈ ಇಂಡಿಯನ್ಸ್​ನಿಂದ ಶಾಕಿಂಗ್ ನಿರ್ಧಾರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us