newsfirstkannada.com

BIGG BOSS: ಕೊನೆಗೂ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಡ್ರೋನ್​​ ಪ್ರತಾಪ್; ​ಏನ್​ ಗುರೂ ನಿನ್​ ಅದೃಷ್ಟ ಎಂದ ನೆಟ್ಟಿಗರು

Share :

12-11-2023

    ಬಿಗ್​ಬಾಸ್​ ಪ್ರಬಲ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಡ್ರೋನ್​​ ಪ್ರತಾಪ್​

    ಬಿಗ್​ಬಾಸ್​ ಮನೆಯಲ್ಲಿ ಯಾವಾಗ ಏನು ಬೇಕಾದರೂ ಬದಲಾಗಬಹುದು!

    ಬಿಗ್​ಬಾಸ್ ಮನೆಯಲ್ಲಿ ಮತ್ತೊಮ್ಮೆ ಕಮಾಲ್​ ಮಾಡಿದ ಡ್ರೋನ್ ಪ್ರತಾಪ್​​

ಸದ್ಯ ಎಲ್ಲಿ ನೋಡಿದರೂ ಡ್ರೋನ್​​​, ಎಲ್ಲರ ಬಾಯಲ್ಲೂ ಡ್ರೋನ್‌ ಪ್ರತಾಪ್​​ ಬಗ್ಗೆಯೇ ಮಾತುಕತೆ. ಹೌದು ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​​ಬಾಸ್​ ಮನೆಯಲ್ಲಿ ಡ್ರೋನ್​ ಪ್ರತಾಪ್ ಆಟ ನೋಡಿ ಕೆಲ​ ಪ್ರಬಲ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

ಡ್ರೋನ್​​ ಪ್ರತಾಪ್​​ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟುಕೊಂಡಿದೆ. ಹಂತ ಹಂತವಾಗಿ ಬಿಗ್​ಬಾಸ್​ ಮನೆಯಲ್ಲಿಯೂ ಒಳ್ಳೆಯ ಹೆಸರು ಗಳಿಸುತ್ತಿದ್ದಾರೆ. ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಕಿಚ್ಚ ಸುದೀಪ್​ ಅವರಿಂದ ಕಿಚ್ಚನ ಚಪ್ಪಾಳೆ ಸಹ ತಮ್ಮದಾಗಿಸಿಕೊಂಡಿದ್ದಾರೆ. ಬಿಗ್​ಬಾಸ್​​ ಸೀಸನ್​​ 10ರ ಐದನೇ ವಾರಕ್ಕೆ ಕಿಚ್ಚ ಸುದೀಪ್​ ಅವರಿಂದ ‘ಕಿಚ್ಚನ ಚಪ್ಪಾಳೆ’ ಪಡೆದುಕೊಂಡಿದ್ದಾರೆ ಡ್ರೋನ್​ ಪ್ರತಾಪ್​. ಜೊತೆಗೆ ಕಿಚ್ಚ ಸುದೀಪ್​ ಅವರ ಪ್ರಶಂಸೆಯನ್ನೂ ಗಳಿಸಿದ್ದಾರೆ.

ಕಿಚ್ಚ ಸುದೀಪ್​ ಅವರು ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ ಸಿಗುತ್ತಿದೆ ಎಂದಾಗ ಡ್ರೋನ್​ ಪ್ರತಾಪ್​ ಖುಷಿಯಿಂದ ಕುಣಿದಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತಾಡಿದ ಪ್ರತಾಪ್​, ಹೊರಗಡೆಯಾದ್ರೆ ಎರಡೂ ಕಡೆ ಏನು ತಪ್ಪು ಆಗಿದೆ ಅಂತ ಕಾಣಿಸುವುದಿಲ್ಲ ಸರ್​. ಕೆಲವೊಂದು ತಪ್ಪು ಮಾಡಿದ್ದೇನೆ, ಅದನ್ನು ಹೇಳುವುದಕ್ಕೆ ಮುಜುಗರ ಇಲ್ಲ ಸರ್​. ಕಳ್ಳ-ಸುಳ್ಳ ಎಂದೋರನ್ನು ಈಗ ನೆನಪಿಸಿಕೊಂಡರೆ ಮನಸ್ಸು ಹಗುರ ಆಗ್ತಿದೆ ಸರ್​ ಎಂದಿದ್ದಾರೆ.

ಇನ್ನು, ಮೊನ್ನೆ ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಡ್ರೋನ್​ ಪ್ರತಾಪ್​ ಪರ ಅಭಿಯಾನವೊಂದು ಶುರುವಾಗಿತ್ತು. ಈ ವಾರದ ಕಿಚ್ಚನ ಚಪ್ಪಾಳೆ ಪ್ರತಾಪ್​ಗೆ ಸಿಗಬೇಕು ಎಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದರು. ಕೊನೆಗೂ ಉತ್ತಮ ಉಸ್ತುವಾರಿ ಮಾಡಿ ಕಿಚ್ಚನ ಚಪ್ಪಾಳೆ ಡ್ರೋನ್​ ಪ್ರತಾಪ್​ ಪಡೆದುಕೊಂಡಿದ್ದನ್ನು ನೋಡಿದ ಫ್ಯಾನ್ಸ್​​ ಫುಲ್​ ಖುಷ್​ ಆಗಿದ್ದಾರೆ.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಕೊನೆಗೂ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಡ್ರೋನ್​​ ಪ್ರತಾಪ್; ​ಏನ್​ ಗುರೂ ನಿನ್​ ಅದೃಷ್ಟ ಎಂದ ನೆಟ್ಟಿಗರು

https://newsfirstlive.com/wp-content/uploads/2023/11/BIGG-BOSS-2023-11-12T082625.112.jpg

Load More