newsfirstkannada.com

ಕಿಚ್ಚನ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್; ಪತಿಗಾಗಿ ಕಾದಿದೆ ಭರ್ಜರಿ ಗಿಫ್ಟ್​ ಎಂದ ಪ್ರಿಯಾ ಸುದೀಪ್​; ಸರ್ಪ್ರೈಸ್‍ ಏನು!?

Share :

01-09-2023

    ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ ಎಂದ ಪತ್ನಿ ಪ್ರಿಯಾ ಸುದೀಪ್

    ನಾಳೆ 52ನೇ ವಸಂತಕ್ಕೆ ಕಾಲಿಡಲಿದ್ದಾರೆ ಸ್ಯಾಂಡಲ್‌ವುಡ್‌ ಕಿಚ್ಚ ಸುದೀಪ್​

    ಇಂದು ಮಧ್ಯರಾತ್ರಿಯಿಂದಲೇ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಸೆಲೆಬ್ರೇಷನ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಭರ್ಜರಿ ಸೆಲೆಬ್ರೇಷನ್‌ಗೆ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ತಮ್ಮ ನೆಚ್ಚಿನ ಕಿಚ್ಚನ 52ನೇ ಬರ್ತ್ ​​​ಡೇ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ ಅಭಿಮಾನಿಗಳು. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಕಿಚ್ಚ ಸುದೀಪ್ ಅವರ ಬರ್ತ್ ​​ಡೇಗೆ ಸ್ಟೇಜ್ ಕೂಡ ರೆಡಿಯಾಗಿದೆ.

ಬರ್ತ್‌ ಡೇಗೆ ಕೌಂಟ್‌ಡೌನ್ ಶುರುವಾಗಿರುವಾಗ ನಟ ಸುದೀಪ್​ ಪತ್ನಿ ಪ್ರಿಯಾ ಸುದೀಪ್​​ ಕಿಚ್ಚನ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. X ಖಾತೆಯಲ್ಲಿ ‘‘ಇಂದು ನಿಮ್ಮ ಪ್ರೀತಿಯ ಕಿಚ್ಚ ಸುದೀಪ್‌  ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅದ್ಧೂರಿ ಅಚ್ಚರಿಯೊಂದು ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ’’ ಎಂದು ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ಕಿಚ್ಚ ಸುದೀಪ್​ ಅವರ ಹೊಸ ಸಿನಿಮಾದ ಟೈಟಲ್ ಟೀಸರ್ ರೆಡಿಯಾಗಿದ್ದು, ಸೆಪ್ಟೆಂಬರ್ 2ರಂದು ಮಧ್ಯರಾತ್ರಿ 12.01ಕ್ಕೆ ಟೀಸರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತಂತೆ ಪೋಸ್ಟರ್​ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇನ್ನು ಚಿತ್ರ ಟೈಟಲ್ ಏನಿರಬಹುದು ಎಂದು ಅಭಿಮಾನಗಿಳು ಕುತೂಹಲದಿಂದ ಕಾಯ್ತಾ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚನ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್; ಪತಿಗಾಗಿ ಕಾದಿದೆ ಭರ್ಜರಿ ಗಿಫ್ಟ್​ ಎಂದ ಪ್ರಿಯಾ ಸುದೀಪ್​; ಸರ್ಪ್ರೈಸ್‍ ಏನು!?

https://newsfirstlive.com/wp-content/uploads/2023/09/kichha-1.jpg

Load More