newsfirstkannada.com

ಜಪಾನ್​​ನಲ್ಲೂ ರಿಲೀಸ್​ ಆಗ್ತಿದೆ ಕೆಜಿಎಫ್​ ಮೂವಿ; ಇಲ್ಲಿವೆ ಟಾಪ್ 5​​ ಸಿನಿಮಾ ಸುದ್ದಿಗಳು!

Share :

07-07-2023

    ಸುಳ್ಳು ಸುದ್ದಿಗೆ ತೆರೆ ಎಳೆದ ಟಾಲಿವುಡ್​ ಬ್ಯೂಟಿ ಕೃತಿ ಶೆಟ್ಟಿ!

    ಸಲಾರ್ ಚಿತ್ರದ ಟೀಸರ್​ಗೆ ಕಿಚ್ಚ ಸುದೀಪ್ ಭಾರೀ ಮೆಚ್ಚುಗೆ

    ‘ಆಚಾರ್ ಅಂಡ್’ ಕೋ ಸಿನಿಮಾದ ಟೀಸರ್ ಬಿಡುಗಡೆ..!

ಜಪಾನ್​ನಲ್ಲಿ ಕೆಜಿಎಫ್​​ ರಿಲೀಸ್

ರಾಕಿಂಗ್ ಸ್ಟಾರ್​ ಯಶ್​ ನಟನೆಯ ಕೆಜಿಎಫ್ ಸಿನಿಮಾ ಜಪಾನ್​ನಲ್ಲಿ ಬಿಡುಗಡೆಯಾಗುತ್ತಿದೆ. ಕಳೆದ ವರ್ಷ ಏಪ್ರಿಲ್ 14ಕ್ಕೆ ಪ್ಯಾನ್ ಇಂಡಿಯಾ ಸೇರಿ ಜಗತ್ತಿನ ಹಲವು ದೇಶಗಳಲ್ಲಿ ಕೆಜಿಎಫ್​ ಚಾಪ್ಟರ್ 2 ರಿಲೀಸ್ ಆಗಿತ್ತು. ಇದೀಗ ಒಂದೂವರೆ ವರ್ಷದ ನಂತರ ಜಪಾನ್​ನಲ್ಲಿ ಚಾಪ್ಟರ್ 1 ಹಾಗೂ ಚಾಪ್ಟರ್ 2 ಸಿನಿಮಾಗಳು ಜುಲೈ 14ರಂದು ತೆರೆಗೆ ಬರ್ತಿದೆ. ಈ ಹಿನ್ನೆಲೆ ಸ್ವತಃ ನಟ ಯಶ್​ ಜಪಾನ್ ಪ್ರಜೆಗಳಿಗೆ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೂ ಮುಂಚೆ ತ್ರಿಬಲ್ ಆರ್ ಚಿತ್ರವೂ ಜಪಾನ್​ನಲ್ಲಿ ಬಿಡುಗಡೆಯಾಗಿತ್ತು.

ಮಲೇಶಿಯಾಗೆ ಹೊರಟ ರಾಕಿಭಾಯ್​

ರಾಕಿಂಗ್ ಸ್ಟಾರ್ ಯಶ್​ ಮಲೇಶಿಯಾಗೆ ಹೊರಟಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಸ್ನೇಹಿತರ ಜೊತೆ ಸೇರಿ ಮಲೇಶಿಯಾ ಹಾರಿದ್ದಾರೆ. ಈ ಹಿನ್ನೆಲೆ ಯಶ್​ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಫೋಟೋ ಹಾಗೂ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಯಶ್​ ಫೋಟೋಸ್​ ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಸಲಾರ್ ಟೀಸರ್ ಮೆಚ್ಚಿದ ಸುದೀಪ್

ಸಲಾರ್ ಚಿತ್ರದ ಟೀಸರ್​ಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಯಾಗಿದ್ದ ಸಲಾರ್ ಟೀಸರ್​ ಸಖತ್ ಸದ್ದು ಮಾಡ್ತಿದೆ. ಈ ನಡುವೆ ಸುದೀಪ್ ಸಹ ಟ್ವೀಟ್​ ಮೂಲಕ ಶುಭಕೋರಿದ್ದಾರೆ. ಸಲಾರ್​ ಟೀಸರ್​ನಲ್ಲಿರುವ ಡೈಲಾಗ್ ಹಾಗೂ ಲಯನ್, ಚೀತಾ, ಟೈಗರ್ ಕಥೆಯ ಬಗ್ಗೆ ಮಾತಾಡಿರುವ ಸುದೀಪ್ ‘ನಿಜಕ್ಕೂ ಇದು ಅದ್ಭುತವಾದ ಎಂಟ್ರಿ’ ಅಂತ ಫುಲ್ ಮಾರ್ಕ್ಸ್​ ಕೊಟ್ಟಿದ್ದಾರೆ.

ತಮಿಳು ನಟನ ಬಗ್ಗೆ ಕೃತಿ ಶೆಟ್ಟಿ ಸ್ಪಷ್ಟನೆ

ಟಾಲಿವುಡ್​ ಬ್ಯೂಟಿ ಕೃತಿ ಶೆಟ್ಟಿಗೆ ತಮಿಳು ಸ್ಟಾರ್​ ನಟನ ಪುತ್ರ ಕಿರುಕುಳ ಕೊಡ್ತಿದ್ದಾನೆ ಎಂಬ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಖುದ್ದು ನಟಿಯೇ ಈ ವಿಷ್ಯದ ಬಗ್ಗೆ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಆದ್ರೀಗ ಈ ಸುದ್ದಿ ಬಗ್ಗೆ ಅಧಿಕೃತವಾಗಿ ಕೃತಿ ಶೆಟ್ಟಿ ರಿಯಾಕ್ಟ್​ ಮಾಡಿದ್ದು, ”ಇದು ಸುಳ್ಳು ಸುದ್ದಿ, ಆಧಾರ ರಹಿತ ಸುದ್ದಿ.. ಇಂಥ ಸುದ್ದಿಗಳನ್ನ ನೀವು ನಿರ್ಲಕ್ಷಿಸುತ್ತೀರಾ? ಅಂದುಕೊಂಡಿದ್ದೆ, ಆದ್ರೆ ಇದು ಗಂಭೀರವಾಯ್ತು. ದಯವಿಟ್ಟು ಇದನ್ನ ನಂಬಬೇಡಿ” ಅಂತ ಕ್ಲಾರಿಟಿ ಕೊಟ್ಟಿದ್ದಾರೆ.

ಆಚಾರ್ & ಕೋ ಟೀಸರ್

ಮಹಿಳಾ ತಂತ್ರಜ್ಞರು ಸೇರಿ ತಯಾರಿಸುತ್ತಿರೋ ಆಚಾರ್ ಅಂಡ್ ಕೋ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಗಮನ ಸೆಳೆಯುತ್ತಿದೆ. 1971ರ ಬೆಂಗಳೂರಿನ ಕೌಟುಂಬಿಕ ಅಚಾರಗಳ ಕುರಿತಾದ ಕಥಾಹಂದರ ಹೊಂದಿದ್ದು, ಪುನೀತ್ ರಾಜ್ ಕುಮಾರ್ ಅವರ ಪಿಆರ್​ಕೆ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡ್ತಿದೆ. ಸಿಂಧು ಶ್ರೀನಿವಾಸ್ ಮೂರ್ತಿ ಈ ಚಿತ್ರ ನಿರ್ದೇಶಿಸ್ತಿದ್ದು, ಬಿಂದು ಮಾಲಿನಿ ಮ್ಯೂಸಿಕ್ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಜಪಾನ್​​ನಲ್ಲೂ ರಿಲೀಸ್​ ಆಗ್ತಿದೆ ಕೆಜಿಎಫ್​ ಮೂವಿ; ಇಲ್ಲಿವೆ ಟಾಪ್ 5​​ ಸಿನಿಮಾ ಸುದ್ದಿಗಳು!

https://newsfirstlive.com/wp-content/uploads/2023/06/yash-4.jpg

Load More