ಅಮ್ಮನ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಬಿಕ್ಕಿ ಬಿಕ್ಕ ಅತ್ತು ಹೊರ ಬಂದ ಸುದೀಪ್
ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಕಿಚ್ಚ ಸುದೀಪ್ ಭಾವುಕ ಪೋಸ್ಟ್
ಸರೋಜಮ್ಮನ ಪ್ರೀತಿಯ ದೀಪುಗೆ ಅಭಿಮಾನಿಗಳಿಂದಲೇ ಸಾಂತ್ವನ
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾಗಿದ್ದು, ಸುದೀಪ್ ಅವರ ಕುಟುಂಬಸ್ಥರು ಶೋಕ ಸಾಗರದಲ್ಲಿದ್ದಾರೆ. ಪ್ರೀತಿಯ ಅಮ್ಮನನ್ನು ಕಳೆದುಕೊಂಡಿರುವ ಸುದೀಪ್ ಅವರಿಗೆ ಆತ್ಮೀಯರು, ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದಾರೆ.
ತಾಯಿಯ ಅಂತಿಮ ಯಾತ್ರೆ ವೇಳೆ ಕಿಚ್ಚ ಸುದೀಪ್ ಅವರು ಕಣ್ಣೀರಿಟ್ಟಿದ್ದು ಭಾವುಕ ಕ್ಷಣಗಳು ಈಗಲೂ ಅಭಿಮಾನಿಗಳನ್ನ ಕಾಡುತ್ತಿದೆ.
ಇದನ್ನೂ ಓದಿ: ನಾನು ಬಿಗ್ ಬಾಸ್ ವೇದಿಕೆಗೆ ಹೋಗೋ ಮುನ್ನ ಅಮ್ಮ ಆಸ್ಪತ್ರೆ ದಾಖಲಾಗಿದ್ದಳು; ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರು ಸ್ಯಾಂಡಲ್‌ವುಡ್‌ಗೆ ಬಾದ್ ಷಾ ಆದರೂ ತಾಯಿಗೆ ಪ್ರೀತಿಯ ದೀಪು ಆಗಿದ್ದರು.
ಅಮ್ಮನ ಚಿತೆಗೆ ಸುದೀಪ್ ಅವರು ಅಗ್ನಿ ಸ್ಪರ್ಶ ಮಾಡಿ ಹೊರಗೆ ಬರುವಾಗ ಸುದೀಪ್ ಅವರು ಕಣ್ಣೀರಿಟ್ಟರು. ಸುದೀಪ್ ಅವರ ಈ ನೋವಿನ ಕ್ಷಣಗಳು ನೋಡೋದಕ್ಕೆ ಅತ್ಯಂತ ಭಾವಕವಾಗಿದೆ.
ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಹೊರಟ ಕಿಚ್ಚ ಸುದೀಪ್ ಅವರ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ನೋವಿನ ಕ್ಷಣಗಳನ್ನು ನೋಡಿದ ಸುದೀಪ್ ಅಭಿಮಾನಿಗಳು ನಾವು ಈ ರೀತಿ ನಿಮ್ಮನ್ನ ನೋಡಲು ಸಾಧ್ಯವಾಗುತ್ತಿಲ್ಲ. ಮಗುವಿನಂತೆ ಅಳುತ್ತಿರುವ ಕಿಚ್ಚ ಸುದೀಪ್ ಅವರು ಧೈರ್ಯ ತೆಗೆದುಕೊಳ್ಳಿ ಅಣ್ಣ ಎಂದು ಸಮಾಧಾನ ಹೇಳುತ್ತಿದ್ದಾರೆ.
ಅಮ್ಮನನ್ನು ಕಳೆದುಕೊಂಡ ಕಿಚ್ಚ ಸುದೀಪ್ ಮೊದಲ ಟ್ವೀಟ್ ಮಾಡಿದ್ದಾರೆ. ಎಕ್ಸ್ನಲ್ಲಿ ತಾಯಿಯನ್ನು ನೆನೆದು ನಟ ಹಲವಾರು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಟ್ವೀಟ್ನಲ್ಲಿ ಬಿಗ್ ಬಾಸ್ ವೇದಿಕೆಯ ಮೇಲಿದ್ದಾಗ ತಾಯಿಯ ಕ್ರಿಟಿಕಲ್ ಸಂಗತಿಯನ್ನು ಬರೆದುಕೊಂಡಿದ್ದಾರೆ.
ಪ್ರತಿನಿತ್ಯ ನನ್ನ ಮೊಬೈಲ್ಗೆ ಬರ್ತಿದ್ದ ಮೊದಲನೇ ಮೆಸೇಜ್ ಕಳುಹಿಸುತ್ತಿದ್ದದ್ದೇ ನನ್ನಮ್ಮ…ಮುಂಜಾನೆ 05:30ರ ಸುಮಾರಿಗೆ ಬರ್ತಿದ್ದ ಆ ಮೆಸೇಜಲ್ಲಿ “ಗುಡ್ ಮಾರ್ನಿಂಗ್ ಕಂದ” ಅಂತಾ ಇರ್ತಿತ್ತು..ಅಕ್ಟೋಬರ್ 18ನೇ ತಾರೀಖಿನ ಬೆಳಗ್ಗೆಯೇ ಕೊನೆ…ನನ್ನಮ್ಮ ಕಳುಹಿಸಿದ ಕೊನೆಯ ಮೆಸೇಜ್ ಆವತ್ತೇ ಆಗಿತ್ತು…ಬಿಗ್ಬಾಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ನಾನು ಮರುದಿನ ಬೆಳಗ್ಗೆ ಎದ್ದಾಗ ನನ್ನ ಮೊಬೈಲ್ನಲ್ಲಿ ಅಮ್ಮನ ಗುಡ್ ಮಾರ್ನಿಂಗ್ ಮೆಸೇಜ್ ಇರಲಿಲ್ಲ.
ಎಷ್ಟೋ ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿ ಆಕೆಯ ಮೆಸೇಜ್ ನನ್ನ ಕಣ್ಣಿಗೆ ಕಾಣಿಸಲಿಲ್ಲ. ನಾನೂ ಕೂಡ ಆಕೆಗೆ ಗುಡ್ ಮಾರ್ನಿಂಗ್ ವಿಶ್ ಮಾಡ್ಲಿಲ್ಲ.. ಮೆಸೇಜ್ ಬಾರದಿದ್ದ ಕಾರಣಕ್ಕೆ ನಾನು ಅಮ್ಮನಿಗೆ ಫೋನ್ ಮಾಡಿ ಎಲ್ಲವೂ ಸರಿಯಾಗಿದ್ಯಾ ಅಂತಾ ವಿಚಾರಿಸೋಣ ಅಂದುಕೊಂಡೆ. ಆದ್ರೆ, ಬಿಗ್ಬಾಸ್ ಶನಿವಾರದ ಸ್ಪೆಷಲ್ ಶೋ ಕುರಿತ ಡಿಸ್ಕಷನ್ ಇದ್ದದ್ದರಿಂದ ಅದು ಸಾಧ್ಯವಾಗಲಿಲ್ಲ. ನಾನು ಬಿಗ್ಬಾಸ್ ವೇದಿಕೆ ಹತ್ತುವ ಕೆಲವೇ ನಿಮಿಷಗಳ ಮುಂಚೆ ಒಂದು ಫೋನ್ ಬಂತು..ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದಾಳೆ ಅಂತಾ ಹೇಳಿದ್ರು.
ಆ ಸುದ್ದಿ ಕೇಳಿದ ಕೂಡಲೇ ನಾನು ಅಲ್ಲೇ ಆಸ್ಪತ್ರೆಯಲ್ಲಿದ್ದ ನನ್ನ ಸಹೋದರಿಗೆ ಫೋನ್ ಮಾಡಿ ವಿಚಾರಿಸಿದೆ..ಡಾಕ್ಟರ್ಗಳ ಜೊತೆ ಮಾತನಾಡಿ ಬಳಿಕ ಸ್ಟೇಜ್ ಹತ್ತಿದೆ. ಅದಾದ ಕೆಲ ಹೊತ್ತಿನ ಬಳಿಕ, ನಾನು ಬಿಗ್ಬಾಸ್ ವೇದಿಕೆ ಮೇಲಿದ್ದಾಗಲೇ ನನ್ನ ಜೊತೆ ಇರುವವರಿಗೆ ನನ್ನ ತಾಯಿ ಕ್ರಿಟಿಕಲ್ ಆಗಿದ್ದಾಳೆ ಎನ್ನುವ ಸುದ್ದಿ ಬಂತು. ನಾನು ನನ್ನ ಜೀವನದಲ್ಲಿ ಎಂದೂ ಕೂಡ ಇಷ್ಟೊಂದು ಅಸಹಾಯಕನಾಗಿರಲಿಲ್ಲ.. ನನ್ನ ತಾಯಿ ಆರೋಗ್ಯದ ಬಗ್ಗೆ ಚಿಂತಾಕ್ರಾಂತನಾಗಿಯೇ ಶನಿವಾರದ ಎಪಿಸೋಡ್ ಹ್ಯಾಂಡಲ್ ಮಾಡ್ತಿದ್ದೆ.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಅಮ್ಮನನ್ನು ನೆನೆದಿದ್ದ ಕಿಚ್ಚ.. ಶೂಟಿಂಗ್ ಮುಗಿಸಿ ಆಸ್ಪತ್ರೆ ಓಡಿ ಹೋಗಿದ್ರು
ಸಾಕಷ್ಟು ಒತ್ತಡಗಳಿದ್ದರೂ ಎಲ್ಲೂ ಕುಗ್ಗದೇ ಶಾಂತವಾಗಿ, ಸಮರ್ಥವಾಗಿ ಆ ಎಪಿಸೋಡ್ನ ನಿಭಾಯಿಸಿದ್ದೀನಿ ಅಂದ್ರೆ ಅದಕ್ಕೆ ನನ್ನ ತಾಯಿಯೇ ಕಾರಣ..ಆಕೆ ವೃತ್ತಿಯನ್ನು ಗೌವಿಸುವುದರ ಬಗ್ಗೆ ಹೇಳಿಕೊಟ್ಟ ಆದರ್ಶಗಳು ಎಂದಿಗೂ ಚಿರಸ್ಥಾಯಿ
ಶನಿವಾರದ ಎಪಿಸೋಡ್ ಮುಗಿದ ಕೂಡಲೇ ನಾನು ಆಸ್ಪತ್ರೆಗೆ ಓಡೋಡಿ ಹೋದೆ. ಆದರೆ, ಆಸ್ಪತ್ರೆ ತಲುಪುವ ಕೆಲ ನಿಮಿಷಗಳ ಮುಂಚೆಯೇ ಆಕೆಯನ್ನ ವೆಂಟಿಲೇಟರ್ನಲ್ಲಿ ಇಡಲಾಗಿತ್ತು..ನನ್ನ ತಾಯಿಗೆ ಪ್ರಜ್ಞೆ ಇದ್ದಾಗ ನಾನು ಅವಳನ್ನು ನೋಡಲು ಸಾಧ್ಯವಾಗಲೇ ಇಲ್ಲ.. ಭಾನುವಾರ ಮುಂಜಾನೆ ಆಕೆ ತನ್ನ ಜೀವನದ ಹೋರಾಟ ಮುಗಿಸಿದ್ದಳು..ಎಲ್ಲವೂ..ಕೆಲವೇ ಕೆಲವು ಗಂಟೆಗಳಲ್ಲಿ ಎಲ್ಲವೂ ಬದಲಾಗಿಬಿಡ್ತು.
ಇದನ್ನ ಹೇಗೆ ಸರಿಪಡಿಸಬೇಕು ಗೊತ್ತಿಲ್ಲ. .ನನಗೆ ಈ ಸತ್ಯವನ್ನ ಹೇಗೆ ಸ್ವೀಕರಿಸಬೇಕು ಗೊತ್ತಾಗುತ್ತಿಲ್ಲ. ನಮಗಂತೂ ದೊಡ್ಡ ಪೆಟ್ಟಾಗಿದೆ..ನಾನು ಶೂಟಿಂಗ್ಗೆ ಹೋಗುವ ಮುನ್ನ ಬಿಗಿಯಾದ ಅಪ್ಪುಗೆ ಕೊಟ್ಟಿದ್ದ ನನ್ನಮ್ಮ ಕೆಲವೇ ಗಂಟೆಗಳಲ್ಲಿ ಇಲ್ಲವಾಗಿಬಿಟ್ಟಿದ್ದಾಳೆ.
ಈ ಘಟನೆಯಿಂದ ನಮ್ಮ ಒಡೆದಿರುವ ಹೃದಯಗಳು ಮತ್ತೆ ಸರಿಯಾಗೋದಕ್ಕೆ ಖಂಡಿತ ಸಮಯ ಹಿಡಿಯುತ್ತೆ ಅನ್ನೋದಷ್ಟೇ ಸತ್ಯ
ನನ್ನ ತಾಯಿಯೊಬ್ಬಳು ನಿಷ್ಕಲ್ಮಶ ಜೀವವಾಗಿದ್ದಳು. ಅವಳನ್ನ ಮಿಸ್ ಮಾಡಿಕೊಳ್ತೀನಿ..
ನನ್ನ ತಾಯಿಗೆ ಕಂಬನಿ ಮಿಡಿದ ಎಲ್ಲರಿಗೂ ಥ್ಯಾಂಕ್ಸ್, ಮೆಸೇಜ್ಗಳ ಮೂಲಕ ಟ್ವೀಟ್ಗಳ ಮೂಲದ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ
ರೆಸ್ಟ್ ವೆಲ್ ಅಮ್ಮ.. ಐ ಲವ್ ಯೂ, ಐ ಮಿಸ್ ಯೂ ಟೆರಿಬಲಿ’’ ಎಂದು ಕಿಚ್ಚ ಸುದೀಪ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ