newsfirstkannada.com

NTR, ಪ್ರಭಾಸ್​​, ಯಶ್​​​: ಪ್ರಶಾಂತ್​​ ನೀಲ್​​​ ಮುಂದಿನ ಸಿನಿಮಾ ಯಾವುದು? ಹೀರೋ ಯಾರು?

Share :

12-07-2023

    ಕೆಜಿಎಫ್ ಡೈರೆಕ್ಟರ್​​ ಪ್ರಶಾಂತ್​ ನೀಲ್​ ಮುಂದಿನ ದಿಕ್ಸೂಚಿ ಯಾವುದು?

    ಇಲ್ಲಿ ಸಲಾರ್​ ಕಂಪ್ಲೀಟ್​.. ಅಲ್ಲಿ NTR ಶೂಟಿಂಗ್​ನಲ್ಲಿ ಫುಲ್​ ಬ್ಯುಸಿ

    ಸಲಾರ್​ ಬಳಿಕ ಯಶ್​ ಜತೆ KGF-3 ಸಿನಿಮಾ ಶೂಟಿಂಗ್​ ಶುರುನಾ?

ಎಲ್ಲವೂ ಕರೆಕ್ಟ್​ ಆಗಿರುತ್ತೆ. ಎಲ್ಲವೂ ಪ್ಲಾನ್ ಪ್ರಕಾರನೇ ಇರುತ್ತೆ. ಇದ್ದಕ್ಕಿಂತೆ ಕೊಡೋ ಸರ್ಪ್ರೈಸ್​ಗಳು ಕೆಲವೊಮ್ಮೆ ಕನ್​ಫ್ಯೂಶನ್​ ಕ್ರಿಯೇಟ್​ ಮಾಡಿಬಿಡುತ್ತೆ. ಈಗ ಪ್ರಶಾಂತ್ ನೀಲ್ ವಿಷ್ಯದಲ್ಲೂ ಇದೇ ಆಗ್ತಿರೋದು. ಸಲಾರ್​ ಆಯ್ತು. ಎನ್​ಟಿಆರ್​ ಸಿನಿಮಾ ಆಗುತ್ತೆ ಆಮೇಲೆ ಕೆಜಿಎಫ್​ ಆಗುತ್ತೆ ಅಂದ್ಕೊಂಡಿದ್ದವರಿಗೆ ನೀಲ್ ಕೊಟ್ಟ ಶಾಕ್​ಗೆ ಪ್ಲಾನ್ ಎಲ್ಲ ಉಲ್ಟಾ ಆಯ್ತಾ ಅನಿಸೋಕೆ ಶುರುವಾಗಿದೆ. ಏನಿದು ಕೆಜಿಎಫ್ ಡೈರೆಕ್ಟರ್​​ ನೀಲ್​ ಅವರ ದಿಕ್ಸೂಚಿ..?

ಕೆಜಿಎಫ್ ಆದ್ಮೇಲೆ ಪ್ರಶಾಂತ್ ನೀಲ್​ಗೆ ಬೇಡಿಕೆ ಹೆಚ್ಚಿರೋದು ಗೊತ್ತೇ ಇದೆ. ದೊಡ್ಡ ದೊಡ್ಡ ಸಿನಿಮಾ ಕಂಪನಿಗಳು ನೀಲ್ ಅವರ ಕಾಲ್​ಶೀಟ್​ ಪಡೆಯೋಕೆ ಕ್ಯೂ ನಿಂತಿರೋದು ಸೀಕ್ರೆಟ್ ಆಗೇನು ಇಲ್ಲ. ಆದ್ರೆ ನೀಲ್ ಮಾತ್ರ ಎಲ್ಲವೂ ಪ್ಲಾನ್ ಪ್ರಕಾರನೇ ಮಾಡ್ತಾ ಇದ್ದಾರೆ.. ಇದುವರೆಗೂ ಪ್ಲಾನ್ ಪ್ರಕಾರವೇ ಹೋಗುತ್ತಿದ್ದಾರೆ.

ಪ್ರಶಾಂತ್ ನೀಲ್ ಅವರ ಪ್ಲಾನ್ ಏನು ಅಂತ ಕ್ಲೀಯರ್​ ಆಗಿ ಕಾಣ್ತಿದೆ. ಕೆಜಿಎಫ್ ಆದ್ಮೇಲೆ ಪ್ರಭಾಸ್ ಜೊತೆ ಸಲಾರ್ ಮಾಡ್ತಿರೋ ಡೈರೆಕ್ಟರ್​ ನೀಲ್​ ಅದಾದ ಮೇಲೆ ಜ್ಯೂನಿಯರ್ ಎನ್​ಟಿಆರ್ ಜೊತೆ ಸಿನಿಮಾ ಅನೌನ್ಸ್​ ಮಾಡ್ಕೊಂಡಿದ್ದಾರೆ. ಇದುವರೆಗೂ ಎಲ್ಲವೂ ಕರೆಕ್ಟ್​ ಆಗಿ ಇದೆ. ಅಂದ್ಕೊಂಡಂತೆ ಆಗ್ತಿದೆ ಅನ್ನೋ ನಂಬಿಕೆ ಸಿನಿ ಅಭಿಮಾನಿಗಳಲ್ಲೂ ಇತ್ತು. ಆದ್ರೆ ಇದ್ದಕ್ಕಿದ್ದಂತೆ ಸಲಾರ್ ಟೀಮ್​ ಕೊಟ್ಟ ಮಾಸ್ಟರ್​ಸ್ಟ್ರೋಕ್​ಗೆ ಈಗ ಪ್ಲಾನ್​ಗಳು ಉಲ್ಟಾಪಲ್ಟಾ ಆಯ್ತಾ ಅನಿಸೋಕೆ ಶುರುವಾಗಿದೆ.

ಸಲಾರ್​ ಸೀಕ್ವೆಲ್​​.. ಬದಲಾಯ್ತಾ ನೀಲ್ ಪ್ಲಾನ್?

ಪ್ರಭಾಸ್ ನಟನೆಯ ಸಲಾರ್​ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸದ್ಯ ಸಣ್ಣ ಪುಟ್ಟ ಪ್ಯಾಚ್​ ವರ್ಕ್ ಹಾಗೂ ಪೋಸ್ಟ್​ ಪ್ರೊಡಕ್ಷನ್​ನಲ್ಲಿ ಬ್ಯುಸಿಯಿರುವ ಚಿತ್ರತಂಡ ಅಂದುಕೊಂಡಂತೆ ಸೆಪ್ಟೆಂಬರ್​ 28ಕ್ಕೆ ಸಲಾರ್​ನ ತೆರೆಮೇಲೆ ತರಲಿದೆ. ಅದಾದ ಮೇಲೆ ಪ್ರಶಾಂತ್ ನೀಲ್ ಜ್ಯೂನಿಯರ್​ ಎನ್​ಟಿಆರ್ ಚಿತ್ರದ ಆರಂಭಿಸಬೇಕಿದೆ. ಆದ್ರೆ ಅದು ಸದ್ಯಕ್ಕೆ ಪ್ಲಾನ್ ಪ್ರಕಾರ ಶುರುವಾಗುವ ಸಾಧ್ಯತೆ ಇಲ್ಲ. ಯಾಕಂದ್ರೆ ಪ್ರಸ್ತುತ ಎನ್​ಟಿಆರ್​, ಕೊರಟಾಲ ಶಿವ ಜೊತೆ ‘ದೇವರ’ ಚಿತ್ರ ಮಾಡ್ತಾ ಇದ್ದಾರೆ. ಈ ಸಿನಿಮಾ ಮುಗಿಯೋಕೆ ಈ ವರ್ಷಪೂರ್ತಿ ಸಮಯ ಬೇಕು. ಹಾಗಾಗಿ ಸಲಾರ್ ರಿಲೀಸ್ ಆದ್ರೂ ಪ್ರಶಾಂತ್ ನೀಲ್ ಈ ವರ್ಷ ಎನ್​ಟಿಆರ್ ಚಿತ್ರದ ಶೂಟಿಂಗ್ ಶುರು ಮಾಡಲ್ಲ​ ಎನ್ನಲಾಗ್ತಿದೆ.

ಕೆಜಿಎಫ್​ ಸೂತ್ರವನ್ನೇ ಅನುಸರಿಸ್ತಾರಾ ನೀಲ್?

ಕೆಜಿಎಫ್​ ಮೊದಲ ಚಾಪ್ಟರ್ ಆದ್ಮೇಲೆ 2ನೇ ಚಾಪ್ಟರ್ ಶುರು ಮಾಡಿದ್ರು. ಯಾಕಂದ್ರೆ ಕೆಜಿಎಫ್​ ಕ್ರೇಜ್ ಹಾಗಿತ್ತು. ನೀಲ್ ಏನಾದ್ರೂ ಚಾಪ್ಟರ್- 2 ಆಮೇಲೆ ಮಾಡೋಣ ಅಂತೇಳಿ ಬೇರೆ ಸಿನಿಮಾ ಶುರು ಮಾಡಿದ್ರೆ ಬಹುಶಃ ಅದೃಷ್ಟ ಕಳೆದುಕೊಳ್ಳುತ್ತಿದ್ದರೇನೋ? ಆದ್ರೆ ನೀಲ್ ಹಾಗೆ ಮಾಡ್ಲಿಲ್ಲ. ಚಾಪ್ಟರ್- 2 ಮುಗಿಯೋವರೆಗೂ ಸಲಾರ್ ಸ್ಟಾರ್ಟ್ ಮಾಡಿಲ್ಲ. ಈಗ ಸಲಾರ್ ವಿಷ್ಯದಲ್ಲೂ ಕೆಜಿಎಫ್ ಸೂತ್ರವನ್ನೇ ಅನುಸರಿಸಬಹುದು. ಸಲಾರ್ ರಿಸಲ್ಟ್​ ನೋಡಿಕೊಂಡು ಇಮಿಡೆಟ್​ ಆಗಿ ಸಲಾರ್-​ 2 ಸ್ಟಾರ್ಟ್ ಮಾಡಬಹುದು ಅನಿಸ್ತಿದೆ. ಸಲಾರ್​- 2 ಮುಗಿಸಿ ಅದನ್ನ ಥಿಯೇಟರ್​ಗೆ ತಂದು ಆಮೇಲೆ ಎನ್​ಟಿಆರ್​ ಚಿತ್ರದ ಕಡೆ ಹೋಗೋಣ ಅನ್ನೋದು ಸದ್ಯ ನೀಲ್ ಅವರ ಲೆಕ್ಕಾಚಾರ. ಅದಕ್ಕೆ ಬೇಕಾದ ಪೂರ್ವ ತಯಾರಿನೂ ಈಗಾಗ್ಲೇ ಮಾಡ್ಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಸಲಾರ್ ಚಿತ್ರದ ಶೂಟಿಂಗ್ ಜೊತೆಯಲ್ಲೇ ಸಲಾರ್ ಸೀಕ್ವೆಲ್​ನ ಇಂಪಾರ್ಟೆಂಟ್​ ಸೀಕ್ವೆನ್ಸ್​ಗಳನ್ನ ಶೂಟ್ ಮಾಡಿಕೊಳ್ಳಲಾಗಿದೆ. ಇನ್ನೇನಿದ್ರು ಸಣ್ಣ ಪುಟ್ಟ ಪೋಷನ್ಸ್​ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆಯಂತೆ.

ಆ ಕಡೆ ಎನ್​ಟಿಆರ್​-ಕೊರಟಾಲ ಶಿವ ಅವರ ‘ದೇವರ’ ಚಿತ್ರವೂ ತುಂಬಾ ದೊಡ್ಡ ಮಟ್ಟದಲ್ಲೇ ತಯಾರಾಗ್ತಿದೆ. ಈ ಗ್ಯಾಪ್​ಲ್ಲಿ ಹೃತಿಕ್ ರೋಷನ್ ಜೊತೆ ವಾರ್-2 ಚಿತ್ರವನ್ನ ಮುಗಿಸಿಕೊಡಬೇಕಿದೆ. ಹಾಗಾಗಿ, ನೀಲ್​ಗೆ ಇನ್ನಷ್ಟು ಫ್ರೀ ಟೈಮ್ ಕೊಟ್ಟಿರುವ ಯಂಗ್ ಟೈಗರ್, ‘ನೀವು ಆರಾಮಾಗಿ ಸಲಾರ್- 2 ಮುಗಿಸಿ, ನಾನು ಅಷ್ಟೋತ್ತಿಗೆ ದೇವರ ಹಾಗೂ ವಾರ್-2 ಕಂಪ್ಲೀಟ್ ಮಾಡ್ತೀನಿ’ ಅನ್ನೋ ಮೆಸೆಜ್ ಪಾಸ್ ಮಾಡಿದ್ದಾರಂತೆ. ಹಾಗಾಗಿ, ನೀಲ್​ ಮುಂದಿನ ಸಿನಿಮಾ ಸಲಾರ್​-2ನೇ ಇರಲಿದೆ.

ಕೆಜಿಎಫ್​- 3.. ಯೂನಿವರ್ಸ್​ ಸೃಷ್ಟಿಸೋ ಪ್ಲಾನ್!

ಇದೆಲ್ಲದರ ಮಧ್ಯೆ ಕೆಜಿಎಫ್- 3 ಮಾಡ್ಬೇಕು ಅನ್ನೋದು ಹೊಂಬಾಳೆ ಫಿಲಂಸ್​ ಅವ್ರ ಟಾರ್ಗೆಟ್​. 2025ಕ್ಕೆ ಶುರು ಮಾಡ್ತೀವಿ ಅಂತ ಈಗಾಗಲೇ ಹೇಳ್ಕೊಂಡಿರೋದ್ರಿಂದ ಚಾಪ್ಟರ್ 3 ಮೇಲೆ ಸಹಜವಾಗಿ ಕುತೂಹಲ ಇದೆ. ಸದ್ಯ ಪ್ರಶಾಂತ್ ನೀಲ್ ಲೈನ್ ಅಪ್ ನೋಡಿದ್ರೆ ಸಲಾರ್, ಸಲಾರ್ 2, ಎನ್​ಟಿಆರ್​ 31ನೇ ಸಿನಿಮಾ ಆದ್ಮೇಲೆ ಕೆಜಿಎಫ್-​ 3 ಇದೆ. ಇನ್​ಫ್ಯಾಕ್ಟ್​ ಎನ್​ಟಿಆರ್ ಚಿತ್ರಕ್ಕೂ ಸೀಕ್ವೆಲ್​​ ಇರುತ್ತೆ ಅನ್ನೋ ಗುಮಾನಿ ಈಗ್ಲೇ ಶುರುವಾಗಿದೆ. ಹಾಗಾಗಿ, ಪ್ರಶಾಂತ್ ನೀಲ್ ಹೊಸದೊಂದು ಯೂನಿವರ್ಸ್ ಸೃಷ್ಟಿಸ್ತಿದ್ದು, ಒಂದಕ್ಕೊಂದು ಲಿಂಕ್ ಕೊಡ್ತಾ ಹೋಗ್ತಾರೆ. ಫೈನಲಿ ಕೆಜಿಎಫ್- 3ನಲ್ಲಿ ಎಲ್ಲದಕ್ಕೂ ಕ್ಲಾರಿಟಿ ಕೊಡ್ತಾರೆ ಅನ್ನೋ ಎಕ್ಸ್​ಪೆಕ್ಟೇಶನ್ ಹುಟ್ಕೊಂಡಿದೆ.

ಇದೆಲ್ಲದರ ನಡುವೆ ಸದ್ಯಕ್ಕೆ ಪ್ಯಾನ್ ಇಂಡಿಯಾ ಇಂಡಸ್ಟ್ರಿ ಕಣ್ಣು ಸಲಾರ್ ಮೇಲಿದೆ. ಸಲಾರ್ ಮುಗಿದ ಮೇಲೆ ನೀಲ್ ಏನು? ಸಲಾರ್- 2ನಾ ಅಥವಾ ಎನ್​ಟಿಆರ್​ 31ನೇ ಚಿತ್ರನಾ? ಎನ್ನುವ ಕ್ಲೀಯರ್ ಪಿಚ್ಚರ್ ಸಿಗಬಹುದು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

NTR, ಪ್ರಭಾಸ್​​, ಯಶ್​​​: ಪ್ರಶಾಂತ್​​ ನೀಲ್​​​ ಮುಂದಿನ ಸಿನಿಮಾ ಯಾವುದು? ಹೀರೋ ಯಾರು?

https://newsfirstlive.com/wp-content/uploads/2023/07/PRASHANTH_NEEL_PRABHAS.jpg

Load More