newsfirstkannada.com

G20 ಶೃಂಗಸಭೆಗೆ ಬೆದರಿಕೆ ಸಂದೇಶ; ಕಾಶ್ಮೀರಿ ಮುಸ್ಲಿಂ ಯುವಕರಿಗೆ ಕರೆ ಕೊಟ್ಟ ಖಲಿಸ್ತಾನಿ ನಾಯಕ

Share :

04-09-2023

    G20 ಶೃಂಗಸಭೆಗಾಗಿ ವಿಶ್ವದ ಟಾಪ್ ಲೀಡರ್ಸ್‌ ದೆಹಲಿಗೆ ಆಗಮನ

    ಶುಕ್ರವಾರದ ನಮಾಜ್ ಬಳಿಕ ದೆಹಲಿಗೆ ಹೋಗಿ ಅಡ್ಡಿಪಡಿಸಲು ಕರೆ

    ಆಡಿಯೋ ಸಂದೇಶ ಬಿಡುಗಡೆ ಮಾಡಿದ ಸಿಖ್ ಫಾರ್ ಜಸ್ಟೀಸ್!

ನವದೆಹಲಿ: ಇದೇ ಸೆಪ್ಟೆಂಬರ್ 9, 10ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ G20 ಶೃಂಗಸಭೆ ಮೇಲೆ ಖಲಿಸ್ತಾನಿಗಳ ಕಣ್ಣು ಬಿದ್ದಿದೆ. ದೆಹಲಿಗೆ ಹೋಗಿ G20 ಶೃಂಗಸಭೆಗೆ ಅಡ್ಡಿಪಡಿಸಿ ಎಂದು ಸಿಖ್ ಫಾರ್ ಜಸ್ಟೀಸ್ (SFJ) ಸಂಸ್ಥಾಪಕ ಗುರಿಪತ್ವಂತ್ ಸಿಂಗ್ ಪನ್ ಕರೆ ನೀಡಿದ್ದಾರೆ. ಈ ಕುರಿತು ಆಡಿಯೋ ಸಂದೇಶ ಬಿಡುಗಡೆ ಮಾಡಿರುವ ಗುರಿಪತ್ವಂತ್ ಸಿಂಗ್, ಕಾಶ್ಮೀರಿ ಮುಸ್ಲಿಂ ಯುವಕರಿಗೆ ದೆಹಲಿಗೆ ನುಗ್ಗಿ G20 ಶೃಂಗಸಭೆಗೆ ಅಡ್ಡಿಪಡಿಸಲು ಹೇಳಿದ್ದಾನೆ.

G20 ಶೃಂಗಸಭೆಗಾಗಿ ವಿಶ್ವದ ಪ್ರಮುಖ ರಾಷ್ಟ್ರಗಳ ದಿಗ್ಗಜರು, ವಿಶೇಷ ಅತಿಥಿಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ. ವಿದೇಶಿ ಅತಿಥಿಗಳ ಸ್ವಾಗತಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಕಲ ರೀತಿಯಲ್ಲೂ ಸಜ್ಜಾಗಿದೆ. G20 ಸಭೆಗೆ ದಿನಗಣನೆ ಶುರುವಾಗಿರುವಾಗ ಖಲಿಸ್ತಾನಿಗಳ ಬೆದರಿಕೆ ಸಂದೇಶ ಬಂದಿದೆ.

ಸಿಖ್ ಫಾರ್ ಜಸ್ಟೀಸ್ ಸಂಸ್ಥಾಪಕ ಗುರಿಪತ್ವಂತ್ ಸಿಂಗ್ G20 ಶೃಂಗಸಭೆಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಶುಕ್ರವಾರದ ನಮಾಜ್ ಬಳಿಕ ಕಾಶ್ಮೀರದ ಮುಸ್ಲಿಂರು G20 ಶೃಂಗಸಭೆ ನಡೆಯುವ ಪ್ರಗತಿ ಮೈದಾನದತ್ತ ಮೆರವಣಿಗೆ ಸಾಗಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೇ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿಯರ ಬಾವುಟ ಹಾರಿಸುವ ಬೆದರಿಕೆಯನ್ನು ಹಾಕಿದ್ದಾನೆ.

ಇದನ್ನೂ ಓದಿ: ಉಕ್ಕಿನ ಕೋಟೆಯಾಗಿ ಬದಲಾದ ದೆಹಲಿ; G20 ಶೃಂಗಸಭೆಗೆ ಸಜ್ಜಾದ ಟಾಪ್‌ 10 ಫೋಟೋ ಇಲ್ಲಿವೆ ನೋಡಿ

ನಿನ್ನೆಯಷ್ಟೇ ದೆಹಲಿ ಮೆಟ್ರೋ ನಿಲ್ದಾಣದ ಬಳಿ ಖಲಿಸ್ತಾನಿ ಪರ ಘೋಷಣೆ ಕೂಗಲಾಗಿತ್ತು. ದೆಹಲಿ ಖಲಿಸ್ತಾನ ಆಗಲಿದೆ, ಖಲಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಹಲವು ಬೀದಿಗಳಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಬರೆಯಲಾಗಿದೆ. ಇಷ್ಟೆಲ್ಲಾ ಆದ ಬಳಿಕ ಸಿಖ್ ಫಾರ್ ಜಸ್ಟೀಸ್ ಸಂಸ್ಥಾಪಕನಿಂದ ಬೆದರಿಕೆಯ ಆಡಿಯೋ ಬಿಡುಗಡೆ ಆಗಿದೆ.
G20 ಶೃಂಗಸಭೆಗೆ ಈಗಾಗಲೇ ಭಾರೀ ಭದ್ರತೆ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೇನಾ ಪಡೆ ಹಾಗೂ ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

G20 ಶೃಂಗಸಭೆಗೆ ಬೆದರಿಕೆ ಸಂದೇಶ; ಕಾಶ್ಮೀರಿ ಮುಸ್ಲಿಂ ಯುವಕರಿಗೆ ಕರೆ ಕೊಟ್ಟ ಖಲಿಸ್ತಾನಿ ನಾಯಕ

https://newsfirstlive.com/wp-content/uploads/2023/09/G20-Modi.jpg

Load More