ಈ ಬಾರಿಯೂ ಕಪ್ ಗೆಲ್ಲದೇ ಫ್ಯಾನ್ಸ್ಗೆ ನಿರಾಸೆ
ಕಪ್ ಗೆಲ್ಲದಿದ್ದರು ಕೊಹ್ಲಿ ಆಟಕ್ಕೆ ಫ್ಯಾನ್ಸ್ ಫಿದಾ
ವಿರಾಟ್ಗೆ ಬೇರೆ ತಂಡ ಸೇರಲು ಸಲಹೆ
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಹೀನಾಯ ಸೋಲು ಕಂಡು ಟೂರ್ನಿಯಿಂದಲೇ ಹೊರಬಿದ್ದಿದೆ. ಈ ಬಾರಿಯೂ ಐಪಿಎಲ್ ಕಪ್ ಗೆಲ್ಲದೇ ಫ್ಯಾನ್ಸ್ಗೆ ನಿರಾಸೆ ಮೂಡಿಸಿದೆ. ಕೊನೇ ಪಂದ್ಯದಲ್ಲೇ ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕೆ ಇಳಿದಿತ್ತು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡರೂ ಕೊಹ್ಲಿ ಮಾತ್ರ ತನ್ನ ಆಟ ಆಡಿದರು.
ಹೀಗಿದ್ದರೂ ಆರ್ಸಿಬಿ ಸೋತು ಮನೆಗೆ ನಡೆದಿದೆ. ಟ್ರೋಫಿ ಗೆಲ್ಲದಿದ್ದರೂ ವಿರಾಟ್ ಕೊಹ್ಲಿ ಆಟ ಮಾತ್ರ ಈ ಬಾರಿಯೂ ಆರ್ಸಿಬಿ ಅಭಿಮಾನಿಗಳಿಗೆ ಹಿಡಿಸಿದೆ. ಕಳೆದ ಹದಿನೈದು ವರ್ಷಗಳಿಂದ ಐಪಿಎಲ್ ಆರಂಭದಿಂದಲೂ ಆರ್ಸಿಬಿ ತಂಡದಲೇ ಇರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಈ ಬಾರಿ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಆಡಿದ 14 ಪಂದ್ಯಗಳಲ್ಲಿ 2 ಶತಕ, 6 ಅರ್ಧ ಶತಕಗಳ ಜತೆಗೆ ಬರೋಬ್ಬರಿ 639 ರನ್ ಗಳಿಸಿದ್ರು. ಈ ಮೂಲಕ ಆರ್ಸಿಬಿ ಪರ ಅತೀ ಹೆಚ್ಚು ರನ್ ಗಳಿಸಿ 2ನೇ ಬ್ಯಾಟ್ಸ್ಮನ್ ವಿರಾಟ್ ಎನಿಸಿಕೊಂಡರು.
ಇನ್ನು, ಇದುವರೆಗೂ ಐಪಿಎಲ್ನಲ್ಲಿ ಕೊಹ್ಲಿ 7 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಗತ್ಯವಿರೋ ಪಂದ್ಯದಲ್ಲಿ ಎಂದು ಕೊಹ್ಲಿ ಕೈ ಕೊಟ್ಟಿಲ್ಲ. ಹೀಗಿದ್ದರೂ ಆರ್ಸಿಬಿ ಒಮ್ಮೆಯೂ ಕಪ್ ಗೆದ್ದಿಲ್ಲ. ಈ ಮಧ್ಯೆ ಸೋಲಿನ ನೋವಿನಲ್ಲಿರೋ ಕೊಹ್ಲಿಗೆ ಆರ್ಸಿಬಿ ಬಿಟ್ಟು ಬೇರೆ ತಂಡ ಸೇರಿಕೊಳ್ಳಿ ಎನ್ನುವ ಸಲಹೆಗಳು ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ದಿಗ್ಗಜ ಕ್ರಿಕೆಟರ್ ಕೆವಿನ್ ಪೀಟರ್ಸನ್ ವಿರಾಟ್ ಕೊಹ್ಲಿಗೆ ಕ್ಯಾಪಿಟಲ್ ಸಿಟಿಗೆ ಹೋಗಲು ಇದು ಸರಿಯಾದ ಸಮಯ ಎಂದಿದ್ದಾರೆ. ಈ ಮೂಲಕ ಕೊಹ್ಲಿ ರಾಷ್ಟ್ರ ರಾಜಧಾನಿ ದೆಹಲಿ ಪ್ರತಿನಿಧಿಸೋ ಡೆಲ್ಲಿ ಕ್ಯಾಪಿಟಲ್ಸ್ ಸೇರಿ ಎಂದು ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ