newsfirstkannada.com

BIGG BOSS​ ಮನೆಗೆ 2ನೇ ಬಾರಿಗೆ ಪೊಲೀಸರ ಭೇಟಿ.. ಭೋವಿ ಜನಾಂಗದ ಬಗ್ಗೆ ನಿಂದನೆ ಬೆನ್ನಲ್ಲೇ ತನಿಷಾ ಮೇಲೆ ಮತ್ತೊಂದು FIR​

Share :

15-11-2023

    ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡಗೆ ಸಂಕಷ್ಟ

    ಪರಪ್ಪನ ಅಗ್ರಹಾರ ಠಾಣೆಗೆ ದಲಿತ ಸಂಘರ್ಷ ಸಮಿತಿ ದೂರು

    ಮಾತಿನ ಭರದಲ್ಲಿ ಆಡಿದ ಪದವೇ ಇದೀಗ ಸುಂದರಿಗೆ ಸಂಕಷ್ಟ

ಬಿಗ್​ಬಾಸ್​ ರಿಯಾಲಿಟಿ ಶೋಗೂ, ವಿವಾದಗಳಿಗೂ ಅವಿನಾಭಾವ ಸಂಬಂಧ ಅನ್ಸುತ್ತೆ, ಈ ಹಿಂದೆ ಹುಲಿ ಉಗುರು ಕೇಸ್​ನಲ್ಲಿ ವರ್ತೂರು ಸಂತೋಷ್ ಬಿಗ್​ಬಾಸ್​ ಮನೆಯಿಂದ ಅರೆಸ್ಟ್​ ಆಗಿ ಹೋಗಿ ಜಾಮೀನಿನ ಮೇಲೆ ಮತ್ತೆ ಬಿಗ್​ಬಾಸ್​ ಮನೆಗೆ ರೀ ಎಂಟ್ರಿಯಾಗಿದ್ದಾರೆ. ಇದೀಗ ಬಿಗ್​ ಬಾಸ್ ಮನೆ​ಯ ಮತ್ತೊಂದು ಸ್ಪರ್ಧಿಗೂ ಸಂಕಷ್ಟ ಶುರುವಾಗಿದೆ. ಮನೆಯಲ್ಲಿ ಆಡಿದ ಅದೊಂದು ಮಾತು ಸಮಸ್ಯೆಯ ಸರಮಾಲೆ ಆಗಿ ಕೊರಳಿಗೆ ಸುತ್ತಿಕೊಳ್ಳುವಂತೆ ಕಾಣ್ತಿದೆ.

ಖಡಕ್ ಮಾತು.. ನೇರ ನುಡಿ.. ಟಾಸ್ಕ್ಗೂ ಸೈ.. ಕಿಚನ್ಗೂ ಜೈ.. ಹೀಗೆ ದೊಡ್ಮನೆಯಲ್ಲಿ ಬೆಂಕಿಯಂತೆ ಆಟವಾಡುತ್ತ ಸಹ ಸ್ಪರ್ಧಿಗಳಿಗೆ ಠಕ್ಕರ್​ ಕೊಡುತ್ತಿದ್ದ ಸುಂದರಿಗೆ ಇದೀಗ ಸಂಕಷ್ಟ ಎದುರಾಗಿದೆ. ಅದೊಂದು ಮಾತಿನಿಂದ ಬಿಗ್​ಬಾಸ್​ ಸ್ಪರ್ಧಿ ತನಿಷಾಗೆ ಕಂಟಕವಾಗಿ ಪರಿಣಮಿಸಿದೆ.

ಭೋವಿ ಸಮಾಜದ ದೂರಿನ ಬೆನ್ನಲ್ಲೇ ಮತ್ತೊಂದು FIR​

ಬಿಗ್ ಬಾಸ್ ಸೀಸನ್​ ಸ್ಫರ್ಧಿಯಾಗಿರುವ ತನಿಷಾ ಕುಪ್ಪಂಡ ವಿರುದ್ಧ ಈಗಾಗಲೇ ಭೋವಿ ಸಮಾಜ ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲಿಸಿತ್ತು. ಇದೀಗ ದಲಿತ ಸಂಘರ್ಷ ಸಮತಿಯಿಂದಲೂ ದೂರು ನೀಡಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ 2ನೇ ಎಫ್​ಐಆರ್​ ದಾಖಲಾಗಿದೆ. ತನಿಷಾ ಡ್ರೋಣ್ ಪ್ರತಾಪ್ ಜೊತೆಗೆ ಮಾತ್ನಾಡುವ ವೇಳೆ ಭೋವಿ ಸಮಾಜಕ್ಕೆ ಅವಹೇಳನ ಮಾಡುವಂತಹ ಅಸಂಬದ್ಧ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ತನಿಷಾ ಕುಪ್ಪುಂಡ ವಿರುದ್ದ ಎಸ್​ಸಿ/ಎಸ್ಟಿ ಕಾಯ್ದೆಯಡಿ ದೂರು ದಾಖಲಾಗಿದೆ.

ಪಿ. ಪದ್ಮಾ, ದೂರುದಾರೆ

ಮಾಗಡಿ ಡಿವೈಎಸ್‌ಪಿ ಪ್ರವೀಣ್ ನೇತೃತ್ವದಲ್ಲಿ ವಿಚಾರಣೆ

ಈ ಹಿಂದೆ ಹುಲಿ ಉಗುರು ಕೇಸ್​ನಲ್ಲಿ ತನಿಖಾಧಿಕಾರಿಗಳು ಬಿಗ್​ಬಾಸ್​ ಮನೆಗೆ ಬಂದಿದ್ದರು. ದೊಡ್ಡ ಹೈಡ್ರಾಮಾದ ಬಳಿಕ ವರ್ತೂರ್ ಸಂತೋಷ್​ರನ್ನ ಬಂಧಿಸಿ ಕರೆದೊಯ್ದಿದ್ದರು. ಇದೀಗ ಮತ್ತೊಮ್ಮೆ ಬಿಗ್​ಬಾಸ್​ ಮನೆಗೆ ಪೊಲೀಸರ ಪ್ರವೇಶವಾಗಿದೆ. ತನಿಷಾ ವಿರುದ್ಧ ಎಫ್​ಐಆರ್​ ಆದ ಬೆನ್ನಲ್ಲೆ ಮಾಗಡಿ ಡಿವೈಎಸ್‌ಪಿ ಪ್ರವೀಣ್ ನೇತೃತ್ವದಲ್ಲಿ ಮಹಜರು ಮಾಡಲಾಗಿದೆ. ಹಾಗೂ ಆರೋಪಕ್ಕೆ ಸಂಬಂಧಿಸಿದಂತೆ, ಬಿಗ್​ಬಾಸ್​ ಸ್ಪರ್ಧಿಗಳಾದ ತನಿಷಾ ಕುಪ್ಪಂಡ ಮತ್ತು ಡ್ರೋನ್​ ಪ್ರತಾಪ್​ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಅನ್ನೋ ಮಾಹಿತಿಯೂ ಲಭ್ಯವಾಗಿದೆ.

ಒಟ್ಟಿನಲ್ಲಿ ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು ಅನ್ನೋ ಹಾಗೆ, ಇದೀಗ ಮಾತಿನ ಭರದಲ್ಲಿ ಆಡಿದ ಪದವೇ ಇದೀಗ ಸುಂದರಿಗೆ ಸಂಕಷ್ಟ ತಂದೊಡ್ಡಿದ್ದು, ಮುಂದೇನು ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS​ ಮನೆಗೆ 2ನೇ ಬಾರಿಗೆ ಪೊಲೀಸರ ಭೇಟಿ.. ಭೋವಿ ಜನಾಂಗದ ಬಗ್ಗೆ ನಿಂದನೆ ಬೆನ್ನಲ್ಲೇ ತನಿಷಾ ಮೇಲೆ ಮತ್ತೊಂದು FIR​

https://newsfirstlive.com/wp-content/uploads/2023/11/Tanisha-Kuppunda.jpg

Load More