newsfirstkannada.com

ರಾಘು, ಶ್ರೀಮುರಳಿಯನ್ನ ತಬ್ಬಿ ಸಾಂತ್ವನ ಹೇಳಿದ ಕಿಚ್ಚ ಸುದೀಪ್​​ ದಂಪತಿ

Share :

01-09-2023

    ನಟ ವಿಜಯ್ ರಾಘವೇಂದ್ರಗೆ ಸಾಂತ್ವನ ಹೇಳಿದ ಕಿಚ್ಚ ಸುದೀಪ್​

    ಸುದೀಪ್​ಗೆ ಸಾಥ್​​ ನೀಡಿದ KGR ಕಾರ್ತಿಕ್ ಮತ್ತು ಯೋಗಿ ಜಿ ರಾಜು

    ಸ್ಪಂದನಾ ನಿಧನದ ದಿನ ಕಿಚ್ಚ ಸುದೀಪ್​​ ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿ

ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಮನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ ಹಾಗೂ ಪತ್ನಿ ಪ್ರಿಯಾ ಸುದೀಪ್​​ ಭೇಟಿ ಕೊಟ್ಟಿದ್ದಾರೆ. ಆಗಸ್ಟ್​ 7ರಂದು ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತಪಟ್ಟಿದ್ದರು. ಬ್ಯಾಂಕಾಕ್​ಗೆ ಹೋಗಿದ್ದ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರು.

ಅದಾದ ಬಳಿಕ ಸ್ಪಂದನಾ ನಿಧನದ ದಿನ ಕಿಚ್ಚ ಸುದೀಪ್​​ ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಕಿಚ್ಚ ಸುದೀಪ್​​ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಹೀಗಾಗಿ ಇದೀಗ ಕಿಚ್ಚ ಸುದೀಪ್ ದಂಪತಿ​ ನಟ ವಿಜಯ ರಾಘವೇಂದ್ರ ಅವರ ನಿವಾಸಕ್ಕೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಾರೆ. ಈ ವೇಳೆ ಕೆಆರ್​ಜಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜು ಅವರು ಕಿಚ್ಚ ಸುದೀಪ್​​​​ ಅವರಿಗೆ ಸಾಥ್​​ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಘು, ಶ್ರೀಮುರಳಿಯನ್ನ ತಬ್ಬಿ ಸಾಂತ್ವನ ಹೇಳಿದ ಕಿಚ್ಚ ಸುದೀಪ್​​ ದಂಪತಿ

https://newsfirstlive.com/wp-content/uploads/2023/09/vijay-3.jpg

Load More