newsfirstkannada.com

ದರ್ಶನ್ ಅಭಿಮಾನಿಗಳಿಗೆ 5 ಬುದ್ಧಿವಾದ? ಕಿಚ್ಚನ ಪಂಚಿಂಗ್ ಡೈಲಾಗ್‌ ಬಳ್ಳಾರಿ ಜೈಲಿಗೂ ತಲುಪಿತಾ?

Share :

Published September 2, 2024 at 8:51pm

    ಹುಟ್ಟು ಹಬ್ಬದ ದಿನದಂದು ದರ್ಶನ್ ಮತ್ತು ದರ್ಶನ್​ ಫ್ಯಾನ್ಸ್​ಗೆ ಕಿಚ್ಚ ಕೌಂಟರ್?

    ಕಿಚ್ಚನ ಒಂದೊಂದು ಮಾತು ದರ್ಶನ್​ರನ್ನ ಟಾರ್ಗೆಟ್​ ಮಾಡಿದಂತೆ ಅನಿಸಿದ್ದು ಏಕೆ?

    ಫ್ಯಾನ್ಸ್ ನನ್ನನ್ನು ತಗ್ಗಿ, ಬಗ್ಗಿ ನಡೆಸ್ತಿದ್ದಾರೆ, ಫ್ಯಾನ್ಸ್‌ಗಳೇ ನನ್ನ ದಾರಿ ದೀಪ ಎಂದ ಸುದೀಪ

ಬೆಂಗಳೂರು:  ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿಗೆ ಇಂದು ಬರ್ತ್​ಡೇ ಸಂಭ್ರಮ. ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬವಬ್ಬು ಆಚರಿಸಿಕೊಂಡ ಸುದೀಪ್​, ಹುಟ್ಟು ಹಬ್ಬದ ಸಡಗರದಲ್ಲಿದ್ದ ಸುದೀಪ್ ಒಟ್ಟು 10 ಪಂಚ್​​ಗಳನ್ನು ಕೊಟ್ಟಿದ್ದಾರೆ. ಆ ಪಂಚ್​ಗಳು ಯಾರಿಗೆ, ಯಾಕೆ ಮತ್ತು ಹೇಗೆಲ್ಲಾ ಕೊಟ್ಟರು ಅನ್ನೋದು ಅವರ ಹೇಳಿಕೆಗಳನ್ನು ಗಮನಿಸಿದ್ರೆ ಸ್ಪಷ್ಟವಾಗಿ ಅರ್ಥವಾಗುತ್ತೆ. ಇಂದು ಅಭಿಮಾನಿಗಳ ಎದುರು ಬರ್ತ್‌ಡೇ ಆಚರಿಸಿಕೊಂಡು ಮೈಕ್ ಹಿಡಿದ ಕಿಚ್ಚನ ಬಾಯಿಂದ ಹೊರಬಿದ್ದ ಒಂದೊಂದು ಮಾತು ಅಕ್ಷರಶಃ ಬಾಕ್ಸಿಂಗ್‌ನ ಪಂಚ್‌ಗಿಂತಲೂ ಪವರ್‌ಫುಲ್ ಆಗಿದ್ದವು.

ಇದನ್ನೂ ಓದಿ: VIDEO: ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ ಎಂದ ಕಿಚ್ಚ ಸುದೀಪ್​! ಹುಟ್ಟುಹಬ್ಬದಂದು ಹಿಂಗದ್ರಾ?

ನನ್ನ ಫ್ಯಾನ್ಸ್​ ನನಗೆ ಕಳಂಕ ತಂದಿಲ್ಲ..ನಾನೂ ತರುವುದಿಲ್ಲ!
ಈ ಒಂದು ಹೇಳಿಕೆಯಿಂದ ಈಗ ದೊಡ್ಡ ಕಿಚ್ಚು ಹೊತ್ತಿಕೊಂಡಿದೆ. ಸ್ಟಾರ್ ಎನಿಸಿಕೊಂಡವರ ಫ್ಯಾನ್ಸ್ ಹೇಗಿರಬೇಕು ಹೇಗಿದ್ರೆ ಒಳ್ಳೆಯದು ಎಷ್ಟರ ಮಿತಿಯಲ್ಲಿರ್ಬೇಕು ಅನ್ನೋ ಚರ್ಚೆ ಈಗ ಕಿಚ್ಚನ ಮಾತಿನಿಂದಾಗಿ ಬೇರೆದ್ದೆ ಮಜಲಿಗೆ ತಲುಪಿದದೆ. ಒನ್ಸ್ ಅಪಾನ್‌ ಎ ಟೈಮ್‌ ಬೆಸ್ಟ್ ಫ್ರೆಂಡ್ ದಚ್ಚು ಫ್ಯಾನ್ಸ್‌ಗಳಿಗೆೆ ಕಿಚ್ಚ ಪಂಚ್‌ಗಳ ಮೇಲೆ ಪಂಚ್ ಕೊಟ್ರಾ? ನನ್ನ ಫ್ಯಾನ್ಸ್ ನನ್ನ ಫ್ಯಾನ್ಸ್ ಎನ್ನುತ್ತಲೇ ದಾಸನ ಅಭಿಮಾನಿಗಳಿಗೆ ನೀತಿಪಾಠ ಮಾಡಿದ್ರಾ? ಅನ್ನೊ ಡೌಟ್​ಗಳು ಬರ್ತಿವೆ.

ಪಂಚ್​-01
‘ನನ್ನ ಫ್ಯಾನ್ಸ್ ಎಂದಿಗೂ ಕಳಂಕ ತರೋ ಕೆಲಸ ಮಾಡಿಲ್ಲ ಅಂದಿದ್ದೇಕೆ ಸುದೀಪ್
ಸದ್ಯ ದರ್ಶನ್ ಅಭಿಮಾನಿಗಳ ಅತಿರೇಕವನ್ನು ತಕ್ಕಡಿಯಲ್ಲಿಟ್ಟು ತೂಗುತ್ತಿದೆ ಕರ್ನಾಟಕ. ಇದು ಅಭಿಮಾನವಾ ಅಂಧಾಭಿಮಾನವಾ ಅನ್ನೋ ಚರ್ಚೆಗಳು ಹುಟ್ಟುತ್ತಿವೆ. ದರ್ಶನ್ ಅಭಿಮಾನಿಗಳ ಪರಾಕಾಷ್ಠೆ ಕೆಲವೊಮ್ಮೆ ಹೇವರಿಕೆ ತರಿಸುತ್ತವೆ. ಇದೇ ಸಮಯದಲ್ಲಿಯೇ ಕಿಚ್ಚ ಸೈಲೆಂಟಾಗಿ ಕೊಟ್ಟಿರೋ ಈ ಪಂಚ್ ಕಾಟೇರನ ಫ್ಯಾನ್ಸ್‌ಗಾ? ನನ್ನ ಫ್ಯಾನ್ಸ್ ನನ್ನ ಪ್ರತಿಬಿಂಬ, ನನ್ನ ಫ್ಯಾನ್ಸ್ ಎಂದಿಗೂ ಕಳಂಕ ತಂದಿಲ್ಲ, ನನ್ನ ಫ್ಯಾನ್ಸ್‌ಗಳಿಂದ ನಾನು ತಲೆ ಎತ್ಕೊಂಡು ಓಡಾಡ್ತಿದ್ದೀನಿ. ನನ್ನ ಫ್ಯಾನ್ಸ್, ನನ್ನ ಫ್ಯಾನ್ಸ್, ಅನ್ನುತ್ತಿರೋ ಸುದೀಪ್ ದರ್ಶನ್‌ಗೆ ಮಾತಿನ ಪಂಚ್ ಕೊಟ್ರಾ?

ಪಂಚ್​-02
‘ಸಿನಿಮಾ ಎಲ್ರೂ ಮಾಡ್ತಾರೆೆ.. ಸಿನಿಮಾಕ್ಕಿಂತ ವ್ಯಕ್ತಿತ್ವ ಮುಖ್ಯ’
ಅಭಿನಯ ಚಕ್ರವರ್ತಿಯ ಈ ಒಂದು ಹೇಳಿಕೆ ಈಗ ಹಲವು ಅನುಮಾನಗಳನ್ನು ಹುಟ್ಟಿ ಹಾಕೋದು ಸ್ಪಷ್ಟ. ಇದು ಯಾರಿಗೆ ಹೇಳ್ತಿದ್ದಾರೆ, ಯಾಕಾಗಿ ಹೇಳ್ತಿದ್ದಾರೆ ಅನ್ನೊದು ಕೂಡ ಸ್ಪಷ್ಟವಾಗುತ್ತಿದೆ. ದರ್ಶನ್ ಅಭಿಮಾನಿಗಳಿಗೆ ಪರೋಕ್ಷವಾಗಿ ಕಿಚ್ಚ ಮಾತಿನ ಬಾಣ ಎಸೆದರು ಅನ್ನೋ ಅನುಮಾನವು ಮತ್ತಷ್ಟು ಗಟ್ಟಿಯಾಗುತ್ತೆ.

ಇದನ್ನೂ ಓದಿ: ಕೊನೆಗೂ ದರ್ಶನ್‌ ಆಸೆ ಈಡೇರಿಸಿದ ಜೈಲಾಧಿಕಾರಿಗಳು.. ಬಳ್ಳಾರಿ ಸೆಲ್‌ಗೆ ಬಂತು ಸ್ಪೆಷಲ್ ಚೇರ್‌; ಯಾಕೆ?

ದರ್ಶನ್ ಮತ್ತು ಅವ್ರ ಅಭಿಮಾನಿಗಳ ವಿರುದ್ಧ ಆಕ್ರೋಶಗೊಂಡಿದ್ದ ಕೆಲವರು ಇಂಥಾ ಸಾಧನೆ ಸಾಧನೆಯಲ್ಲ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗದೇ ಹೋದ್ರೆ ಎಷ್ಟು ಎತ್ತರಕ್ಕೆ ಬೆಳೆದರೇನು? ಎಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ರೇನು? ಎಲ್ಲವೂ ಕಾಲಕಸಕ್ಕೆ ಸಮ ಅಂತಾ ಆಕ್ರೋಶದ ಮಾತಾಡಿದ್ರು. ಸುದೀಪ್ ಕೂಡ ಬರ್ತ್‌ಡೇ ಹಿಂದಿನ ಮಾತಾಡಿ ನನ್ನ ಫ್ಯಾನ್ಸ್‌ಗಾದ್ರೆ ನಾವ್ ಹೇಳ್ಬೋದು.. ಬೇರೆಯವ್ರ ಫ್ಯಾನ್ಸ್‌ಗೆ ನಾವು ಹೆಂಗ್ ಹೇಳೋಕಾಗತ್ತೆ ಅಂತಾ ದರ್ಶನ್‌ ಅಭಿಮಾನಿಗಳಿಗೆ ಇನ್‌ಡೈರೆಕ್ಟ್ ಮೆಸೇಜ್ ರವಾನಿಸಿದ್ರು. ಇದೀಗ ‘ಸಿನಿಮಾ ಮಾಡೋದು, ಹೆಸ್ರು ಮಾಡೋದು ಮುಖ್ಯವಲ್ಲ.. ವ್ಯಕ್ತಿತ್ವ ಚೆನ್ನಾಗಿರ್ಬೇಕು, ಸುತ್ತ ಇರೋರ ಜೊತೆ ಚೆನ್ನಾಗಿ ಬದುಕಬೇಕು’ ಎಂಬ ಸಂದೇಶ ಕೊಟ್ಟು ದಚ್ಚು ಫ್ಯಾನ್ಸ್ ಕಾಲೆಳೆದ್ರಾ? ಉತ್ತರ ಈ ಡೈಲಾಗ್‌ನಲ್ಲಿದೆ ನೋಡಿ.

ಪಂಚ್ – 03
‘ಬೆಳೆಯೋದು ಮುಖ್ಯವೇ ಅಲ್ಲ’ ಈ ಮಾತು ಯಾರಿಗೆ?
ಬೆಳೋಯೋದು ಮುಖ್ಯ ಅಲ್ಲ. ಯಾವ ವಾತಾವರಣದಲ್ಲಿ, ಯಾರ ಜೊತೆ ಬೆಳಿತೀವಿ ಅನ್ನೋಕೆ ಮುಖ್ಯ. ಇದು ಕಿಚ್ಚ ಹೊಡೆದಿರೋ ಡೈಲಾಗ್, ಕೊಟ್ಟಿರೋ ಪಂಚ್, ನೀಡಿರೋ ಸಂದೇಶ. ಸುದೀಪ್ ಅಭಿಮಾನಿಗಳ ತಮ್ಮ ತಮ್ಮ ಊರುಗಳಲ್ಲಿ ಸುದೀಪ್ ಹೆಸ್ರಲ್ಲಿ ಒಳ್ಳೊಳ್ಳೇ ಸಾಮಾಜಿಕ ಕೆಲಸ ಮಾಡ್ಕೊಂಡು ಬರ್ತಿದ್ದಾರೆ, ಅವರಿಗೆ ಏನು ಹೇಳೋಕೆ ಬಯಸುತ್ತೀರಾ ಅನ್ನೋ ಪ್ರಶ್ನೆ ಕಿಚ್ಚನತ್ತ ತೂರಿಬಂತು. ಆಗ ಕಿಚ್ಚ ಕೊಟ್ಟ ರಿಯಾಕ್ಷನ್ ಇದು. ಹಾಗಾದ್ರೆ, ನಾನು ಉತ್ತಮ ಅಭಿಮಾನಿಗಳ ನಡುವೆ ಬೆಳೆದು ನಿಂತಿದ್ದೇನೆ ಅನ್ನೋದು ಸುದೀಪ್ ಸಂದೇಶವಾಗಿತ್ತಾ? ಆ ಸಂದೇಶ ಬಳ್ಳಾರಿ ಜೈಲಿನ ಸೆಲ್‌ ನಂಬರ್ 15 ರಲ್ಲಿ ಲಾಕ್ ಆಗಿರೋ ದರ್ಶನ್‌ಗೆ ರವಾನಿಸಿದ್ದಾ?

ಇದನ್ನೂ ಓದಿ: ವಿಕ್ರಾಂತ್​​ ರೋಣ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್ ಮತ್ತು ಅನೂಪ್​ ಭಂಡಾರಿ.. ಹೊಸ ಸಿನಿಮಾ ಘೋಷಣೆ

ಪಂಚ್ – 04
ಫ್ಯಾನ್ಸ್ ನನ್ನನ್ನು ತಗ್ಗಿ, ಬಗ್ಗಿ ನಡೆಸ್ತಿದ್ದಾರೆ. ನನ್ನ ಫ್ಯಾನ್ಸ್‌ಗಳೇ ನನ್ನ ದಾರಿದೀಪ
ತಗ್ಗಿ, ಬಗ್ಗಿ ನಡೆಯೋಕೆ ಫ್ಯಾನ್ಸ್‌ಗಳೇ ಕಾರಣ. ಅಭಿನಯ ಚಕ್ರವರ್ತಿ ಅಂತ ಬಿರುದು ಪಡ್ಕೊಂಡಿರೋ ನಟ ಸುದೀಪ್ ಇಂಥಾದ್ದೊಂದು ಹೇಳಿಕೆ ನೀಡಿರೋದು ಭಾರೀ ಸಂಚಲನ ಸೃಷ್ಟಿಸಿದೆ. ತನಗೆ ಯಾರಿಗೂ ಇರದಷ್ಟು ಫ್ಯಾನ್ಸ್‌ಗಳಿದ್ದಾರೆ ಎಂಬ ಕಾರಣಕ್ಕಾಗಿಯೇ ದರ್ಶನ್ ಅಷ್ಟು ಅಹಂಕಾರದಿಂದ ಮೆರೀತಿದ್ರು ಅನ್ನೋದು ಹಲವರ ಆಕ್ರೋಶದ ಮಾತು, ಫ್ಯಾನ್ಸ್ ಸಂಖ್ಯೆ, ದುಡ್ಡು, ಫೇಮ್ ಬಂದಕೂಡಲೆ ದರ್ಶನ್‌ ತಲೆೆಗೆ ಅಹಂಕಾರ ಏರಿತ್ತು ಅನ್ನೋದು ಸಿನಿರಂಗದ ಹಿರಿಯರೇ ಹೇಳಿರೋ ಮಾತು. ಇಲ್ಲಿ ನೋಡಿದ್ರೆ, ಸುದೀಪ್ ತನ್ನನ್ನು ತಗ್ಗಿ, ಬಗ್ಗಿ ನಡೆಸ್ತಿರೋದು ಅಭಿಮಾನಿಗಳೇ ಅಂತಾ ಹೇಳಿ ಸಿಗ್ನಲ್, ಕೌಂಟರ್, ಪಂಚ್ ಕೊಟ್ಟಿದ್ದಾದ್ರೂ ಯಾರಿಗೆ? ದರ್ಶನ್‌ಗಾ? ದರ್ಶನ್ ಫ್ಯಾನ್ಸ್‌ಗಾ? ಅದು ಅವರಿಗೆ ಮಾತ್ರ ಗೊತ್ತು.

ಪಂಚ್ – 05
ಫ್ಯಾನ್ಸ್‌ ನನ್ನನ್ನು ಫಾಲೋ ಮಾಡೋಲ್ಲ; ನಾನು ಫ್ಯಾನ್ಸ್‌ಗಳನ್ನ ಫಾಲೋ ಮಾಡ್ತೀನಿ
ನಿಮ್ಮನ್ನು ಫಾಲೋ ಮಾಡ್ಕೊಂಡು ನಿಮ್ಮ ಫ್ಯಾನ್ಸ್ ಇಷ್ಟು ಸಭ್ಯಸ್ಥರಾಗಿದ್ದಾರೆ, ಪ್ರೀತಿಪಾತ್ರರಾಗಿದ್ದಾರೆ, ಗಲಾಟೆ ಗದ್ದಲಗಳಿಲ್ಲದೆ ಇದ್ದಾರೆ ಅನ್ನೋ ಪ್ರಶ್ನೆ ಕಿಚ್ಚನೆದುರು ಬಂತು. ಆಗ, ಸುದೀಪ್ ಕೊಟ್ಟ ಆನ್ಸರ್ ಇದ್ಯಲ್ಲ.. ಇದು ಪಕ್ಕಾ ದರ್ಶನ್‌ ಅಭಿಮಾನಿಗಳೇ ಕೊಟ್ಟ ಪಂಚ್ ಅನ್ನೋ ಹಾಗಿತ್ತು. ನನ್ನ ಫ್ಯಾನ್ಸ್‌ಗಳು ತೋರಿಸೋ ಪ್ರೀತಿಯಲ್ಲಿ ಜಸ್ಟ್ 1 ಪರ್ಸೆಂಟ್ ನನ್ನೊಳಗೆ ಇದ್ದಿದ್ದಕ್ಕೆ ಇಲ್ಲಿ ನಿಲ್ಲಿಂತಿದ್ದೇನೆ ಅನ್ನೋದು ಕಿಚ್ಚನ ಪಂಚಿಂಗ್ ಡೈಲಾಗ್ ಆಗಿತ್ತು. ಹಾಗಾದ್ರೆ, ಕಿಚ್ಚನ ಪಂಚ್ ಯಾರಿಗೆ? ಹೆಚ್ಚು ಕಡಿಮೆ ನಿಮಗೆ ಅರ್ಥ ಆಗಿರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಅಭಿಮಾನಿಗಳಿಗೆ 5 ಬುದ್ಧಿವಾದ? ಕಿಚ್ಚನ ಪಂಚಿಂಗ್ ಡೈಲಾಗ್‌ ಬಳ್ಳಾರಿ ಜೈಲಿಗೂ ತಲುಪಿತಾ?

https://newsfirstlive.com/wp-content/uploads/2024/09/Sudeep-Darshan.jpg

Load More