ಕಿಚ್ಚ ಸುದೀಪ್ ಹಾಗೂ MN ಕುಮಾರ್ ಮಧ್ಯೆ ಬಂದ ಆಪ್ತ ಸ್ನೇಹಿತ
10 ಕೋಟಿ ದುಡ್ಡು ಕೊಟ್ಟಿರೋದು ಶುದ್ಧ ಸುಳ್ಳು ಎಂದ ಜಾಕ್ ಮಂಜು
ಸುದ್ದಿಗೋಷ್ಠಿಯಲ್ಲಿ ಕುಮಾರ್ ಆರೋಪಕ್ಕೆ ಟಾಂಗ್ ಕೊಟ್ಟ ಜಾಕ್
ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಮತ್ತು ವಿತರಕ ಎಮ್.ಎನ್ ಕುಮಾರ್ ಅವರ ಗಂಭೀರ ಆರೋಪಗಳು ಇನ್ನು ಮುಂದುವರೆದಿದೆ. ಕಿಚ್ಚ ಸುದೀಪ್ ಅವರಿಂದ ನನಗೆ ಹತ್ತು ಕೋಟಿ ನಷ್ಟವಾಗಿದೆ. ನನಗೆ ಸಿನಿಮಾ ಮಾಡ್ತೀನಿ ಎಂದು ಐದು ವರ್ಷದಿಂದ ಸತಾಯಿಸಿ ನಷ್ಟವುಂಟು ಮಾಡಿದ್ದಾರೆ. ನನಗೆ ಮಾತು ಕೊಟ್ಟಂತೆ ಸಿನಿಮಾ ಮಾಡಿಕೊಡಬೇಕು. ಇಲ್ಲವಾದಲ್ಲಿ ಸುದೀಪ್ ಇದ್ದಲ್ಲಿ ಹೋಗಿ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದರು. ಎಮ್.ಎನ್ ಕುಮಾರ್ ಅವರ ಈ ಕಿಚ್ಚು ಸ್ಯಾಂಡಲ್ವುಡ್ನಲ್ಲಿ ತೀವ್ರ ಚರ್ಚೆಯನ್ನ ಉಂಟು ಮಾಡಿದೆ.
ಇದನ್ನು ಓದಿ: ನಿರ್ಮಾಪಕ MN ಕುಮಾರ್ ಆರೋಪಕ್ಕೆ ಕಿಚ್ಚ ಸುದೀಪ್ ಕಾನೂನು ಸಮರ.. ₹10 ಕೋಟಿ ಪರಿಹಾರ ಕೇಳಿದ ನಟ
ನಿರ್ಮಾಪಕರ ಈ ಎಲ್ಲಾ ಆರೋಪಗಳಿಗೆ ನಟ ಕಿಚ್ಚ ಸುದೀಪ್ ಆಪ್ತ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತಾಡಿದ ನಿರ್ಮಾಪಕ ಜಾಕ್ ಮಂಜು, ನಟ ಸುದೀಪ್ ಅಭಿಮಾನಿಗಳಿಗೆ ನಾನೇ ಕ್ಲಾರಿಟಿ ಕೊಡ್ತೀನಿ. ಪಾರ್ಥ ಸಿನಿಮಾದಿಂದ ಹಿಡಿದು ವಿಕ್ರಾಂತ್ ರೋಣ ಚಿತ್ರದವರೆಗೂ ನಾನು ಸುದೀಪ್ ಜೊತೆ ಇದ್ದೇನೆ. ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ನನ್ನ ಜೊತೆ ಕೆಲಸ ಮಾಡಿದ್ದಾರೆ. ಅವರ ಸಿನಿ ಜರ್ನಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಬೆಳೆದಿದ್ದಾರೆ. ಇತ್ತೀಚಿಗೆ ಭಾಮಾ ಹರೀಶ್ ಅವರು ಸುದೀಪ್‌ನ ಭೇಟಿಯಾಗಿದ್ರು. ಎಮ್.ಎನ್ ಕುಮಾರ್ ಪತ್ರ ಕಳಿಸಿದ್ರು, ನಾವು ಅದಕ್ಕೆ ಉತ್ತರ ಕೊಟ್ಟಿದ್ದೇವೆ. ಆದರೂ ಕುಮಾರ್ ಅವರು ನಾವು ಉತ್ತರ ಕೊಟ್ಟಿಲ್ಲ ಅಂತಾ ತಪ್ಪು ಸಂದೇಶ ಕೊಟ್ಟಿದ್ದಾರೆ.
ಎಮ್.ಎನ್ ಕುಮಾರ್ ಆರ್ಥಿಕ ಕಷ್ಟದಲ್ಲಿದ್ದಾರೆ ಅನ್ನೋದು ಗೊತ್ತು. ಆ ಸಿನಿಮಾ ಬೇಗ ಸೆಟ್ಟೇರಲಿಲ್ಲ. ಕುಮಾರ್ ಅವರು ಒತ್ತಡದಲ್ಲಿ ಇದ್ದಿದ್ದರಿಂದ ಅವರು ಮಾತನಾಡುವ ರೀತಿ ಬದಲಾಯಿತು. ನಂತರ ಒಬ್ಬ ನಿರ್ದೇಶಕನನ್ನು ಸುದೀಪ್ ಆಯ್ಕೆ ಮಾಡಿದರು. ಆದರೆ ಆ ನಿರ್ದೇಶಕರು ಕೇಳಿದಷ್ಟು ಸಂಭಾವನೆ ನೀಡಲು ಕುಮಾರ್ ಒಪ್ಪಲಿಲ್ಲ. ಅನಾರೋಗ್ಯ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಕುಮಾರ್ ಅವರನ್ನು ಭೇಟಿಯಾಗಲು ಸುದೀಪ್ ಅವರಿಗೆ ಸಾಧ್ಯವಾಗಲಿಲ್ಲ. ಎಮ್.ಎನ್ ಕುಮಾರ್ ಅವರ ಕಷ್ಟ ಏನು ಎಂಬುದನ್ನು ಸುದೀಪ್‌ಗೆ ಹೇಳಲಾಯ್ತು. ಬಳಿಕ ಅವರನ್ನು ಕರೆಸಿ ತಾತ್ಕಾಲಿಕವಾಗಿ 5 ಕೋಟಿ ರೂಪಾಯಿ ಸಹಾಯ ಮಾಡಲು ಸುದೀಪ್ ಮುಂದಾದರು ಎಂದು ಜಾಕ್ ಮಂಜು ಹೇಳಿದ್ದಾರೆ.
ನಿರ್ಮಾಪಕ ಎಮ್.ಎನ್ ಕುಮಾರ್ VS ಕಿಚ್ಚ ಸುದೀಪ್; ಸ್ಪಷ್ಟನೆ ಕೊಟ್ಟ ನಿರ್ಮಾಪಕ ಜಾಕ್ ಮಂಜುನಾಥ್..#Sandalwood #producers @KicchaSudeep @TheSudeepTrends @JackManjunath #Newsfirstkannada #KannadaNews pic.twitter.com/LqJn5NVr05
— NewsFirst Kannada (@NewsFirstKan) July 9, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ