newsfirstkannada.com

ಕಿಚ್ಚ ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ಸುದೀಪ್​​ ಜತೆ ಕೈ ಜೋಡಿಸಿದ ಆರ್​​. ಚಂದ್ರು; ಸಿನಿಮಾ ಯಾವುದು?

Share :

01-09-2023

    52ನೇ ವರ್ಷಕ್ಕೆ ಕಾಲಿಡುತ್ತಿರೋ ಕಿಚ್ಚ ಸುದೀಪ್​​

    ಕಿಚ್ಚನ ಮುಂದಿನ ಚಿತ್ರಕ್ಕೆ ಈ ಡೈರೆಕ್ಟರ್​​ ಆಕ್ಷನ್​​ ಕಟ್​​

    ಸದ್ಯದಲ್ಲೇ ಅನೌನ್ಸ್​ ಆಗೋ ಕಿಚ್ಚ ಸಿನಿಮಾ ಯಾವುದು?

ಕಿಚ್ಚ ಸುದೀಪ ಎಂಬುದು ಕೇವಲ ಹೆಸರು ಮಾತ್ರವಲ್ಲ. ಅಭಿಮಾನಿಗಳ ಪಾಲಿಗೆ ಕಲಾ ಬೆಳಕು. ವಿಕ್ರಾಂತ್ ರೋಣ ಸಿನಿಮಾದ ನಂತರ ಸುದೀಪ್​ ಸಿನಿಮಾ ವಿಚಾರಗಳಲ್ಲಿ ಸೈಲೆಂಟ್ ಆಗಿ ಬಿಟ್ಟರು. ಹಂಗಂತೆ ಹಿಂಗಂತೆ ಅಂತೆ ಕಂತೆಗಳ ಸುದ್ದಿ ಸಮಾಚಾರಗಳು ಸದ್ದು ಮಾಡ್ತಾ ಇದ್ದರು ಸುದೀಪ್ ಮಾತ್ರ ತಮ್ಮ ಪಾಡಿಗೆ ತಾವು ಇದ್ದರು. ಕ್ರಿಕೆಟು, ಎಲೆಕ್ಷನ್ನು ಅಂತೆಲ್ಲ ಓಡಾಡುತ್ತಾ ಸುದ್ದಿಯಾದ್ರು. ಯಾವಾಗ ಸಾರ್ ಸಿನಿಮಾ ಅಂತ ಕೇಳುವಾಗೆಲ್ಲ ಬರ್ಲಿ ಒಳ್ಳೆ ಟೈಮ್. ಎಲ್ಲವನ್ನೂ ಹೇಳ್ತಿನಿ ಅಂದು ಮುಂದು ಹೊಗುತ್ತಿದ್ದರು. ಆದರೆ, K46 – Demon War Begins Promo ಹೊರ ಬಿಟ್ಟು ನಾನು ಸುಮ್ನೆ ಕುಂತಿಲ್ಲ, ನಿಮಗೆ ಕಾಡುವಂತ ಸಿನಿಮಾ ಮಾಡ್ತಾ ಇದ್ದೇನೆ ಅನ್ನೋ ಸಂದೇಶ ಕೊಟ್ಟಿದ್ದಾರೆ ಸಂಜೀವಪ್ಪನವರ ಮಗ.

ಇನ್ನೇನು ಕೆಲವೇ ಗಂಟೆಗಳಲ್ಲಿ ಸುದೀಪ್ ಅಖಂಡ ಅಭಿಮಾನಿ ಬಳಗ ಸುದೀಪ್ ಬರ್ತ್​​ಡೇಯನ್ನ ಉತ್ಸಾಹದ ಉತ್ಸವದ ರೀತಿ ಆಚರಣೆ ಮಾಡಲಿದೆ. ಭರ್ಜರಿ ತಯಾರಿಯೂ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ನಡೆದಿದೆ. ರಾಜ್ಯಾದ್ಯಂತ ಅಭಿಮಾನಿಗಳು ಈ ಬಾರಿ ಜೆ.ಪಿ ನಗರದ ಸುದೀಪ್ ಮನೆಗೆ ಹೋಗದೆ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಸೇರಿ ಜೈಜೈ ಅಭಿನಯ ಚಕ್ರವರ್ತಿ ಎಂದು ಸಂಭ್ರಮಿಸಲಿದ್ದಾರೆ. ಈ ರೈಟ್​​ ಟೈಮ್​​ನಲ್ಲೇ ಸುದೀಪ್ ಅಭಿಮಾನಿ ಬಳಗ ಮತ್ತಷ್ಟು ಸಂತಸ ಸಡಗರದಿಂದ ತೇಲಾಡಲು ಒಂದೊಳ್ಳೆ ಸಮಾಚಾರ ನೀಡಲು ಆ ಡೈರೆಕ್ಟರ್ ಒಬ್ಬರು ತುದಿಗಾಲಿನಲ್ಲಿ ನಿಂತಿದ್ದಾರೆ. ಹಗಲಿರುಳು ಆ ಒಂದು ಘಟ್ಟಿ ಜಟ್ಟಿ ಕಥೆಯನ್ನು ಸುದೀಪ್ ಅವರಿಗೆ ಮಾಡಲೆಂದು ಯೋಚಿಸಿ ಯೋಜನೆ ರೂಪಿಸಿದ್ದಾರೆ.

ಆರ್.ಚಂದ್ರು ಸಾರಥ್ಯದಲ್ಲಿ ಪ್ರಜ್ವಲಿಸಲಿರುವ ಕಿಚ್ಚ

ಕೆಲವೇ ಗಂಟೆಯಲ್ಲಿ ಕಿಚ್ಚನ ಅವರ 52ನೇ ಬರ್ತ್​​​ಡೇ ಸಂಭ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗ ಸಿದ್ಧವಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಕಿಚ್ಚೋತ್ಸವ ಆಚರಣೆಯಾಗಲಿದೆ. ಈ ಸುಸಂದರ್ಭಕ್ಕೆ ಬಿಗ್ ಗಿಫ್ಟ್ ಕೊಡಲು ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು ಬಿಗ್ ಪ್ಲಾನ್ ಮಾಡಿಕೊಂಡಿದ್ದಾರೆ. ಇಡೀ ಸುದೀಪ್ ಅಭಿಮಾನಿ ಬಳಗ ದಿಲ್ ಖುಷ್ ಆಗಬೇಕು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲ್​​ಚಲ್ ಎಬ್ಬಿಸಬೇಕು ಅನ್ನೋ ಗುರಿಯಲ್ಲಿ ಇದೆ. ಹೀಗಾಗಿ ಒಂದು ಬಿಗ್ ಅನೌನ್ಸ್​​ಮೆಂಟ್​​ಗೆ ಆರ್.ಚಂದ್ರು ಕೇಶಾವರ ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ದು ಗದ್ದಲ್ಲ ಮಾಡದೇ ಒಂದೊಳ್ಳೆ ಸ್ಕ್ರಿಪ್ಟ್​ ಅನ್ನ ದೊಡ್ಡ ಮಟ್ಟಕ್ಕೆ ಸಿದ್ಧ ಪಡಿಸಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಒಂದೊಂದೆ ಮೆಟ್ಟಿಲನ್ನ ಹತ್ತುತ್ತಾ ಇಂದು ನಿರ್ಮಾಪಕ ಕಮ್ ಸ್ಟಾರ್ ನಿರ್ದೇಶಕನಾದ ಆರ್.ಚಂದ್ರು ‘ಕಬ್ಜ ಪಾರ್ಟ್ 1’ ಸಿನಿಮಾದ ನಂತರ ಸೈಲೆಂಟ್ ಆಗಿಬಿಟ್ಟರು.. ಸೈಲೆಂಟ್ ಆಗಿ ಬಿಟ್ಟರು ಅನ್ನೋದು ಕೆಲ ಮಂದಿಯ ಅಭಿಪ್ರಾಯ.. ಆದ್ರೆ ಆರ್​.ಚಂದ್ರು ತಮ್ಮ ಪಾಡಿಗೆ ತಾನು ಚಂದ್ರಯಾನ 2 ಮೀಸ್​ ಆದ್ರೇನಾಯ್ತು ಚಂದ್ರಯಾನ 3 ಮಾಡಿ ಗೆಲ್ಲೋಣ ಅನ್ನೋ ಉತ್ಸಾಹದಲ್ಲಿ ಒಂದೊಳ್ಳೆ ಪ್ರಯತ್ನಕ್ಕೆ ಮುಂದಾಗಿದ್ದಾರೆ.. ಕಬ್ಜ 2 ಪ್ರಿಪರೇಷನ್ ಜೊತೆಗೆ ಮತ್ತೊಂದು ಎಮೋಷನ್ ಸ್ಟೋರಿಗೆ ಕೈ ಹಾಕಿದ್ದಾರೆ.. ಈ ಬಾರಿ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್​​​ ತಿರುಗಿ ನೋಡಬೇಕು ಅಂಥದೊಂದು ಸಬ್ಜೆಕ್ಟ್​​ಗೆ ಕೈ ಹಾಕಿದ್ದಾರೆ.. ಇಂಡಿಯ ಪಾಕಿಸ್ತಾನ ಆಟವಾಗಲಿ, ಗಡಿ ವಿಚಾರದ ಕಾಟವಾಗಲಿ ಇಡೀ ಪ್ಯಾನ್ ವರ್ಲ್ಡ್ ತಿರುಗಿ ನೋಡೇ ನೋಡುತ್ತೆ. ಹಿಂಗಾಗಿ ಈ ಸಬ್ಜೆಕ್ಟ್​ನಲ್ಲೊಂದು ಸುದೀಪ್ ಮುಖ್ಯ ಭೂಮಿಕೆಯ ಸಿನಿಮಾಕ್ಕೆ ಸ್ಕೆಚ್ ಹಾಕಿದ್ದಾರೆ ಆರ್.ಚಂದ್ರು.

ಚಂದ್ರು ಕಹಾನಿಗೆ ವಿಜಯೇಂದ್ರ ಪ್ರಸಾದ್ ಲೇಖನಿ

ಕಬ್ಜ ಪ್ರಮೋಷನ್ ಟೈಮ್​ನಲ್ಲಿ ಅಚಾನಕ್​​​ ಆಗಿ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಒಂದು ಖಾಸಗಿ ಹೋಟೆಲ್​​ನಲ್ಲಿ ಸಿಕ್ತಾರೆ. ಆಗ ಆರ್.ಚಂದ್ರು ಮತ್ತು ವಿಜಯೇಂದ್ರ ಪ್ರಸಾದ್ ಉಭಯ ಕುಶಲೋಪರಿ ಮಾತನಾಡುವಾಗ ಒಂದು ಲೈನ್ ಅನ್ನ ವಿಜಯೇಂದ್ರ ಪ್ರಸಾದ್ ಅವರ ಬಳಿ ಡಿಸ್ಕಸ್​​ ಮಾಡ್ತಾರೆ. ಚಂದ್ರು ಮಾಡಿಕೊಂಡಿದ್ದ ಒನ್ ಲೈನ್ ಕಥೆಯನ್ನ ಕೇಳಿದ ವಿಜಯೇಂದ್ರ ಪ್ರಸಾದ್ ಫುಲ್ ಇಂಪ್ರೆಸ್​​ ಆಗಿ ನಾನು ನಿಮ್ಮ ಕಥೆಗೆ ಕೆಲಸ ಮಾಡ್ತಿನಿ, ಕಥೆ ನಿಮ್ದು- ಚಿತ್ರಕಥೆ ನಮ್ದು ಅನ್ನೋ ಭರವಸೆಯನ್ನ ನೀಡಿರುತ್ತಾರೆ. ಅಂದು ರಾಜಮೌಳಿ ನೀಡಿದ ಭರವಸೆ ಕೇವಲ ಭರವಸೆ ಅಷ್ಟೆ ಆಗದೆ, ಇವತ್ತು ಫುಲ್ ಫ್ಲೆಡ್ಜ್ ಕಥೆಯಾಗಿ ಸಿನಿಮಾ ಹಂತಕ್ಕೆ ಬಂದು ನಿಂತಿದೆ. ಕಿಚ್ಚ ಸುದೀಪ್​ ಲೆವಲ್​​ಗೆ ತಕ್ಕನಾದ ಒಂದು ಘಟ್ಟಿ ಜಟ್ಟಿ ಪಾತ್ರ ಪ್ಲಸ್ ಕಥೆಯನ್ನ ಈ ಬಾರಿ ಚಂದ್ರು ಮತ್ತು ವಿಜಯೇಂದ್ರ ಪ್ರಸಾದ್ ಬರೆದುಕೊಂಡಿದ್ದು ಅತಿ ಶೀಘ್ರದಲ್ಲೇ ಶೂಟಿಂಗ್​​ಗೆ ಹೋಗಲು ಪ್ಲಾನ್ ಮಾಡಿದ್ದಾರೆ. ಈ ಸಿಹಿ ಸುದ್ದಿಯನ್ನ ಹೆಚ್ಚು ದಿನ ಕೋಣೆಯಲ್ಲಿ ಇಟ್ಟುಕೊಳ್ಳೋದು ಒಳ್ಳೆದಲ್ಲ. ಅಭಿಮಾನಿಗಳಿಗೂ ನೀಡಿದ್ರೆ ಸಿಹಿ ಸಹಿ ಆಗುತ್ತೆ ಅಂತ ಸೆಪ್ಟೆಂಬರ್ 2ರಂದು ಸೂಕ್ತ ದಿನ ಎಂದು ಭಾವಿಸಿ ಗಿಫ್ಟ್ ರೂಪದ ಅನೌನ್ಸ್​​ ಮೆಂಟ್​​ಗೆ ಸಿದ್ದವಾಗಿದ್ದಾರೆ ಆರ್.ಚಂದ್ರು.

ಆರ್.ಚಂದ್ರು ಕಥೆಗೆ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಾಥ್ ನೀಡಿದ್ದು ಕಥೆ ಕೇಳಿ ತಾವೇ ಮುಂದೆ ಬಂದು ಕಥೆಗೆ ಶೇಪು ಹೊಸ ರೂಪು ಕೊಟ್ಟಿದ್ದಾರೆ.. ಸ್ಕ್ರಿಪ್ಟ್​ ಡಾಕ್ಟರಿಂಗ್ ಮಾಡುವ ಕೆಲಸವನ್ನ ವಿಜಯೇಂದ್ರ ಪ್ರಸಾದ್ ಬರಹಗಾರರ ತಂಡ ಮಾಡುತ್ತಿದೆ.. ಕಿಚ್ಚ ಸುದೀಪ್ ಅವರ 47ನೇ ಸಿನಿಮಾ ಇದೇ ಕಥೆ.. ಇಂಡಿಯಾ ಪಾಕಿಸ್ತಾನ ಗಡಿ ವಿಚಾರದೊಳಗೆ ಕೇಳಿ ಬಂದ ಒಬ್ಬ ವೀರ ಯೋಧನ ಕಥೆಯೊಂದನ್ನ ಆರ್.ಚಂದ್ರು ಸಿದ್ಧ ಪಡಿಸಿಕೊಂಡಿದ್ದಾರೆ.. ಇದು ಸದ್ಯಕ್ಕೆ ಗುಟ್ಟಾದ ವಿಚಾರ.. ನಮ್ಮ ಬಳಗಕ್ಕೆ ಈ ವಿಚಾರ ಬಿದ್ದಿದ್ದು ಮುಂದಿನ ದಿನಗಳಲ್ಲಿ ಅಧಿಕೃತ ಸಮಾಚಾರವನ್ನ ಆರ್.ಚಂದ್ರು ನೀಡಲಿದ್ದಾರೆ.

ಕಳೆದ ಬಾರಿ ಸಿದ್ಧೇಶ್ವರ ಎಂಟರ್​ಪ್ರೈಸಸ್​​ನಲ್ಲಿ ಆರ್.ಚಂದ್ರು ಕಬ್ಜ ಚಿತ್ರವನ್ನ ನಿರ್ಮಾಣ ಮಾಡಿದ್ದರು.. ಈ ಬಾರಿ ಆರ್.ಸಿ ಸ್ಟುಡಿಯೋಸ್ ಅನ್ನೋ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.. ಕಲಿಪುಲಿ ಎಸ್ ತಾನು ಅವರ ಕಿಚ್ಚ @46 ಸಿನಿಮಾ ಆದ ನಂತರ ಚಂದ್ರು ಬಳಗವನ್ನ ಸುದೀಪ್ ಸೇರಲಿದ್ದು ಅತಿ ಶೀಘ್ರದಲ್ಲೇ ದೊಡ್ಡ ಮಟ್ಟದ ಸುದ್ದಿಯೊಂದನ್ನ ಚಂದ್ರು ಬಳಗ ಕೊಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚ ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ಸುದೀಪ್​​ ಜತೆ ಕೈ ಜೋಡಿಸಿದ ಆರ್​​. ಚಂದ್ರು; ಸಿನಿಮಾ ಯಾವುದು?

https://newsfirstlive.com/wp-content/uploads/2023/09/kiccha.jpg

Load More