newsfirstkannada.com

ನಟ ದರ್ಶನ್​ ಅರೆಸ್ಟ್​; ಕೊಲೆ ಕೇಸ್​ ಬಗ್ಗೆ ಮುಲಾಜಿಲ್ಲದೇ ಕಿಚ್ಚ ಸುದೀಪ್​​ ಕೊಟ್ರು ಸ್ಪಷ್ಟ ಸಂದೇಶ.. ಏನದು?

Share :

Published June 16, 2024 at 10:15pm

  ವಿಜಯಲಕ್ಷ್ಮಿ ಮೇಲಿನ ಅಭಿಮಾನಕ್ಕೆ ಪವಿತ್ರಾ ಗೌಡಗೆ ಮೆಸೇಜ್‌ ಮಾಡಿದ್ದ ರೇಣುಕಾ

  ರೇಣುಕಾ ಹತ್ಯೆಗೆ ದರ್ಶನ್‌ ಮತ್ತು ಪವಿತ್ರಾ ಗೌಡನೇ ನೇರ ಕಾರಣ ಅನ್ನೋ ಆರೋಪ

  ದರ್ಶನ್​ ಬಗ್ಗೆ ಅನಿಸಿದ್ದನ್ನ ಸ್ಟ್ರೇಟ್​ ಆಗಿ ಮುಖದ ಮೇಲೆ ಹೊಡೆಯುವಂತೆ ಹೇಳಿದ ಕಿಚ್ಚ

ಸಿನಿಮಾ ಹೀರೋಗಳ ಮೇಲೆ ಅಭಿಮಾನ ಇರಬೇಕು. ಆದರೆ ಹುಚ್ಚು ಅಭಿಮಾನ ಇರಬಾರದು. ಅದು ಅತಿರೇಕಕೆ ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ರೇಣುಕಾಸ್ವಾಮಿ ಪ್ರಕರಣವೇ ಸಾಕ್ಷಿ. ರೇಣುಕಾಸ್ವಾಮಿ ದರ್ಶನ್‌ ಮೇಲೆ ಅಭಿಮಾನ ಇಟ್ಟುಕೊಂಡು ತನ್ನ ಪಾಡಿಗೆ ತಾನು ಅಂತ ಇದ್ರೆ ಎಲ್ಲವೂ ನೀಟ್‌ ಆಗಿ ಇರ್ತಾ ಇತ್ತು. ಆದ್ರೆ, ಆತ ದರ್ಶನ್‌ ಮತ್ತು ವಿಜಯಲಕ್ಷ್ಮಿ ಮೇಲಿನ ಅಭಿಮಾನಕ್ಕೆ ಪವಿತ್ರಾ ಗೌಡಗೆ ಮೆಸೇಜ್‌ ಮಾಡಿದ್ದಾನೆ. ಅದುವೇ ಅವನಿಗೆ ಕಂಟಕವಾಗಿದೆ.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ದರ್ಶನ್‌ ತನ್ನ ಅಭಿಮಾನಿಗಳನ್ನು ಸೆಲೆಬ್ರಿಟಿ ಅಂತಾನೇ ಕರೆಯುತ್ತಿದ್ರು. ಎದೆಯ ಭಾಗದಲ್ಲಿ ನನ್ನ ಸೆಲೆಬ್ರಿಟಿ ಅಂತಾ ಹಚ್ಚೆ ಹಾಕಿಸಿಕೊಂಡಿದ್ದರು. ಆದ್ರೆ, ಆ ರೀತಿಯಾಗಿ ಅಭಿಮಾನಿಗೆ ಸ್ಥಾನ ಕೊಟ್ಟಿದ್ದ ದರ್ಶನ್‌ ಅಬಿಮಾನಿಯ ಕಥೆಯನ್ನೇ ಮುಗ್ಸಿರೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಅರೆಸ್ಟ್‌ ಆಗಿರೋದು ದರ್ಶನೇ ಆಗಿರ್ಬಹುದು. ಅಥವಾ ಡಿ ಬಾಸ್​ ಗ್ಯಾಂಗ್​​ನಲ್ಲಿರೋ ಉಳಿದ 12 ಜನರೇ ಆಗಿರ್ಬಹುದು. ಇವ್ರು ಸಾಮಾನ್ಯರಲ್ಲ ಅನ್ನೋದು ಈಗಾಗಲೇ ಗೊತ್ತಾಗಿರೋ ವಿಚಾರ. ಅಷ್ಟೇ ಅಲ್ಲ, ಈಗ ಅಂದರ್​ ಆಗಿರೋ ಡಿ ಕಂಪನಿಯಲ್ಲಿ ಉದ್ಯಮಿಗಳ ಜೊತೆಗೆ ಪೊಲಿಟಿಕಲಿ ಸಖತ್​ ಸ್ಟ್ರಾಂಗ್​ ಆಗಿರೋರು ಕೂಡ ಇದ್ದಾರೆ. ರಾಷ್ಟ್ರೀಯ ಪಕ್ಷಗಳ ಶಾಸಕರ ಸಂಬಂಧಿಗಳು, ಪ್ರಭಾವಿ ಮುಖಂಡ ಆಪ್ತರು ಈ ಗ್ಯಾಂಗ್​​ನಲ್ಲಿದ್ದಾರೆ ಅನ್ನೋದು ಗೊತ್ತಾಗಿರೋ ವಿಚಾರ. ಇನ್ನು, ದರ್ಶನ್​ ಕೂಡ ಅನೇಕ ರಾಜಕೀಯ ನಾಯಕರಿಗೆ ಚೆನ್ನಾಗಿಯೇ ಗೊತ್ತಿರುವ ನಟ.

ಅನೇಕ ಸಚಿವರು, ಶಾಸಕರು, ಮಾಜಿಗಳಿಗೆ ನೇರ ಸಂಪರ್ಕವಿರುವ ವ್ಯಕ್ತಿ. ಎಲೆಕ್ಷನ್​ ಟೈಮಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರು, ಸಂಸದರ ಪರ ಕ್ಯಾಂಪೇನ್‌ ಮಾಡಿ ಮತಗಳ ಕ್ರೋಢಿಕರಣಕ್ಕೂ ನೆರವಾಗಿರೋ ಸ್ಟಾರ್. ಅಂತಹ ದರ್ಶನ್​ ಈಗ ಕೊಲೆ ಕೇಸ್​ನಲ್ಲಿ ಸಿಲುಕಿರೋದು ಕೆಲ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದ. ಜೊತೆಗೆ ದರ್ಶನ್​ನ ಈ ಪ್ರಕರಣದಿಂದ ಸೇಫ್​ ಮಾಡೋದಕ್ಕೆ ಕೆಲವರು ಒಳಗೊಳಗೇ ಪಕ್ಕಾ ಪ್ರಿಪರೇಷನ್​ ಮಾಡ್ತಿದ್ದಾರೆ ಅನ್ನೋ ವಿಚಾರ ಸ್ಫೋಟವಾಗಿದೆ. ದರ್ಶನ್‌ಗೆ ಆಪ್ತರಾಗಿರೋ ಮೂರ್ನಾಲ್ಕು ಸಚಿವರು ಮತ್ತು ಶಾಸಕರು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರಂತೆ. ದರ್ಶನ್‌ ಯಾವುದೇ ಕಾರಣಕ್ಕೂ ಆ ರೀತಿಯ ವ್ಯಕ್ತಿ ಅಲ್ಲ. ಹತ್ಯೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ, ಅವ್ರು ಜೈಲು ಸೇರಬಾರದು. ಅವರನ್ನು ರಕ್ಷಣೆ ಮಾಡೋ ಕೆಲಸ ಆಗಬೇಕು ಅಂತಾ ಸಿಎಂ ಸಿದ್ದುಗೆ ಒತ್ತಡ ಹಾಕಿದ್ದಾರಂತೆ. ಆದ್ರೆ, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಪ್ಪು ಹಾಕಿಲ್ವಂತೆ. ಈ ಕೇಸ್‌ನಲ್ಲಿ ನಾನು ತಲೆ ಹಾಕಲ್ಲ ಅನ್ನೋದನ್ನು ನೇರವಾಗಿ ಹೇಳಿದ್ದಾರಂತೆ.

ಇದನ್ನೂ ಓದಿ: VIDEO: ‘ಆ ಹೆಣ್ಣಿಗೆ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು’- ಕಿಚ್ಚ ಸುದೀಪ್‌

ರೇಣುಕಾಸ್ವಾಮಿಯನ್ನು ಅಮಾನುಷ್ಯವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆಗೆ ದರ್ಶನ್‌ ಮತ್ತು ಪವಿತ್ರಾ ಗೌಡನೇ ನೇರ ಕಾರಣ ಅನ್ನೋ ಆರೋಪಗಳು ಕೇಳಿಬರ್ತಿವೆ. ಹೀಗಾಗಿ ದರ್ಶನ್‌ ಅನ್ನು ಚಿತ್ರರಂಗದಿಂದ ಬ್ಯಾನ್‌ ಮಾಡ್ಬೇಕು ಅನ್ನೋ ಒತ್ತಾಯಗಳು ಕೇಳಿಬರ್ತಿವೆ. ಚಿತ್ರದುರ್ಗ, ಮಂಡ್ಯದಲ್ಲಿ ಪ್ರತಿಭಟನೆ ನಡೆಸಿರೋ ವಿವಿಧ ಸಂಘಟನೆಯವ್ರು ದರ್ಶನ್‌ ಬ್ಯಾನ್‌ಗೆ ಒತ್ತಾಯಿಸಿದ್ದಾರೆ. ಆದ್ರೆ, ಸಿನಿಮಾ ರಂಗದವ್ರು ಮಾತ್ರ ಬ್ಯಾನ್‌ ಮಾಡಲ್ಲ ಅನ್ನೋ ಅರ್ಥದಲ್ಲಿಯೇ ಮಾತಾಡಿದ್ದಾರೆ. ಪ್ರಕರಣದಲ್ಲಿ ದರ್ಶನ್‌ ಅಪರಾಧಿ ಆಗ್ತಾರೋ ಇಲ್ವೋ? ಅನ್ನೋದನ್ನು ನೋಡ್ಕೊಂಡ್‌ ತೀರ್ಮಾನ ಮಾಡೋಣ ಅನ್ನೋ ರೀತಿಯಲ್ಲಿ ಸಿನಿಮಾ ರಂಗದವ್ರು ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಈ ಬಗ್ಗೆ ಒಂದ್‌ ಕಾಲದ ದರ್ಶನ್‌ ಕುಚಿಕೋ ಸುದೀಪ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಕಿಚ್ಚ ಸುದೀಪ್​ ನೇರ ಹಾಗೂ ನಿಷ್ಠುರವಾದಿ. ಅನಿಸಿದ್ದನ್ನ ಸ್ಟ್ರೇಟ್​ ಆಗಿ ಮುಖದ ಮೇಲೆ ಹೇಳಿಬಿಡುವಂತಹ ಛಾತಿ ಉಳ್ಳವರು. ಅದೇ ರೀತಿ ರೇಣುಕಾಸ್ವಾಮಿ ಕೊಲೆ ಕೇಸಲ್ಲೂ ಸುದೀಪ್​ ಯಾವುದೇ ಮುಲಾಜಿಗೆ ಬಿದ್ದಿಲ್ಲ. ತಮಗನಿಸಿದ್ದನ್ನ ಸ್ಪಷ್ಟವಾಗಿ ಹೇಳುವ ಮೂಲಕ, ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಒಟ್ಟಾರೆ, ಕೊಲೆಯಾಗಿ ಇಷ್ಟು ದಿನವಾದ್ರೂ ಕನ್ನಡ ಚಿತ್ರರಂಗ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಬಗ್ಗೆ ಏನೂಮಾತಾಡ್ತಿಲ್ಲ ಏಕೆ ಎನ್ನುವ ಪ್ರಶ್ನೆಗಳಿದ್ವು. ಆದ್ರೀಗ ಸುದೀಪ್​ ಚಿತ್ರರಂಗದ ಪ್ರತಿನಿಧಿಯಾಗಿ ಮಾತನಾಡಿರೋ ಒಂದೊಂದೂ ಮಾತುಗಳೂ ಶ್ಲಾಘನೀಯ. ದರ್ಶನ್‌ ಬಗ್ಗೆ ಮತಾಡಲು ಸಿನಿಮಾ ರಂಗದವ್ರು ಹಿಂದೇಟು ಹಾಕ್ತಿದ್ದಾರೆ. ಅದು ಯಾಕೆ ಏನು ಅನ್ನೋದ್‌ ಇನ್ನೂ ಅರ್ಥವಾಗ್ತಿಲ್ಲ. ಆದ್ರೆ, ಸುದೀಪ್‌ ನೇರವಾಗಿ ಮಾತಾಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಬೇಕು ಅಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​ ಅರೆಸ್ಟ್​; ಕೊಲೆ ಕೇಸ್​ ಬಗ್ಗೆ ಮುಲಾಜಿಲ್ಲದೇ ಕಿಚ್ಚ ಸುದೀಪ್​​ ಕೊಟ್ರು ಸ್ಪಷ್ಟ ಸಂದೇಶ.. ಏನದು?

https://newsfirstlive.com/wp-content/uploads/2024/06/kiccha5.jpg

Load More