newsfirstkannada.com

ಸ್ಯಾನ್​ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ಖಲಿಸ್ತಾನಿಗಳ ಅಟ್ಟಹಾಸ; 5 ತಿಂಗಳಲ್ಲಿ 2ನೇ ಬಾರಿಗೆ ದಾಳಿ

Share :

04-07-2023

    ಯುಎಸ್​ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ರಾಯಭಾರಿ ಕಚೇರಿ

    ಕಳೆದ 5 ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರು ಮಾಡಿದ ಎರಡನೇ ದಾಳಿ

    ದಾಳಿ ಕುರಿತಂತೆ ಯುಎಸ್​ನ ವಿದೇಶಾಂಗ ಇಲಾಖೆಯಿಂದ ಖಂಡನೆ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ರಾಯಭಾರಿ (ಕಾನ್ಸುಲೇಟ್) ಕಚೇರಿಗೆ ಖಲಿಸ್ತಾನಿ ಪ್ರತ್ಯೇಕವಾದಿಗಳು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಕಳೆದ 5 ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರು ಮಾಡಿದ ಎರಡನೆ ದಾಳಿ ಇದಾಗಿದೆ.

ವಿದೇಶಾಂಗ ಇಲಾಖೆ ಖಂಡನೆ

ಜುಲೈ 2 ರಂದು ರಾತ್ರಿ ಖಲಿಸ್ತಾನಿ ಪ್ರತ್ಯೆಕತಾವಾದಿಗಳು ಬೆಂಕಿಹಚ್ಚಿದ್ದಾರೆ.  ಈ ಬಗ್ಗೆ ಯುಎಸ್ ನ ವಿದೇಶಾಂಗ ಇಲಾಖೆಯಿಂದ ಖಂಡನೆ ವ್ಯಕ್ತಪಡಿಸಿದ್ದು, ಕೃತ್ಯದಲ್ಲಿ ಭಾಗಿಯಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಭಾರತದ NIA ತಂಡ ಯುಎಸ್​​ಗೆ

ಇದೊಂದಿಗೆ ಅಮೆರಿಕಾ ವಿದೇಶಾಂಗ ಇಲಾಖೆ ಘಟನೆಗೆ ಬಗ್ಗೆ  ತೀವ್ರ ವಿರೋಧವಿದೆ ಎಂದು ಸ್ಪಷ್ಟನೆ ನೀಡಿದೆ. ಇತ್ತ ಭಾರತವು ದಾಳಿಯನ್ನ ಗಂಭಿರವಾಗಿ ಪರಿಗಣಿಸಿದ್ದು, ಇದಕ್ಕಾಗಿ ಭಾರತದ NIA ತಂಡ ಯುಎಸ್ ಗೆ ತೆರಳಿಗೆ.

NIA ಯ ವಿಶೇಷ ತಂಡದಿಂದ ತನಿಖೆಗೆ ಸರ್ಕಾರ ನಿರ್ಧಾರಿಸಿದೆ. ಎರಡನೇ ಬಾರಿಗೆ ದಾಳಿಯಾದ ಹಿನ್ನಲೆ ಸೂಕ್ತವಾದ ತನಿಖೆಗೆ ನಿರ್ಧಾರ ಕೈಗೊಂಡಿದೆ.

ಖಲಿಸ್ತಾನಿಗಳ ಬೇಡಿಕೆ ಏನು?

ಖಲಿಸ್ತಾನ್ ಎಂದರೆ “ಖಾಲ್ಸಾ ಭೂಮಿ” ಅಥವಾ “ಶುದ್ಧ” ಎಂದರ್ಥ. ಸಿಖ್ ಧರ್ಮದವರಿಗೆ ಪ್ರತ್ಯೇಕ ರಾಷ್ಟ್ರದ ರಾಜ್ಯ ರಚನೆ ಮಾಡಬೇಕು ಎಂಬುದೇ ಖಲಿಸ್ತಾನಿಗಳ ಪ್ರಮುಖ ಬೇಡಿಕೆ. ಇದು ಭಾರತವನ್ನು ಒಡೆಯುವ ಉಗ್ರಗಾಮಿ ಬೇಡಿಕೆಯಾಗಿದೆ. 1980 ರ ಕಾಲದಲ್ಲಿ ಖಲಿಸ್ತಾನಿ ಬೆಂಬಲಿಗರ ಬೇಡಿಕೆ ಅತ್ಯಂತ ತೀವ್ರವಾದ ಸ್ವರೂಪವನ್ನು ಪಡೆದುಕೊಂಡಿತು. 1993 ರಲ್ಲಿ ಖಲಿಸ್ತಾನಿ ಬೆಂಬಲಿಗರ ಬೇಡಿಕೆಯ ಹಿಂಸಾಚಾರ ಮತ್ತು ಭಯೋತ್ಪಾದನೆಯತ್ತ ತಿರುಗಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾನ್​ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ಖಲಿಸ್ತಾನಿಗಳ ಅಟ್ಟಹಾಸ; 5 ತಿಂಗಳಲ್ಲಿ 2ನೇ ಬಾರಿಗೆ ದಾಳಿ

https://newsfirstlive.com/wp-content/uploads/2023/07/Fire.jpg

Load More