newsfirstkannada.com

ರವಿಚಂದ್ರನ್ ಸಭೆಯಲ್ಲೂ ಆರದ ಕಿಚ್ಚು; ಸುದೀಪ್ ಕೊಟ್ಟ ಖಡಕ್ ಉತ್ತರಕ್ಕೆ ನಿರ್ಮಾಪಕ ಕುಮಾರ್ ಶಾಕ್‌!

Share :

22-07-2023

  ರವಿಚಂದ್ರನ್‌ ಸಾರಥ್ಯದಲ್ಲಿ ನಡೀತು 7 ಗಂಟೆಗಳ ಸಭೆ

  ಕಿಚ್ಚ-N ಕುಮಾರ್‌ ಮುಖಾಮಖಿಯಲ್ಲಿ ಪ್ರಶ್ನೆಗಳ ಪಂಚ್‌

  ಕಿಚ್ಚನ ಸಂಧಾನ ಸಭೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು?

ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್​ ಕುಮಾರ್ ನಡುವೆ ಕಳೆದ 20 ದಿನಗಳಿಂದ ನಡೆಯುತ್ತಿರುವ ಕಾಲ್​ಶೀಟ್​ ಸಮರ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದು ತಲುಪಿದೆ. ನಿರೀಕ್ಷೆಯಂತೆ ಸ್ಯಾಂಡಲ್​ವುಡ್​ ಹಿರಿಯರು ಸಂಧಾನ ಪ್ರಯತ್ನ ಮಾಡಿದ್ದು, ಮೊದಲ ಹಂತದಲ್ಲಿ ಪಾಸಿಟಿವ್ ರೆಸ್ಪಾನ್ಸ್​ ಸಿಕ್ಕಿದೆ ಎಂಬ ಮಾಹಿತಿ ಹೊರಬಿದ್ದಿದೆ.

ರವಿಚಂದ್ರನ್ ಸಭೆಯಲ್ಲಿ ನಡೀತು ಮಹತ್ವದ ಸಭೆ!
ಬರೋಬ್ಬರಿ 7 ಗಂಟೆಗಳ ಸುದೀರ್ಘ ಮಾತುಕತೆ!

ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಕುಮಾರ್ ನಡುವಿನ ಕಾಲ್​ಶೀಟ್​ ಸಮರ ಜೋರಾಗ್ತಿದ್ದಂತೆ ಈ ವಿವಾದವನ್ನ ಬಗೆಹರಿಸೋಕೆ ಕ್ರೇಜಿಸ್ಟಾರ್​ ರವಿಚಂದ್ರನ್ ಮತ್ತು ಸೆಂಚುರಿ ಸ್ಟಾರ್​ ಶಿವಣ್ಣ ಅಖಾಡಕ್ಕಿಳಿದ್ದಾರೆ. ಇದರ ಮೊದಲ ಭಾಗವಾಗಿ ಸಾಹುಕಾರ ರವಿಚಂದ್ರನ್ ಮನೆಯಲ್ಲಿ ಸಂಧಾನ ಸಭೆ ನಡೆಯಿತು. ಈ ಸಭೆಯಲ್ಲಿ ಕಿಚ್ಚ ಸುದೀಪ್, ಎಮ್​ಎನ್ ಕುಮಾರ್, ಜಾಕ್ ಮಂಜು, ಕಲಾವಿದರ ಸಂಘದಿಂದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್, ನಿರ್ಮಾಪಕದ ಸಂಘದಿಂದ ಅಧ್ಯಕ್ಷ ಉಮೇಶ್ ಬಣಕಾರ್, ಫಿಲಂ ಚೇಂಬರ್ ವತಿಯಿಂದ ಅಧ್ಯಕ್ಷ ಭಾಮಾ ಹರೀಶ್ ಪಾಲ್ಗೊಂಡಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ಈ ಮೀಟಿಂಗ್ ಹೆಚ್ಚು ಕಡಿಮೆ 10 ಗಂಟೆಯವರೆಗೂ ಆಗಿದೆ. ಅಂದ್ರೆ ಬರೋಬ್ಬರಿ 7 ಗಂಟೆಗಳ ಕಾಲ ಸುಧೀರ್ಘ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ರವಿಚಂದ್ರನ್ ಅವರು ಮಧ್ಯಪ್ರವೇಶಿಸುವುದಕ್ಕೂ ಮುಂಚೆಯೇ ಸುದೀಪ್ ಮತ್ತು ಎನ್ ಕುಮಾರ್ ವಿವಾದ ಹಂತ ಹಂತವಾಗಿ ಬೆಳೆದುಬಿಟ್ಟಿತ್ತು.

ಒಂದು ಕಡೆ ಫಿಲಂ ಚೇಂಬರ್, ನಿರ್ಮಾಪಕ ಸಂಘದಲ್ಲಿ ಕೂತು ಬ್ಯಾಕ್ ಟು ಬ್ಯಾಕ್ ಸುದ್ದಿಗೋಷ್ಠಿ ನಡೆಸಿದ ಎನ್ ಕುಮಾರ್ ಆರೋಪಗಳ ಸುರಿಮಳೆಗೈದಿದ್ದರು. ಮತ್ತೊಂದೆಡೆ ಕಿಚ್ಚನ ಪರವಾಗಿ ಮ್ಯಾನೇಜರ್ ಜಾಕ್ ಮಂಜು ಕೂಡ ಪ್ರೆಸ್​ಮೀಟ್​ ಟಕ್ಕರ್ ಕೊಟ್ಟಿದ್ದರು. ಎನ್ ಕುಮಾರ್​ಗೆ ಲೀಗಲ್ ನೋಟಿಸ್ ಕೊಟ್ಟ ಸುದೀಪ್ ಇನ್ನೊಂದೆಜ್ಜೆ ಮುಂದೆ ಹೋಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆನೂ ಹೂಡಿದರಿ. ಅಲ್ಲಿಗೆ ಒಂದೇ ಕುಟುಂಬ, ಒಂದೇ ಮನೆ ಎನ್ನುತ್ತಿದ್ದ ನಿರ್ಮಾಪಕರ ವಲಯದಲ್ಲಿ ಕಿಚ್ಚು ಹೆಚ್ಚಾಯ್ತು. ಅಲ್ಲಿವರೆಗೂ ಸುದ್ದಿಗೋಷ್ಠಿ, ಪ್ರತಿಭಟನೆಗೆ ಸೀಮತವಾಗಿ ಎನ್ ಕುಮಾರ್ ಹಾಗೂ ನಿರ್ಮಾಪಕರ ನಿಯೋಗ ರವಿಚಂದ್ರನ್ ಹಾಗೂ ಶಿವಣ್ಣನ ಹುಡುಕಿಕೊಂಡು ಹೋಗಿ ಸಮಸ್ಯೆ ಬಗೆಹರಿಸುವಂತೆ ಬೇಡಿಕೆಯಿಟ್ಟರು. ಈ ಪ್ರಕರಣವನ್ನ ಸೂಕ್ಷ್ಮವಾಗಿ ಗಮನಿಸಿದ್ದ ರವಿಚಂದ್ರನ್ ನನ್ನ ಮಾತಿಗೆ ಬೆಲೆ ಕೊಡೋಥರಾ ಇದ್ದರೆ, ನಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾದ್ರೆ ಮಾತ್ರ ನಾನು ಮಧ್ಯಪ್ರವೇಶ ಮಾಡ್ತೀನಿ, ಇಲ್ಲವಾದಲ್ಲಿ ನೀವೇ ನೋಡಿಕೊಳ್ಳಿ ಎಂದು ತಾಕೀತು ಮಾಡಿದ್ರು. ಅದರಂತೆ ಈಗ ಎನ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇಬ್ಬರು ಕನಸುಗಾರನ ನ್ಯಾಯಕ್ಕೆ ತಲೆಬಾಗಿದ್ದಾರೆ. ರವಿಚಂದ್ರನ್ ಮಾತಿಗೆ ಬೆಲೆ ಕೊಟ್ಟ ಸಂಧಾನಕ್ಕೆ ಮುಂದಾಗಿದ್ದಾರೆ.

ಸುದೀಪ್ ಮತ್ತು ಎಮ್​ಎನ್ ಕುಮಾರ್ ವಿಷ್ಯದಲ್ಲಿ ರವಿಚಂದ್ರನ್ ಮೊದಲೇ ಎಚ್ಚರಿಕೆ ಕೊಟ್ಟಿದ್ದರು. ನಾನು ಮಾತಿಗೆ ಬೆಲೆ ಕೊಡೋದಕ್ಕಿಂತ ದಾಖಲೆಗಳಿಗೆ ಬೆಲೆ ಕೊಡ್ತೇನೆ. ದಾಖಲೆಗಳು ಕೊಟ್ಟರೆ ನ್ಯಾಯ ಮಾಡೋಣ ಅಂದಿದ್ದರು. ಅದರಂತೆ ಶುಕ್ರವಾರ ನಡೆದ ಸಂಧಾನ ಸಭೆಯಲ್ಲಿ ಸುದೀಪ್ ಮತ್ತು ಎನ್ ಕುಮಾರ್ ಇಬ್ಬರು ಒಂದಿಷ್ಟು ದಾಖಲೆಗಳನ್ನ ರವಿಚಂದ್ರನ್ ಮುಂದಿಟ್ಟಿದ್ದಾರೆ. ಎರಡು ಕಡೆಯ ದಾಖಲೆಗಳನ್ನ ಪರಿಶೀಲನೆ ಮಾಡಿರೋ ಕ್ರೇಜಿಸ್ಟಾರ್​ ಯಾವುದು ಸರಿ, ಯಾವುದು ತಪ್ಪು, ಯಾವತ್ತು ಏನಾಗಿದೆ ಅನ್ನೋದ್ರ ಬಗ್ಗೆ ಗಮನ ಹರಿಸಿದ್ದಾರೆ. ಇನ್ನು ದಾಖಲೆಗಳನ್ನ ಪಡೆದು ರವಿಚಂದ್ರನ್ ಸುಮ್ಮನಾಗಿಲ್ಲ. ಎರಡು ಕಡೆಯ ವಾದ ಪ್ರತಿವಾದವನ್ನೂ ಆಲಿಸಿದ್ದಾರೆ.

ಎಮ್​ಎನ್​ ಕುಮಾರ್ ವಾದ.. ಸುದೀಪ್ ಪ್ರತಿವಾದ!

ಸುದೀಪ್ ಮತ್ತು ಎಮ್​ಎನ್ ಕುಮಾರ್ ಅವರದ್ದು ನಿನ್ನೆ ಮೊನ್ನೆಯ ಪರಿಚಯವಲ್ಲ. ಸುಮಾರು 20 ವರ್ಷದ ಸ್ನೇಹ. ಒಟ್ಟಿಗೆ 3-4 ಸಿನಿಮಾ ಮಾಡಿದ್ದಾರೆ. ಕೆಲವು ಚಿತ್ರಗಳಲ್ಲಿ ವ್ಯವಹಾರನೂ ಮಾಡಿದ್ದಾರೆ. ಇದು ಸ್ವತಃ ರವಿಚಂದ್ರನ್ ಅವರಿಗೂ ಗೊತ್ತಿದೆ. ಹಾಗಾಗಿ, ಕಾಲ್​ಶೀಟ್​  ವಿಷಯದಲ್ಲಿ ಏನಾಯ್ತು ಅನ್ನೋದನ್ನ ಕೇಳಿದಾಗ ಇಬ್ಬರು ಕೂಡ ತಮ್ಮ ವಾದ ಮಂಡಿಸಿದ್ದಾರೆ ಎನ್ನಲಾಗಿದೆ. ನಿರೀಕ್ಷೆಯಂತೆ ಸುದ್ದಿಗೋಷ್ಠಿಯಲ್ಲಿ ಹೇಳಿದನ್ನೇ ಎನ್ ಕುಮಾರ್ ರವಿಚಂದ್ರನ್ ಮುಂದೆಯೂ ಇಟ್ಟಿದ್ದಾರೆ. ಸುದೀಪ್ ಅವರಿಗೆ ಅಡ್ವಾನ್ಸ್​ ಕೊಟ್ಟಿದ್ದೇನೆ, ಸಿನಿಮಾ ಮಾಡಿಕೊಡ್ತಿನಿ ಅಂತಾನೂ ಹೇಳಿದ್ರು. ಇವಾಗ ಮಾಡೋಣ, ಆಮೇಲೆ ಮಾಡೋಣ ಅಂತ ಸತಾಯಿಸ್ತಿದ್ದಾರೆ ಹೊರತು ಕಾಲ್​ಶೀಟ್​ ಕೊಡ್ತಿಲ್ಲ, ಆ ಕಡೆ ದುಡ್ಡು ವಾಪಸ್ ಕೊಡ್ತಿಲ್ಲ ಅಂತ ಅಳಲುತೋಡಿಕೊಂಡಿದ್ದಾರಂತೆ.

ಇನ್ನು, ಎನ್ ಕುಮಾರ್ ಅವರು ಆರೋಪಕ್ಕೆ ಸುದೀಪ್ ಸಹ ತಿರುಗೇಟು ಕೊಟ್ಟಿದ್ದು, ಕಷ್ಟಕ್ಕೆ ಸ್ಪಂದಿಸಿದೆ, ಕಷ್ಟ ನೋಡಿ ಸಿನಿಮಾ ಮಾಡಿಕೊಡ್ತೀನಿ ಅಂತ ಮಾತು ಕೊಟ್ಟಿದೆ. ದಿನಕಳೆದಂತೆ ನಿರ್ದೇಶಕ, ಕಥೆ ಆಯ್ಕೆಯಲ್ಲಿ ಅವ್ರು ಲೇಟ್ ಮಾಡಿಕೊಂಡ್ರು. ನಾನು ಸುಮ್ಮನೆ ಕೂರುವುದಕ್ಕೆ ಆಗಲ್ಲ, ಹಾಗಾಗಿ ನಾನು ಬೇರೆ ಸಿನಿಮಾಗಳನ್ನ ಮಾಡಬೇಕಾಯಿತು. ಇದರಲ್ಲಿ ದುಡ್ಡು ತಗೊಂಡು ವಾಪಸ್ ಕೊಡ್ತಿಲ್ಲ, ಅಥವಾ ಸಿನಿಮಾ ಮಾಡಿ ಕೊಡ್ತಿಲ್ಲ ಅನ್ನೋದ್ರಲ್ಲಿ ಅರ್ಥನೇ ಇಲ್ಲ. ನಾನು ಅವ್ರ ಕಷ್ಟಕ್ಕಾಗಿ ಸಿನಿಮಾ ಮಾಡಿಕೊಡ್ತೀನಿ ಅಂದಿದ್ದೆ ಎಂದು ಸುದೀಪ್ ತಮ್ಮ ವಾದವನ್ನ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕೋರ್ಟ್​ ಬೇಡ.. ಇಲ್ಲೇ ತೀರ್ಮಾನವಾಗ್ಲಿ ಅಂತ ಬಿಗಿಪಟ್ಟು!

ಸುದೀಪ್ ಈಗಾಗಲೇ ಕೋರ್ಟ್​ ಮೆಟ್ಟಿಲೇರಿದ್ದಾರೆ. ಆದ್ರೆ ಎನ್ ಕುಮಾರ್ ಇದು ನ್ಯಾಯಾಲಯದಲ್ಲಿ ತೀರ್ಮಾನವಾಗೋದು ಬೇಡ ಅಂತ ಬಿಗಿಪಟ್ಟು ಹಿಡಿದಿದ್ದಾರಂತೆ. ಇನ್ನು ರಾಕ್ಲೈನ್ ವೆಂಕಟೇಶ್, ಭಾಮಾ ಹರೀಶ್​, ಉಮೇಶ್ ಬಣಕಾರ್ ಅವರು ಸಹ ಇದನ್ನ ಇಲ್ಲೇ ಬಗೆಹರಿಸಿಕೊಳ್ಳೋಣ ಅಂತ ಸಲಹೆ ಕೊಟ್ಟಿದ್ದಾರಂತೆ.

ಸಂಧಾನೆ ಸಭೆಯಲ್ಲಿ ಅಂತ್ಯ.. ಕಾದುನೋಡುವ ತಂತ್ರ!

ಮಧ್ಯಾಹ್ನದಿಂದ ರಾತ್ರಿವರೆಗೂ 7 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದರು ಈ ಸಂಧಾನ ಸಭೆಯಲ್ಲಿ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲವಂತೆ. ಸುದೀಪ್ ಅವರು ತಮ್ಮ ಮೇಲೆ ಬಂದಿರುವ ಟೀಕೆಗಳಿಗೆ ನ್ಯಾಯ ಬೇಕು ಎಂದು ವಾದ ಮಂಡಿಸಿ ಹೋದರೆ, ಈ ಕಡೆ ಎನ್.ಕುಮಾರ್ ಕೂಡ ನನಗೂ ನ್ಯಾಯ ಬೇಕು ಅಂತಾ ಕೇಳುತ್ತಿದ್ದಾರಂತೆ. ಸುದೀಪ್ ಮತ್ತು ಎನ್ ಕುಮಾರ್ ಅವ್ರು ಹೋದ ನಂತರವೂ ರಾಕ್ಲೈನ್, ರವಿಚಂದ್ರನ್, ಭಾಮಾ ಹರೀಶ್​ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಮುಂದೆ ಏನು ಮಾಡಬೇಕು? ಇದಕ್ಕೆ ಪರಿಹಾರ ಏನು ಅಂತ ವಿಶ್ಲೇಷಿಸಿದರು ಎನ್ನಲಾಗಿದೆ. ಸದ್ಯಕ್ಕೆ ಈ ಪ್ರಕರಣದಲ್ಲಿ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗದ ಕಾರಣ ಇನ್ನೊಂದು ಸಭೆ ಸೇರೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ ರವಿಚಂದ್ರನ್.

ಶಿವಣ್ಣ-ರವಿಚಂದ್ರನ್ ಸಮ್ಮುಖದಲ್ಲಿ ಮತ್ತೊಂದು ಸಭೆ!

ಸಿನಿಮಾ ಶೂಟಿಂಗ್ ಹಿನ್ನೆಲೆ ಶುಕ್ರವಾರ ನಡೆದ ಸಭೆಯಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಿರಲಿಲ್ಲ. ಆದ್ರೂ ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, ‘ಒಳ್ಳೆ ಬೆಳವಣಿಗೆ ಆಗಬೇಕು. ಇನ್ನೊಂದು ಎರಡ್ಮೂರು ದಿನಗಳಲ್ಲಿ ಪ್ರಾಬ್ಲಂ ಸಾಲ್ವಾ ಆಗುತ್ತೆ. ತಾಳ್ಮೆ ಬೇಕು. ಎಲ್ಲಾ ಸರಿ ಹೋಗುತ್ತೆ’ ಎಂದಿದ್ದಾರೆ.
ಸದ್ಯಕ್ಕೆ ಈ ಪ್ರಕರಣ ರವಿಚಂದ್ರನ್​​ ಕೈಯಲ್ಲಿದೆ. ಯಾಕಂದ್ರೆ ರವಿಚಂದ್ರನ್ ಏನೇ ಹೇಳಿದ್ರು ಒಪ್ಪಿಕೊಳ್ಳುತ್ತೇವೆ ಅಂತ ಸುದೀಪ್ ಮತ್ತು ಎನ್ ಕುಮಾರ್ ಮಾತು ಕೊಟ್ಟಿದ್ದಾರೆ. ಇನ್ನು ನನ್ನ ತೀರ್ಮಾನಕ್ಕೆ ಬದ್ಧವಾದ್ರೆ ಸಮಸ್ಯೆ ಬಗೆಹರಿಸ್ತೀನಿ ಎಂದಿರುವ ಕ್ರೇಜಿಸ್ಟಾರ್​ಗೂ ಇದು ಸವಾಲಿನ ಸಮಾಚಾರ. ಶತಾಯಗತಾಯ ಈ ಸಮಸ್ಯೆಗೆ ರವಿಸರ್ ಮನೆಯಲ್ಲೇ ಬಗೆಹರಿಸಬೇಕು ಅನ್ನೋ ಸಂದರ್ಭ ಸೃಷ್ಟಿಯಾಗಿದೆ. ಹಾಗಾಗಿ, ಮೊದಲ ಸಭೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲವಾದರೂ ಮುಂದಿನ ಸಭೆಯಲ್ಲಿ ರವಿಚಂದ್ರನ್ ತಮ್ಮ ನಿರ್ಣಯವನ್ನ ಪ್ರಕಟಿಸಿ ಇಬ್ಬರನ್ನ ತಣ್ಣಗಾಗಿಸುವ ಸಾಧ್ಯತೆ ದಟ್ಟವಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರವಿಚಂದ್ರನ್ ಸಭೆಯಲ್ಲೂ ಆರದ ಕಿಚ್ಚು; ಸುದೀಪ್ ಕೊಟ್ಟ ಖಡಕ್ ಉತ್ತರಕ್ಕೆ ನಿರ್ಮಾಪಕ ಕುಮಾರ್ ಶಾಕ್‌!

https://newsfirstlive.com/wp-content/uploads/2023/07/kiccha-sudeep-6.jpg

Load More