newsfirstkannada.com

ಚಿರು ಆಯ್ತು, ಅಪ್ಪು ಆಯ್ತು.. ಈಗ ಸ್ಪಂದನಾ..; ಕೀಟೋ ಡಯಟ್​​ ಮಾಡೋ ಮುನ್ನ ಎಚ್ಚರ!

Share :

09-08-2023

  ಫಿಟ್‌ನೆಸ್‌ಗಾಗಿ ಯುವಜನತೆ ‘ಕೀಟೋ’ ಡಯಟ್

  ಕೀಟೋ‌ ಡಯಟ್ ಆಹಾರ.. ಹೃದಯಕ್ಕೆ ಹಾನಿಕರ!

  ಕೀಟೋ ಪಾಲಿಸೋರು ಈ ಸ್ಟೋರಿ ಓದಲೇಬೇಕು

ಬೆಂಗಳೂರು: ಚಿರಂಜೀವಿ ಸರ್ಜಾ ಆಯ್ತು.. ಪುನೀತ್​ ರಾಜ್​ ಕುಮಾರ್​ ಆಯ್ತು.. ಈಗ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ.. ಈ ಮೂವರು ಅಂತಲ್ಲ. ಹೀಗೆ ವಯಸ್ಸಲ್ಲದ ವಯಸ್ಸಲ್ಲಿ ನಮ್ಮನ್ನು ಅಗಲಿ ಹೋದವರ ಸಂಖ್ಯೆ ಎಷ್ಟೋ..! ಇದಕ್ಕೆ ಕಾರಣ ಏನು ಅಂತ ಹುಡುಕ್ತಾ ಹೋದ್ರೆ ನೂರೆಂಟು.

ಕೀಟೋ ಡಯಟ್​​ ಫುಡ್. ಈ ಬಗ್ಗೆ ಹಳ್ಳಿ ಮಂದಿಗೆ ಅಷ್ಟಾಗಿ ಗೊತ್ತಿಲ್ಲದೇ ಇರಬಹುದು. ಆದ್ರೆ, ಸಿಟಿ ಮಂದಿಗೆ ಗೊತ್ತೇ ಇರತ್ತೆ. ನೀವೇನಾದ್ರೂ ‘ಕೀಟೋ’ನಲ್ಲಿದ್ರೆ ಈ ಸ್ಟೋರಿ ನೋಡಲೇಬೇಕು. ಈ ಕೀಟೋ ಡಯಟ್​ನಿಂದ ಹೆಚ್ಚು ಹೃದಯಾಘಾತ ಸಾಧ್ಯತೆ ಇದೆಯಂತೆ. ಹೆಚ್ಚು ಕೀಟೋ‌ ಡಯಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಿದ್ದಾರೆ ಹೃದ್ರೋಗ ತಜ್ಞರು.

‘ಕೀಟೋ ಡಯಟ್’ ಎಂದರೇನು?

ದೇಹಕ್ಕೆ ಪ್ರೋಟಿನ್, ಕೊಬ್ಬಿನ ಅಂಶ ಕೊಡುವ ಆಹಾರ ಪದ್ಧತಿಯನ್ನ ಕೀಟೋ ಡಯಟ್ ಅಂತೀವಿ. ಇದರಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಇರಲಿದೆ. ಕೀಟೋ ಫುಡ್​ನಲ್ಲಿ ಶೇಕಡಾ 70 ರಷ್ಟು ಕೊಬ್ಬು, ಶೇಕಡಾ 25 ರಷ್ಟು ಪ್ರೋಟಿನ್ ಇರಲಿದೆ. ಶೇಕಡಾ 5 ರಷ್ಟು ಮಾತ್ರಾ ಕಾರ್ಬೋಹೈಡ್ರೇಟ್ ಅಂಶವನ್ನ ಇದು ಹೊಂದಿರುತ್ತೆ. ಇನ್ನು ಈ ಡಯಟ್​​ನಲ್ಲಿರುವವರು ಮಾಂಸ, ಮೊಟ್ಟೆ, ಬಾದಾಮಿ, ಚೀಸ್, ಕ್ರೀಮ್, ಬೆಣ್ಣೆ, ಪನ್ನೀರ್, ಸೇರಿದಂತೆ ಅನೇಕ‌ ಪ್ರೋಟಿನ್ ಸೇವನೆ ಮಾಡ್ತಾರೆ. ಆದ್ರೆ, ಅಕ್ಕಿ, ರಾಗಿ, ಮೈದಾ, ಓಟ್ಸ್​ನಂತಹ ಕಾರ್ಬೋಹೈಡ್ರೇಟ್​ ಇರೋದಿಲ್ಲ. ಇನ್ನುಬ್ರೆಡ್, ಕಾರ್ನ್, ಆಲೂಗಡ್ಡೆ, ಸೇಬು, ಬಾಳೆಹಣ್ಣು ಸೇವನೆಯನ್ನೂ ಮಾಡುವುದಿಲ್ಲ.

ಕೀಟೋ ಡಯಟ್ ತೂಕವನ್ನು ಅತಿ ಬೇಗ ಕಡಿಮೆ ಮಾಡೋದ್ರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಅನ್ನೋ ಕಾರಣಕ್ಕೇನೆ ಜನ ಇದ್ರ ಮೊರೆ ಹೋಗ್ತಾರೆ. ಆದ್ರೆ, ಕಡಿಮೆ ಕಾರ್ಬೋ ತಿಂದಾಗ ಲಿವರ್‌ನಲ್ಲಿ ಕೆಟೋನ್ಸ್ ಉತ್ಪತ್ತಿಯಾಗುತ್ತೆ. ಇನ್ನು, ಅತಿಯಾದ ಪ್ರೋಟಿನ್‌ ಫುಡ್‌ಗಳಿಂದ ರಕ್ತನಾಳಗಳು ಡ್ಯಾಮೇಜ್ ಆಗುತ್ತೆ. ಇದೇ ಹೃದಯಾಘಾತಕ್ಕೆ ಕಾರಣ ಅಂತಿದ್ದಾರೆ ವೈದ್ಯರು. ಹೀಗಾಗಿ ಈ ಬಗ್ಗೆ ಇರಲಿ ನಿಮ್ಮ ಗಮನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿರು ಆಯ್ತು, ಅಪ್ಪು ಆಯ್ತು.. ಈಗ ಸ್ಪಂದನಾ..; ಕೀಟೋ ಡಯಟ್​​ ಮಾಡೋ ಮುನ್ನ ಎಚ್ಚರ!

https://newsfirstlive.com/wp-content/uploads/2023/08/Spandana-6.jpg

Load More