newsfirstkannada.com

ನನ್ನ ಸುದೀಪ್​​ ಮಧ್ಯೆ ತಂದಿಡೋ ಪ್ರಯತ್ನ ನಡೆಯುತ್ತಿದೆ- ಜಾಕ್​​ ಮಂಜು ಅಸಮಾಧಾನ

Share :

14-07-2023

    ನಿರ್ಮಾಪಕರ ಸಂಘದ ವಿರುದ್ಧ ಜಾಕ್ ಮಂಜು ಅಸಮಾಧಾನ

    ವಿಕ್ರಾಂತ್ ರೋಣ ಚಿತ್ರದಿಂದ ನಷ್ಟವಾಗಿದೆ ಎಂದಿದ್ದ ರೆಹಮಾನ್​​​​

    ನಿರ್ಮಾಪಕರ ಸಂಘದಿಂದ ಮಲತಾಯಿ ಧೋರಣೆ ಎಂದ ಮಂಜು

ಕಿಚ್ಚನ ಮೇಲೆ ಸಮರ ಸಾರಿದವರ ವಿರುದ್ಧ ಫ್ಯಾನ್ಸ್​ ಮುಗಿಬಿದ್ದರು. ಇದೀಗ ಕಿಚ್ಚನ ಹಿಂದೆ ನಿರ್ಮಾಪಕರು ನಿಂತಿದ್ದಾರೆ. ಒಂದು ಕಡೆ ವೀರಕಪುತ್ರ ಶ್ರೀನಿವಾಸ್​ ಈ ಎಲ್ಲಾ ಷಡ್ಯಂತ್ರಗಳ ಹಿಂದೆ ಕೋಟಿಗೊಬ್ಬ ಪ್ರೊಡ್ಯೂಸರ್ ಸೂರಪ್ಪ ಬಾಬು ಇದ್ದಾರೆ ಅಂತ ಬಾಂಬ್ ಸಿಡಿಸಿದ್ದರೆ, ಈ ಕಡೆ ಕಿಚ್ಚನ ಮತ್ತೊಬ್ಬ ಆಪ್ತ ಜಾಕ್ ಮಂಜು ಇನ್ನಷ್ಟು ಗಂಭೀರ ವಿಚಾರಗಳನ್ನ ಚರ್ಚಿಸಿ ಪತ್ರ ಬರೆದಿದ್ದಾರೆ.

ಹುಚ್ಚ, ಯಜಮಾನ ಚಿತ್ರದ ನಿರ್ಮಾಪಕ ರೆಹಮಾನ್ ಮಾತಾಡುವಾಗ ವಿಕ್ರಾಂತ್ ರೋಣ ಚಿತ್ರದಿಂದ ನಷ್ಟವಾಗಿದೆ. ಜಾಕ್ ಮಂಜು ಖುದ್ದು ಫೋನ್ ಮಾಡಿ ಹೇಳಿಕೊಂಡಿದ್ದರು ಅಂತ  ಸುದ್ದಿಗೋಷ್ಠಿ​ಯಲ್ಲಿ ಹೇಳಿದ್ದರು. ಆದರೆ ರೆಹಮಾನ್ ಅವರ ಈ ಹೇಳಿಕೆಯನ್ನ ನಿರಾಕರಿಸಿರೋ ಜಾಕ್ ಮಂಜು, ವಿಕ್ರಾಂತ್ ರೋಣ ಚಿತ್ರದಿಂದ ನನಗೆ ಯಾವುದೇ ನಷ್ಟವಾಗಿಲ್ಲ. ಯಾವುದೇ ಸಂಭಾವನೆ ಪಡೆಯದೇ ಕಿಚ್ಚ ಸುದೀಪ್ ಅವರು ಸ್ನೇಹಕ್ಕಾಗಿ ನಟಿಸಿದ್ದಾರೆ ಅಂತ ಸ್ಪಷನೆ ಕೊಟ್ಟಿದ್ದಾರೆ. ಜೊತೆಗೆ ಸಾವಿರಾರು ಸಲ ಫೋನ್ ಮಾಡಿದರೂ ಅವರ ಕರೆ ಸ್ವೀಕರಿಸದ ನಾನು, ರೆಹಮಾನ್ ಅವರನ್ನೇ ಹುಡುಕಿ ನನಗೆ ನಷ್ಟವಾಯಿತು ಎಂದು ಹೇಳಿಕೊಂಡೆನೇ? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ ಮತ್ತು ರೆಹಮಾನ್ ಸಂಬಂಧವೇನು? ಅಂತ ಪ್ರಶ್ನಿಸಿದ್ದಾರೆ.

ರೆಹಮಾನ್ ಅವರು ಕಷ್ಟದಲ್ಲಿದ್ದಾಗ ಖುದ್ದು ನಾನೇ ಹೋಗಿ ಸಹಾಯ ಮಾಡಿದ್ದೇನೆ, ಸುದೀಪ್ ಅವರ ಸೂಚನೆ ಮೆರೆಗೆ ಆಸ್ಪತ್ರೆ ಮನೆ ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ನಾನೇ ನನ್ನ ಕೈಯಾರೆ ನೆರವಾಗಿದ್ದೇನೆ. ಇದಕ್ಕೆ ನಾನೇ ಜೀವಂತ ಸಾಕ್ಷಿ ಎಂದು ಆರೋಪಗಳನ್ನ ತಳ್ಳಿ ಹಾಕಿದ್ದಾರೆ ನಿರ್ಮಾಪಕ ಜ್ಯಾಕ್​ ಮಂಜು.

ಇನ್ನು, ರೆಹಮಾನ್ ಅವರ ಹೇಳಿಕೆಗಳು ಹಾಗೂ ಅದನ್ನ ಪ್ರೋತ್ಸಾಹಿಸಿದ ನಿರ್ಮಾಪಕ ಸಂಘದ ವಿರುದ್ಧ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಜಾಕ್ ಮಂಜು, ಇದು ನನ್ನ ಮತ್ತು ಸಹೋದರ ಸಮನಾದ ಸುದೀಪ್ ಅವರ ನಡುವೆ ತಂದಿಡುವ ಪ್ರಯತ್ನ. ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ. ಸುದೀಪ್ ಮತ್ತು ನಿರ್ಮಾಪಕರ ನಡುವಿನ ಬೆಳವಣಿಗೆಯಲ್ಲಿ ನಿರ್ಮಾಪಕರ ಸಂಘ ಮಲತಾಯಿ ಧೋರಣೆ ಮಾಡ್ತಿದೆ ಅಂತ ಜಾಕ್ ಮಂಜು ನೇರವಾಗಿ ಆರೋಪಿಸಿದ್ದಾರೆ.

ಕೇವಲ ನಾಲ್ಕಾರು ಜನರ ಹಿತ ಕಾಯುವ ಮಾಫಿಯಾ ಆಗಿದೆ ಅಂತ ಗುಡುಗಿದ್ದಾರೆ. ನಿರ್ಮಾಪಕರ ಹಿತಕಾಯುವಲ್ಲಿ ತಾವು ಹಿಡಿಯುತ್ತಿರುವ ಮಾರ್ಗ ಸಂಘದ ಘನತೆಯನ್ನೂ ಕುಗ್ಗಿಸುತ್ತಿದೆ ಅಂತ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ ಎಂದಿದ್ದಾರೆ. ಸದ್ಯಕ್ಕೆ ಈ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಒಂದು ಕಡೆ ನಿರ್ಮಾಪಕರು ಒಬ್ಬೊಬ್ಬರೇ ಬಹಿರಂಗವಾಗಿ ಸುದೀಪ್ ವಿರುದ್ಧ ಸಮರಕ್ಕೆ ನಿಂತರೇ, ಮತ್ತೊಂದ್ಕಡೆ ಕಿಚ್ಚನ ಅಪ್ತರು ಅದನ್ನ ಟ್ಯಾಕಲ್ ಮಾಡುತ್ತಿದ್ದಾರೆ. ಮುಂದೆ ಈ ವಿವಾದ ಯಾವ ಹಂತಕ್ಕೆ ಹೋಗುತ್ತೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಸುದೀಪ್​​ ಮಧ್ಯೆ ತಂದಿಡೋ ಪ್ರಯತ್ನ ನಡೆಯುತ್ತಿದೆ- ಜಾಕ್​​ ಮಂಜು ಅಸಮಾಧಾನ

https://newsfirstlive.com/wp-content/uploads/2023/07/kiccha.jpg

Load More