ಬ್ಯಾಕ್ ಟು ಬ್ಯಾಕ್ 4 ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಬ್ಯುಸಿ
ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಅಭಿನಯ ಚಕ್ರವರ್ತಿ
ಕಿಚ್ಚನ 50ನೇ ಸಿನಿಮಾ ಯಾವುದು? ಆ ಸ್ಟಾರ್ ಡೈರೆಕ್ಟರ್ ಯಾರು?
ಪ್ರತಿಯೊಬ್ಬ ಹೀರೋಗು 25ನೇ ಸಿನಿಮಾ, 50ನೇ ಸಿನಿಮಾ, 100ನೇ ಸಿನಿಮಾ ತುಂಬಾನೇ ಸ್ಪೆಷಲ್. ಸದ್ಯ ಕಿಚ್ಚ ಸುದೀಪ್ 46ನೇ ಚಿತ್ರ ಮಾಡ್ತಿದ್ದು, 49ನೇ ಸಿನಿಮಾವರೆಗೂ ಅಫಿಶಿಯಲ್ ಆಗಿ ಲೈನ್ ಅಪ್ ಮಾಡ್ಕೊಂಡಿದ್ದಾರೆ. ಬಟ್ 50ನೇ ಸಿನಿಮಾ ಸಸ್ಪೆನ್ಸ್. ಈ ಚಿತ್ರಕ್ಕಾಗಿ ಮೂವರು ಸ್ಟಾರ್ ಡೈರೆಕ್ಟರ್ಗಳ ನಡುವೆ ಪೈಪೋಟಿ ಇದೆ. ಈ ಮೂವರಲ್ಲಿ ಯಾರಾಗ್ತಾರೆ ಕಿಚ್ಚನ 50ನೇ ಪ್ರಾಜೆಕ್ಟ್ಗೆ ಕ್ಯಾಪ್ಟನ್ ಅನ್ನೋದು ಈಗ ಹೈ ವೋಲ್ಟೇಜ್ ಕುತೂಹಲ.. ಅದಕ್ಕೆ ಉತ್ತರ ಇಲ್ಲಿದೆ ನೋಡಿ..!
25 ವರ್ಷ.. ನಾಲ್ಕು ಭಾಷೆ.. ಹತ್ ಹತ್ರಾ 45ನೇ ಸಿನಿಮಾಗಳಲ್ಲಿ ಹೀರೋ ಆಗಿ ನಟನೆ.. ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಗೆಸ್ಟ್ ಅಪಿರಿಯೆನ್ಸ್.. ಸ್ಯಾಂಡಲ್ವುಡ್ನ ಆರಡಿ ಕಟೌಟ್.. ಪ್ಯಾನ್ ಇಂಡಿಯಾದ ಮಲ್ಟಿಟ್ಯಾಲೆಂಟೆಂಡ್ ಸ್ಟಾರ್… ದಿ ನೇಮ್ ಈಸ್ ಕಿಚ್ಚ ಸುದೀಪ್..
ವಿಕ್ರಾಂತ್ ರೋಣ ರಿಲೀಸ್ ಆಗಿ ಒಂದೂವರೆ ವರ್ಷದ ನಂತರ ಹೊಸ ಚಿತ್ರ ಆರಂಭಿಸಿದ್ದಾರೆ ಸುದೀಪ್. ಹಾಗ್ನೋಡಿದ್ರೆ ಹೆಚ್ಚು ಕಡಿಮೆ ಎರಡು ವರ್ಷದ ನಂತರ ಕ್ಯಾಮೆರಾ ಫೇಸ್ ಮಾಡ್ತಿದ್ದಾರೆ. ಸದ್ಯ ತಮಿಳು ನಿರ್ಮಾಪಕ ಕಲೈಪುಲಿ ಎಸ್ ಥನು ನಿರ್ಮಾಣದಲ್ಲಿ 46ನೇ ಸಿನಿಮಾ ಆರಂಭಿಸಿದ್ದು, ತಮಿಳುನಾಡಿನ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೀತಿದೆ. ಇತ್ತೀಚೆಗಷ್ಟೇ ಬರ್ತ್ಡೇ ಪ್ರಯುಕ್ತ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದು, ಕನ್ನಡ ಹಾಗೂ ತಮಿಳಿನಲ್ಲಿ ತಯಾರಾಗ್ತಿರುವ ಈ ಚಿತ್ರಕ್ಕೆ ‘ಮ್ಯಾಕ್ಸ್’ ಎಂದು ಟೈಟಲ್ ಫೈನಲ್ ಮಾಡಲಾಗಿದೆ.
ಮ್ಯಾಕ್ಸ್ ಟೀಸರ್
ತಮಿಳಿನ ನವ ನಿರ್ದೇಶಕ ವಿಜಯ್ ಕಾರ್ತಿಕೇಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಒಂದೇ ಶೆಡ್ಯೂಲ್ನಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ನಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅಕ್ಟೋಬರ್ ವೇಳೆ ಸಿನಿಮಾ ಕಂಪ್ಲೀಟ್ ಆಗಿ ಫಸ್ಟ್ ಕಾಪಿನೂ ರೆಡಿಯಾಗ್ಬೇಕು ಅನ್ನೋದು ಕಿಚ್ಚನ ಖಡಕ್ ನಿರ್ಧಾರವಾಗಿದ್ದು, ಆ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡ್ತಿದೆ. ಸರಿ 46ನೇ ಪಿಚ್ಚರ್ ಸಿಕ್ಕಾಗಿದೆ, ಇದಾದ ಮೇಲೆ ಮುಂದಿನ ಸಿನಿಮಾಗಳ ಕಥೆ ಏನು ಅಂತ ನೋಡಿದ್ರೆ 49ನೇ ಸಿನಿಮಾವರೆಗೂ ಕಥೆ ಹಾಗೂ ಡೈರೆಕ್ಟರ್ ಫೈನಲ್ ಮಾಡ್ಕೊಂಡಿದ್ದಾರೆ ಸುದೀಪ್.
ಬ್ಯಾಕ್ ಟು ಬ್ಯಾಕ್ ನಾಲ್ಕು ಪ್ರಾಜೆಕ್ಟ್ಗೆ ಚಾಲನೆ ಕೊಟ್ಟ ಕಿಚ್ಚ!
ಕಲೈಪುಲಿ ಪ್ರೊಡಕ್ಷನ್ನಲ್ಲಿ 46ನೇ ಸಿನಿಮಾ ಸಾಗ್ತಿದ್ರೆ ಇದಾದ ಮೇಲೆ 47ನೇ ಚಿತ್ರವನ್ನ ತಮಿಳಿನ ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್ನಲ್ಲಿ ಮಾಡಲಿದ್ದಾರೆ. ‘ಮೈ ಆಟೋಗ್ರಾಫ್’ ಖ್ಯಾತಿಯ ಚರಣ್ ಈ ಸಿನಿಮಾ ನಿರ್ದೇಶಿಸ್ತಿದ್ದು, ಅನೌನ್ಸ್ಮೆಂಟ್ ಪೋಸ್ಟರ್ ಸಹ ರಿಲೀಸ್ ಆಗಿದೆ. ಈ ಚಿತ್ರದ ಬಳಿಕ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣದಲ್ಲಿ 48ನೇ ಸಿನಿಮಾ ಸೆಟ್ಟೇರಲಿದೆ. ವಿಶೇಷ ಅಂದ್ರೆ ಈ ಚಿತ್ರವನ್ನ ಸ್ವತಃ ಸುದೀಪ್ ನಿರ್ದೇಶಿಸಲಿದ್ದಾರೆ. ಈ ಮೂಲಕ 10 ವರ್ಷದ ನಂತರ ಕಿಚ್ಚ ಮತ್ತೆ ಡೈರೆಕ್ಷನ್ ಕ್ಯಾಪ್ ತೊಡಲಿದ್ದಾರೆ.
ಆ ಬಳಿಕ ಸ್ಟಾರ್ ಡೈರೆಕ್ಟರ್ ಆರ್ ಚಂದ್ರು ಜೊತೆಯೂ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಮಾಡಿದ್ದು, ಆರ್ ಚಂದ್ರು ಸಾರಥ್ಯ ವಹಿಸಿದ್ದಾರೆ. ಹೀಗಾಗಿ ಚಂದ್ರುಗೆ ಸುದೀಪ್ ಕಾಲ್ಶೀಟ್ ಕೊಟ್ಟಿದ್ದು ಇದು 49ನೇ ಸಿನಿಮಾ ಆಗಲಿದೆ.
ಅಭಿನಯ ಚಕ್ರವರ್ತಿಯ 50ನೇ ಸಿನಿಮಾ ಯಾವುದು?
ಯೆಸ್.. ಬ್ಯಾಕ್ ಟು ಬ್ಯಾಕ್ ನಾಲ್ಕು ಚಿತ್ರಗಳನ್ನ ಆರಂಭಿಸಿರುವ ಸುದೀಪ್ 49ನೇ ಚಿತ್ರದವರೆಗೂ ಫೈನಲ್ ಮಾಡ್ಕೊಂಡಿದ್ದಾರೆ.. ಆದರೆ 50ನೇ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ. ಇಲ್ಲೇ ಇರೋದು ವಿಷ್ಯ ನೋಡಿ.. 50ನೇ ಸಿನಿಮಾ ಕಿಚ್ಚನಿಗೆ ಮತ್ತು ಕಿಚ್ಚನ ಭಕ್ತರಿಗೆ ತುಂಬಾನೇ ಸ್ಪೆಷಲ್ ಆಗಿರಲಿದೆ. ಸುದೀಪ್ ಅಭಿಮಾನಿಗಳು ಒಂದು ತೂಕ ಹೆಚ್ಚಾಗಿ ಈ ಚಿತ್ರವನ್ನ ಸೆಲೆಬ್ರೇಟ್ ಮಾಡಬೇಕಿದೆ. ಹಾಗಾಗಿ ಅಳೆದು ತೂಗಿ 50ನೇ ಸಿನಿಮಾ ಮಾಡಬೇಕಾದ ಜವಾಬ್ದಾರಿ ಸುದೀಪ್ ಮೇಲಿದೆ.. ಅದಕ್ಕಾಗಿಯೇ 50ನೇ ಸಿನಿಮಾದ ವಿಚಾರವನ್ನ ಅಫಿಶಿಯಲ್ ಆಗಿ ಉಳಿಸಿಕೊಂಡಿದ್ದಾರೆ..
ಹಾಗ್ನೋಡಿದ್ರೆ ಸುದೀಪ್ ಅವರ 50ನೇ ಸಿನಿಮಾವನ್ನ ಅನೂಪ್ ಭಂಡಾರಿ ನಿರ್ದೇಶಿಸಲಿದ್ದಾರೆ. ಅದು ‘ಬಿಲ್ಲಾ ರಂಗ ಬಾಷ’ ಆಗಲಿದೆ ಎನ್ನಲಾಗುತ್ತಿದೆ. ಹೌದು, ವಿಕ್ರಾಂತ್ ರೋಣ ಆದ್ಮೇಲೆ ಸ್ವತಃ ಸುದೀಪ್ ಅವರೇ ಹೇಳಿರುವಂತೆ ಅನೂಪ್ ಭಂಡಾರಿ ಜೊತೆ ಇನ್ನೊಂದು ಸಿನಿಮಾ ಆಗಲಿದೆ. ಆದರೆ ಅದು 50ನೇ ಸಿನಿಮಾನಾ ಅನ್ನೋದರ ಬಗ್ಗೆ ಕ್ಲಾರಿಟಿ ಇಲ್ಲ. ಇನ್ಫ್ಯಾಕ್ಟ್ 50ನೇ ಸಿನಿಮಾ ಅನೂಪ್ ಭಂಡಾರಿಯೇ ನಿರ್ದೇಶಿಸೋದು ಪಕ್ಕಾ ಆಗಿದ್ರೆ ಬರ್ತ್ಡೇ ದಿನವೇ ಅನೌನ್ಸ್ ಆಗುತ್ತಿತ್ತು.. ಆದರೆ ಹಾಗಾಗಲಿಲ್ಲ. ಸೋ, 50ನೇ ಸಿನಿಮಾ ಇನ್ನೂ ಸೀಕ್ರೆಟ್ ಆಗಿಯೇ ಉಳಿದಿದೆ.
ಅಖಾಡಕ್ಕೆ ಎಂಟ್ರಿ ಕೊಟ್ಟ ಇಬ್ಬರು ಸ್ಟಾರ್ ಡೈರೆಕ್ಟರ್ಸ್!
ಕಿಚ್ಚನ 50ನೇ ಸಿನಿಮಾನ ಅನೂಪ್ ಭಂಡಾರಿ ನಿರ್ದೇಶಿಸಲ್ಲ ಅನ್ನುವುದಾದರೇ ಬೇರೆ ಯಾರಿಗೆ ಆ ಚಾನ್ಸ್ ಸಿಗುತ್ತೆ ಅಂತ ನೋಡಿದ್ರೆ ಮೊದಲ ಆಯ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎನ್ನಲಾಗ್ತಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ರಕ್ಷಿತ್ ಶೆಟ್ಟಿ ಮತ್ತು ಸುದೀಪ್ ಕಾಂಬಿನೇಷನ್ನಲ್ಲಿ ಇಷ್ಟೊತ್ತಿಗಾಗ್ಲೇ ಒಂದು ಸಿನಿಮಾ ಸೆಟ್ಟೇರಬೇಕಿತ್ತು.. ‘ಥಗ್ಸ್ ಆಫ್ ಮಾಲ್ಗುಡಿ’ ಎನ್ನುವ ಚಿತ್ರವನ್ನ ಸುದೀಪ್ ಜೊತೆ ಮಾಡುವುದಾಗಿ ರಕ್ಷಿತ್ ಸಹ ಹೇಳಿಕೊಂಡಿದ್ದರು. ಆಮೇಲೆ ಏನಾಯ್ತೋ ಆ ಚಿತ್ರ ಸೈಲೆಂಟ್ ಆಗೋಯ್ತು.. ಹಾಗಂತ ಈ ಕಾಂಬಿನೇಷನ್ ಮುರಿದು ಬಿದ್ದಿಲ್ಲ. ಸದ್ಯದ ಲೆಕ್ಕಾಚಾರದ ಪ್ರಕಾರ ಕಿಚ್ಚನ 50ನೇ ಸಿನಿಮಾಗೆ ರಕ್ಷಿತ್ ಶೆಟ್ಟಿ ಸಾರಥಿ ಆದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಕಿಚ್ಚನ ಬಳಗ..
ರಿಷಬ್ ಶೆಟ್ಟಿಗೆ ಸಿಗುತ್ತಾ ಕಿಚ್ಚನ 50ನೇ ಸಿನಿಮಾ?
ಅಖಾಡಕ್ಕೆ ಹೊಸ ಆಟಗಾರನ ಎಂಟ್ರಿ ಎನ್ನುವಂತೆ ಕಿಚ್ಚನ 50ನೇ ಸಿನಿಮಾದ ಅವಕಾಶ ರಿಷಬ್ ಶೆಟ್ಟಿಗೆ ಸಿಕ್ಕರೂ ಸಿಗಬಹುದಂತೆ.. ಈ ಹಿಂದೆಯೇ ಮಾತುಕತೆ ಆದಂತೆ ರಿಷಬ್ ಶೆಟ್ಟಿ ಮತ್ತು ಸುದೀಪ್ ಒಂದು ಸಿನಿಮಾ ಮಾಡಬೇಕಿದೆ.. ಒಂದು ವೇಳೆ ಸಮಯ ಕೂಡಿ ಬಂದರೇ ಕಿಚ್ಚನ 50ನೇ ಚಿತ್ರದ ಅವಕಾಶ ಕಾಂತಾರ ಹೀರೋಗೆ ಹೋದರೂ ಹೋಗಬಹುದು ಎಂದು ಹೇಳ್ತಿದ್ದಾರೆ ಸುದೀಪ್ ಆಪ್ತರು..!
ಎನಿ ವೇ… ಸುದೀಪ್ ಪಾಲಿಗೆ ಹಾಗೂ ಸುದೀಪ್ ಅಭಿಮಾನಿಗಳ ಪಾಲಿಗೆ 50ನೇ ಸಿನಿಮಾ ತುಂಬಾನೇ ವಿಶೇಷ.. ಹೆಚ್ಚು ಕಡಿಮೆ ಇನ್ನೂ ಮೂರು ವರ್ಷಕ್ಕೆ ಆಗುವಷ್ಟು ಸಿನಿಮಾಗಳನ್ನ ಅಭಿನಯ ಚಕ್ರವರ್ತಿ ಲೈನ್ ಅಪ್ ಮಾಡ್ಕೊಂಡಿದ್ದಾರೆ.. ಈ ಸಿನಿಮಾಗಳು ಮುಗಿಯೋತ್ತಿಗೆ 50ನೇ ಚಿತ್ರದ ಗುಟ್ಟು ಬಿಟ್ಟು ಕೊಡ್ತಾರೆ ಎನ್ನಬಹುದು.. ಕೊನೆಯಲ್ಲಿ ಮತ್ತೊಂದು ಸರ್ಪ್ರೈಸ್ 50ನೇ ಸಿನಿಮಾವನ್ನ ಕಿಚ್ಚ ಕ್ರಿಯೇಷನ್ಸ್ನಲ್ಲೇ ಆಗಬಹುದಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ