newsfirstkannada.com

ಸೋತ ಮೇಲೂ 300 ಮನೆ ಕಟ್ಟಿಸುತ್ತೇನೆ ಎಂದ ಕೆಜಿಎಫ್​​ ಬಾಬು.. ಕೈ ಮುಗಿದಿದ್ದು ಯಾರಿಗೆ..?

Share :

16-11-2023

    ಮಹಿಳೆಯರ ಮುಂದೆಯೇ ಕೈ ಮುಗಿದು ಕ್ಷಮೆ ಕೇಳಿದ ಕೆಜಿಎಫ್ ಬಾಬು

    300 ಮನೆಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ಮತ್ತೆ ಭರವಸೆ ಕೊಟ್ಟರು!

    ನನ್ನ ಬಗ್ಗೆ ಕೆಲವು ಹೆಂಗಸರು ಹಣ ತೆಗೆದುಕೊಂಡು ಸುಳ್ಳು ಹೇಳಿದ್ದಾರೆ

ಬೆಂಗಳೂರು: 300 ಮನೆಗಳನ್ನು ಕಟ್ಟಿಸಿಕೊಡುತ್ತೇನೆ. ಆದ್ರೂ ನನ್ನನ್ನು ದ್ರೋಹಿ ಎಂದು ಕರೆಯುತ್ತಿದ್ದಾರೆ. ಅದು ಎಷ್ಟು ಸರಿ ಎಂದು ಕೆ.ಜಿ.ಎಫ್ ಬಾಬು ಅಸಮಾಧಾನ ಹೊರ ಹಾಕಿದ್ದಾರೆ. ಚಿಕ್ಕಪೇಟೆಯಲ್ಲಿ 300 ಮನೆ ಕಟ್ಟಿಸುವುದಾಗಿ ಹೇಳಿ‌ ಮೋಸ ಮಾಡಿದ್ರಾ ಎಂಬ ಪ್ರಶ್ನೆಗೆ ಕೆಜಿಎಫ್ ಬಾಬು ಹೀಗೆ ಉತ್ತರ ಕೊಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, 300 ಮನೆಗಳನ್ನು ಕಟ್ಟಿಸಿಕೊಡುತ್ತೇನೆ. ಆದ್ರೂ ನನ್ನನ್ನು ದ್ರೋಹಿ ಎಂದು ಕರೆಯುತ್ತಿದ್ದಾರೆ. ಅದು ಎಷ್ಟು ಸರಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ನಾನು ಮನೆ ಕಟ್ಟಿಸಿ ಕೊಡಲು ತಡ ಮಾಡಿದಕ್ಕೆ ದೊಡ್ಡ ಕಾರಣವಿದೆ. ನನ್ನ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಅದಕ್ಕೆ ನಾನು ಮನೆ ಕಟ್ಟಿಸಿ ಕೊಡುವುದಕ್ಕೆ ತಡವಾಯ್ತು. ನಾನು ಕಾನೂನಿಗೆ ತಲೆಬಾಗಿ ಮನೆ ಕಟ್ಟಿಸಿಕೊಟ್ಟಿಲ್ಲ. ಮನೆ ಕಟ್ಟಿಸುವ ಹಣದ ಬಗ್ಗೆ ಟ್ಯಾಕ್ಸ್ ಕಟ್ಟಿದ್ದೀರಾ ಇಲ್ವಾ ಎಂಬ ಬಗ್ಗೆ ತನಿಖೆಯಾಗುತ್ತಿದೆ. ಈ ಬಗ್ಗೆ ನಾನು ಕಾನೂನಿನ ಜೊತೆಗೆ ಹೋರಾಟ ಮಾಡುತ್ತಿದ್ದೇನೆ. ನಾನು ಸೋತರು ಸಹ ನಾನು ಬಡವರಿಗೆ ಸಹಾಯ ಮಾಡುತ್ತೇನೆ.

ಹೀಗೆ ಮಾತನ್ನು ಮುಂದುವರೆಸಿದ ಅವರು, ದೀಪಾವಳಿ ದಿನ ಕೆಲ ಕಿಡಿಗೇಡಿಗಳು ಬೇಕೆಂದು ಪ್ರತಿಭಟನೆ ಮಾಡಿದ್ದರು. ಬುದ್ದಿ ಇಲ್ಲದೇ ಮಾಡಿರುವ ಕೆಲಸಕ್ಕೆ ನಾನು ತಲೆ ಕೇಡಿಸಿಕೊಳ್ಳಲ್ಲ. ನಾನು ಕೊಟ್ಟ ಮಾತಿನಂತೆ ನಾನು ಮನೆ ಕಟ್ಟಿಸಿ ಕೊಡುತ್ತೇನೆ. ಸ್ವಲ್ಪ ತಡ ಆಯ್ತು ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಬಗ್ಗೆ ಕೆಲ ಮಹಿಳೆಯರು ಹಣ ತೆಗೆದುಕೊಂಡು ಸುಳ್ಳು ಹೇಳಿದ್ದಾರೆ. ನನ್ನ ಹೆಸರು ಹೇಳಿ ತೇಜೋವಧೆ ಮಾಡಲಾಗುತ್ತಿದೆ. ಆದ್ರೆ ಕೆಲ ಕಿಡಿಗೇಡಿಗಳು ನನ್ನನ್ನ ದ್ರೋಹಿ ಎಂದು ನನ್ನ ಹೆಸರಿಗೆ ಕಪ್ಪು ಬಣ್ಣ ಹಚ್ಚುವ ಕೆಲಸ ಮಾಡಿದ್ದಾರೆ. ನಾನು ಇವತ್ತು ಆ ಮನೆಯವರನ್ನೇ ಕರೆಸಿದ್ದೇನೆ ಎನ್ನುತ್ತ ಕೆ.ಜಿ.ಎಫ್ ಬಾಬು ಕೈ ಮುಗಿದು ಕ್ಷಮೆ ಕೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋತ ಮೇಲೂ 300 ಮನೆ ಕಟ್ಟಿಸುತ್ತೇನೆ ಎಂದ ಕೆಜಿಎಫ್​​ ಬಾಬು.. ಕೈ ಮುಗಿದಿದ್ದು ಯಾರಿಗೆ..?

https://newsfirstlive.com/wp-content/uploads/2023/11/kgf-babu.jpg

Load More