newsfirstkannada.com

M N ಕುಮಾರ್ ವಿರುದ್ಧ ಕಾನೂನು ಹೋರಾಟಕ್ಕಿಳಿದ ಕಿಚ್ಚ; 10 ಕೋಟಿ ಮಾನನಷ್ಟ ಮೊಕದ್ದಮೆ

Share :

08-07-2023

    ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕನ ಆರೋಪ

    ಹಣ ಪಡೆದು ಡೇಟ್ಸ್ ನೀಡಿಲ್ಲ ಎಂದ M N ಕುಮಾರ್​

    ನಿರ್ಮಾಪಕನ ವಿರುದ್ಧ ಕಾನೂನು ಹೋರಾಟಕ್ಕಿಳಿದ ಸುದೀಪ್

ಇತ್ತೀಚೆಗೆ ಬಾದ್​ಶಾ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಕಿಚ್ಚನ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಹಣ ಪಡೆದು ಡೇಟ್ಸ್ ನೀಡಿಲ್ಲ ಅಂತೆಲ್ಲಾ ಆರೋಪಿಸಿದ್ದರು. ಆದರೆ ಈ ವಿಚಾರವಾಗಿ ಮೌನವಾಗಿದ್ದ ಕಿಚ್ಚ ಇದೀಗ ಕಾನೂನು ಮೊರೆ ಹೋಗಿದ್ದಾರೆ.

ಎಂ.ಎನ್ ಕುಮಾರ್ ಆರೋಪ ಮಾಡಿದ ಬೆನ್ನಲ್ಲೇ ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ್ದರು. ಟ್ವೀಟ್​ನಲ್ಲಿ ‘‘ನನ್ನ ಒಳ್ಳೆಯತನ ದುರುಪಯೋಗ ಆಗದಿರಲಿ, ಅದನ್ನ ಯಾರೂ ಕೂಡ ತಮ್ಮ ಇಷ್ಟಗಳಿಗೆ ಉಪಯೋಗಿಸಿಕೊಳ್ಳದಿರಲಿ. ನೀವು ನಿಯತ್ತಿನಿಂದ ಇದ್ದರೆ, ನನ್ನ ಈ ಒಳ್ಳೆಯತನ ಹೆಚ್ಚಾಗಿ ಹೊಳೆಯುತ್ತದೆ. ಯಾವತ್ತಿದ್ದರೂ ವಿನಮ್ರತೆ ಇಂದ ಬದುಕಿ’’ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್​​ ಮಾಡಿದ್ದರು.

ಕಾನೂನು ಹೋರಾಟಕ್ಕಿಳಿದ ಕಿಚ್ಚ

ಆ ಬಳಿಕ ಎನ್​ ಎನ್​ ಕುಮಾರ್​ ನಿರ್ಮಾಪಕ ಸಂಘ ಹೇಳಿದಂತೆ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಹೇಳಿದ್ದರು. ಆದರೆ ಕಿಚ್ಚ ಇತ್ತ ಕಾನೂನು ಮೂಲಕ ಹೋರಾಡಲು ಮುಂದಾಗಿದ್ದಾರೆ. ತಮ್ಮ ಬಗ್ಗೆ ಹಣ ಪಡೆದು ಡೇಟ್ಸ್ ನೀಡಿಲ್ಲ ಅಂತೆಲ್ಲಾ ಆರೋಪಿಸಿದ ನಿರ್ಮಾಪಕನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜೊತೆಗೆ ಎನ್​ ಎನ್​ ಕುಮಾರ್​ಗೆ ನೊಟೀಸ್​​ ನೀಡಿದ್ದಾರೆ.

‘ತೇಜೋವಧೆ ಮಾಡಿದ್ದೀರಿ’

ಕಿಚ್ಚನ ಕಳುಹಿಸಿದ ನೊಟೀಸ್​ನಲ್ಲಿ ‘ನೀವು ನನ್ನ ತಾಳ್ಮೆಯನ್ನ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ. ಇಲ್ಲವಾದಲ್ಲಿ 10 ಕೋಟಿ ಮಾನನಷ್ಟದ ದಂಡ ಕಟ್ಟಿಕೊಡಿ’ ಎಂದು ಹೇಳಿದ್ದಾರೆ.

ಕಿಚ್ಚ ನಿರ್ಮಾಪಕ ಎಂ ಎನ್ ಕುಮಾರ್ ಹಾಗೂ ಅವರ ಪರ ಮಾತನಾಡಿರೋ ನಿರ್ಮಾಪಕ ಎಂ ಎನ್ ಸುರೇಶ್ ವಿರುದ್ದ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

M N ಕುಮಾರ್ ವಿರುದ್ಧ ಕಾನೂನು ಹೋರಾಟಕ್ಕಿಳಿದ ಕಿಚ್ಚ; 10 ಕೋಟಿ ಮಾನನಷ್ಟ ಮೊಕದ್ದಮೆ

https://newsfirstlive.com/wp-content/uploads/2023/07/Kiccha-Sudeep-2.jpg

Load More