newsfirstkannada.com

ತಿರುಪತಿ ತಿಮ್ಮಪ್ಪನ ಮೊರೆ ಹೋದ ಕಿಚ್ಚ ಸುದೀಪ್​; ಬಾದ್‌ ಶಾ ಹೊಸ ಸಿನಿಮಾದ ಪ್ಲಾನ್ ಏನು?

Share :

29-07-2023

    ‘ಕಿಚ್ಚ 46’ ಹೊಸ ಸಿನಿಮಾ ಶೂಟಿಂಗ್ ಶುರು ಮಾಡೋದಕ್ಕೂ ಮುನ್ನ

    ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸ್ಯಾಂಡಲ್‌ವುಡ್‌ ಬಾದ್​ ಶಾ

    ತಿರುಮಲದಲ್ಲಿ ಕಿಚ್ಚನ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ಸ್ಯಾಂಡಲ್​ವುಡ್​​ ಖ್ಯಾತ ನಟ ಕಿಚ್ಚ ಸುದೀಪ್‌ ಅವರು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಿಮ್ಮಪ್ಪನ ದರ್ಶನ ಪಡೆದ ಬಳಿಕ ಹೊರಬರುತ್ತಿದ್ದಂತೆ ಕಿಚ್ಚನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಕಿಚ್ಚ 46 ಚಿತ್ರದ ಟೀಸರ್‌ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದ ಟೀಸರ್​ ರಿಲೀಸ್​ ಆದ ಬೆನ್ನಲ್ಲೇ ನಿರ್ಮಾಪಕ ಎಮ್​.ಎನ್​ ಕುಮಾರ್‌ ಅವರು ಕಿಚ್ಚ ಸುದೀಪ್​ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಹೀಗಾಗಿ ಕೆಲವು ವಿವಾದ ಸುಳಿಯಲ್ಲಿ ಸಿಲುಕಿದ ನಟ ಕಿಚ್ಚ ಸುದೀಪ್‌ ಕೆಲ ಗೊಂದಲಗಳಿಂದ ದೂರ ಉಳಿದುಕೊಳ್ಳಲು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಸದ್ಯ ಕಿಚ್ಚ ಸುದೀಪ್‌ ಅವರು ತಮ್ಮ ಮುಂಬರುವ ಚಿತ್ರದಲ್ಲಿ ಕಿಚ್ಚ 46 ನಲ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್ ಥಾನು ಅವರು ನಿರ್ಮಿಸುತ್ತಿದ್ದಾರೆ. ಇತ್ತೀಚಿಗೆ ಕಿಚ್ಚ 46 ಚಿತ್ರದ ಟೀಸರ್‌ ರಿಲೀಸ್‌ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆಗಸ್ಟ್​ ಮೊದಲ ವಾರದಿಂದ ಕಿಚ್ಚ 46 ಚಿತ್ರೀಕರಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಹೊಸ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡುವುದಕ್ಕೂ ಮುನ್ನ ನಟ ಕಿಚ್ಚ ಸುದೀಪ್​ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ತಿರುಪತಿ ತಿಮ್ಮಪ್ಪನ ಮೊರೆ ಹೋದ ಕಿಚ್ಚ ಸುದೀಪ್​; ಬಾದ್‌ ಶಾ ಹೊಸ ಸಿನಿಮಾದ ಪ್ಲಾನ್ ಏನು?

https://newsfirstlive.com/wp-content/uploads/2023/07/kiccha-sudeep-7.jpg

Load More