newsfirstkannada.com

ನಿರ್ಮಾಪಕರ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಕಿಚ್ಚ; ಸುಳ್ಳು ಅಥವಾ ಸತ್ಯ ಬಹಿರಂಗವಾಗಿ ಬಂದೇ ಬರುತ್ತದೆ ಎಂದ ಸುದೀಪ್​

Share :

15-07-2023

  ಕಾನೂನು ಸಮರಕ್ಕೆ ಮುಂದಾದ ಬಾದ್​​ಶಾ ಕಿಚ್ಚ ಸುದೀಪ್​

  ನಿರ್ಮಾಪಕ ವಿರುದ್ಧ 13ನೇ ACMM​ ಕೋರ್ಟ್ ಮೊರೆ ಹೋದ ಸುದೀಪ್​

  ಸರಿಯಾದ ಮಾರ್ಗದಲ್ಲಿ ಹೋಗ್ತಾ ಇದ್ದೇನೆ ಎಂದು ಬಾದ್​ಶಾ ಕಿಚ್ಚ

ದೇವರು ಒಳ್ಳೆದು ಮಾಡ್ಲಿ. ಯಾವುದೇ ಒಂದು ಸುಳ್ಳು ಅಥವಾ ಸತ್ಯ ಬಹಿರಂಗವಾಗಿ ಹೊರಗೆ ಬಂದೇ ಬರುತ್ತೆ. ಏನು ಪತ್ರಿಕಾಗೋಷ್ಠಿಯಲ್ಲಿ ನಡೆಯಿತು ಕೆಲವು ಅದನ್ನ ಕ್ಲೀನ್​ ಮಾಡ್ಕೋಬೇಕು. ಸರಿಯಾದ ಮಾರ್ಗದಲ್ಲಿ ಹೋಗ್ತಾ ಇದ್ದೇನೆ ಅಂತ ನಾನು ಅನ್ಕೊಂಡಿದ್ದೇನೆ. ಇಲ್ಲಿ  ನಾವು ಸರಿಯಲ್ಲ ಅಂದ್ರೆ ನಮ್ಮ ಗುಂಡಿನ ಯಾರು ತೋಡೋಕೆ ಬರಲ್ಲ. ಮಿಕ್ಕಿದ್ದೆಲ್ಲಾ ಯಾರ್ಯಾದು ಏನೇನಿದೆ? ಯಾವ ರೀತಿ ಇದೆ?. ಸಾಧ್ಯವಾದಲ್ಲಿ, ಟೈಮ್​ ಇದ್ದಲ್ಲಿ ಕೊಡಬೇಕು ಅನ್ಸಿದ್ರೆ ಕೊಡೋಣ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಎಮ್​ ಎನ್​ ಕುಮಾರ್ ಮಾಡಿರುವ ಕಾಲ್​ಶೀಟ್​​ ಆರೋಪದ ಮೇರೆಗೆ ನ್ಯಾಯಾಲಯದ ಮೊರೆ ಹೋದ ಕಿಚ್ಚ ಸುದೀಪ್​ ಇಂದು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವೇಳೆ ಮಾಧ್ಯಮದವರ ಮುಂದೆ ಮಾತನಾಡಿದ ಸುದೀಪ್​, ನಾನು ಕಲಾವಿದನಾದಾಗ ಎಲ್ಲರ ಪರಿಹಾರ, ಎಲ್ಲರ ತೊಂದರೆಗೆ ನಾನು ಚಾರಿಟೇಬಲ್​ ಟ್ರಸ್ಟ್​ ಓಪನ್​ ಮಾಡಿಲ್ಲ ಸರ್​. ಒಬ್ರು ತಪ್ಪು ಆರೋಪ ಮಾಡಿದ್ದಕ್ಕೆ ಬಂದಿದ್ದೀನಿ. ಮತ್ತೆ ಬರ್ಬೇಕು ಅಂದ್ರೆ ಮತ್ತೆ ಬರ್ತೀನಿ. ಆದ್ರೆ ಪಾಯಿಂಟ್​ ಅದಲ್ಲ. ಕಾಲಿದೆ ಅಂತ ಓಡಾಡ್ತಾ ಇರ್ಬಾರ್ದು, ಕೈ ಇದೆ ಅಂತ ಕೊಡ್ತಾ ಇರ್ಬಾರ್ದು. ನಾನು ಕಷ್ಟ ಪಟ್ಟಿರೋದು. ಭಗವಂತ ಅಕಸ್ಮಾತ್​ ನನ್ನ ಚೆನ್ನಾಗಿ ಇಟ್ಟಿದ್ದಾನೆ ಎಲ್ಲರ ಪ್ರೀತಿ ಇದೆ ಅಂದ್ರೆ ಎಲ್ಲೋ ಸರಿಯಾಗಿ ಇದ್ದು ಮಾಡ್ಬೇಕಾದನ್ನು ಮಾಡಿದ್ದಕ್ಕೆ ಇಲ್ಲಿ ಇದ್ದೀವೆ. ಎಲ್ಲರ ಆರೋಪಗಳಿಗೆ ನನ್ನತ್ರ ಉತ್ತರ ಇಲ್ಲ ಸರ್​. ತಪ್ಪು ಸರಿ ನಿರ್ಧಾರ ಆಗುತ್ತೋ ಆಗಲಿ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಿರ್ಮಾಪಕ ಎಮ್​ ಎನ್​ ಕುಮಾರ್ ಮತ್ತು ರೆಹಮಾನ್ ಸುದೀಪ್​ ವಿರುದ್ಧ ಆರೋಪ ಮಾಡಿದ್ದರು. ಕಾಲ್​​ ಶೀಟ್​ ಮತ್ತು ಹಣ ನೀಡದೇ ಇರುವ ವಿಚಾರವಾಗಿ ನಿರ್ಮಾಪಕ ಸಂಘದವರೊಂದಿಗೆ ಎಮ್​ ಎನ್​ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದರು. ಅತ್ತ ರೆಹಮಾನ್​​ ಕೂಡ ನನಗೆ ಸುದೀಪ್ ಹಣಕೊಡಲು ಆಗಬೇಕು ಎಂದು ಹೇಳಿದ್ದರು. ಆದರೀಗ ಇದೇ ವಿಚಾರವಾಗಿ ಕಿಚ್ಚ ಸುದೀಪ್​​ 13ನೇ ಎಸಿಎಮ್​ಎಮ್​ ಕೋರ್ಟ್ ಮೊರೆ ಹೋಗಿದ್ದಾರೆ. ತನ್ನ ಮೇಲೆ ಆರೋಪ ಮಾಡಿದ ನಿರ್ಮಾಪಕರ ವಿರುದ್ಧ ದೂರು ಸಲ್ಲಿಸಿದ್ದಾರೆ.

ಇನ್ನು ಸುದೀಪ್​ ಅರ್ಜಿಯನ್ನು ಸ್ವೀಕರಿಸಿದ ಕೋರ್ಟ್​ ಆಗಸ್ಟ್​ 17ಕ್ಕೆ ವಿಚಾರಣೆ ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿರ್ಮಾಪಕರ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಕಿಚ್ಚ; ಸುಳ್ಳು ಅಥವಾ ಸತ್ಯ ಬಹಿರಂಗವಾಗಿ ಬಂದೇ ಬರುತ್ತದೆ ಎಂದ ಸುದೀಪ್​

https://newsfirstlive.com/wp-content/uploads/2023/07/Kiccha-Sudeep-5.jpg

Load More