newsfirstkannada.com

VIDEO: ‘ಬಿಗ್​ಬಾಸ್​ನಲ್ಲಿ ನನಗೂ ಅವಕಾಶ ಕೊಡಿ’.. ಕಿಚ್ಚ ಸುದೀಪ್​ ಮನೆ ಮುಂದೆ ಧರಣಿ ಕುಳಿತ್ತಿದ್ದ ರೈತನಿಗೆ ಆವಾಜ್

Share :

20-11-2023

  ಬೆಂಗಳೂರಲ್ಲಿ ಎಲ್ಲೇ ಕಾಣಿಸಿದರೂ ನಿನ್ನ ಬಿಡಲ್ಲವೆಂದು ಗದರಿದರು

  ನಿನ್ನ ಎತ್ತಿನ ಗಾಡಿಯನ್ನ ಸುಟ್ಟು ಹಾಕುತ್ತೇವೆ ಎಂದು ರೈತನಿಗೆ ಆವಾಜ್

  ‘ಆದರೆ ಮನೆಯಲ್ಲಿ ಸುದೀಪ್ ಇದ್ರೋ, ಇಲ್ವೋ ಗೊತ್ತಿಲ್ಲ.. ಕಾಣಿಸಲಿಲ್ಲ’

ಕನ್ನಡ ಕಿರುತೆರೆಯ ಬಿಗ್‌ ರಿಯಾಲಿಟಿ ಶೋ​ ಅಂದ್ರೆ ಬಿಗ್​ಬಾಸ್. ಸ್ಪರ್ಧಿಗಳು ಆಟವಾಡುತ್ತಿರುವುದು ನೋಡಿದರೆ ಅಲ್ಲಿ ಹೋಗಿ ನಾವು ಗೇಮ್ ಪ್ಲಾನ್ ಮಾಡಬಹುದಾ? ಬಿಗ್​ಬಾಸ್​ ಜತೆ ಮಾತನಾಡಬಹುದಾ? ಈ ಬಿಗ್ ಹೌಸ್ ರಾಜ್ಯಾದ್ಯಂತ ಸಾಕಷ್ಟು ಖ್ಯಾತಿ ಪಡೆದಿದೆ. ನಾವು ಸ್ಪರ್ಧೆ ಮಾಡಬಹುದಲ್ವಾ ಎಂಬ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಅದರಂತೆ ಇಂತಹ ಪ್ರಶ್ನೆ ಮೂಡಿದ್ದ ರೈತನೋರ್ವ ಬಿಗ್​ಬಾಸ್​ನಲ್ಲಿ ನನಗೂ ಅವಕಾಶ ಕೊಡಿ ಎಂದು ಎತ್ತಿನ ಗಾಡಿ ಏರಿ ನೇರ ಕಿಚ್ಚ ಸುದೀಪ್​ ಮನೆ ಬಳಿ ಬಂದು ಧರಣಿ ಕುಳಿತು ಬಿಟ್ಟಿದ್ದಾನೆ.

ಮೈಸೂರಿನ ಟಿ. ನರಸೀಪುರ ತಾಲೂಕು ಬಿಳಿಗೆರೆಹೊಂಡೆ ಗ್ರಾಮದ ರೈತ ಮಂಜು ಏಳು ಮಲೈ, ಬಿಗ್​ಬಾಸ್​ನಲ್ಲಿ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಹೀಗಾಗಿ ತನ್ನ ಊರಿನಿಂದಲೇ ಎತ್ತಿನ ಗಾಡಿ ಒಡೆದುಕೊಂಡು ಬಂದಿರುವ ರೈತ ನೇರ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಿಚ್ಚ ಸುದೀಪ್ ನಿವಾಸಕ್ಕೆ ತೆರಳಿದ್ದಾನೆ. ಅಲ್ಲಿ ಎತ್ತಿನ ಗಾಡಿ ಮೇಲೆ ಏರಿ ನನಗೂ ಬಿಗ್​ಬಾಸ್​ನಲ್ಲಿ ಅವಕಾಶ ಕೊಡಿಯೆಂದು ಧರಣಿ ಕುಳಿತಿದ್ದಾರೆ. ನಾನು ಅವಿದ್ಯಾವಂತ, ಅವಕಾಶ ಮಾಡಿ ಕೊಡಿ ಎಂದು ರಾತ್ರಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದಾರೆ.

ಇನ್ನು ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ರೈತ ಮಂಜು ಏಳು ಮಲೈ, ಮುಂದಿನ ಬಾರಿ ನನಗೂ ಒಂದು ಅವಕಾಶ ಕೊಡಲಿ ಎಂದು ಸುದೀಪ್ ಅಣ್ಣನ ಭೇಟಿ ಮಾಡಲು ನನ್ನ ಎತ್ತಿನ ಗಾಡಿಯನ್ನು ಊರಿಂದ ಒಡೆದುಕೊಂಡು ಬಂದಿದ್ದೇನೆ. ಸುದೀಪ್ ಮನೆಯಿಂದ ಬಂದ ಮೂವರು ನೀನು ಬೆಂಗಳೂರಲ್ಲಿ ಎಲ್ಲೇ ಕಾಣಿಸಿದರೂ ನೀನ್ನ, ನಿನ್ನ ಗಾಡಿಯನ್ನ ಸುಟ್ಟು ಹಾಕುತ್ತೇವೆ ಎಂದು ಅವಾಜ್ ಹಾಕಿದ್ರು ಅಂತ ರೈತ ಹೇಳಿದ್ದಾನೆ.

ಇದಕ್ಕೆ ಇಲ್ಲ, ಸುದೀಪ್ ಅಣ್ಣನ ನೋಡೋಕೆ ಅಂತ ಬಂದಿದ್ದು, ನಮ್ಮಂತೆ ಓದದೇ ಇರುವವರು ರಾಜ್ಯದಲ್ಲಿ ತುಂಬಾ ಜನ ಇದಾರೆ. ಮುಂದೆ ನಮಗೆ ಒಂದು ಬಿಗ್​​ಬಾಸ್​ನಲ್ಲಿ ಅವಕಾಶ ಮಾಡಿಕೊಡಿ ಎಂದಿದ್ದೇನೆ. ಆದರೆ ಇದುವರೆಗೂ ಸುದೀಪ್ ಕಾಣಿಸಿಲ್ಲ. ಸುದೀಪ್ ಮನೆಯಿಂದ ಹೊರ ಬಂದ ಮೂವರು ಎದೆ ಮೇಲಿನ ಶರ್ಟ್​ ಹಿಡಿದು ನನ್ನ ತಳ್ಳಿದರು. ನಿನ್ನೆ ಬೆಳಗ್ಗೆ 6 ಗಂಟೆಗೆ ಬಂದು ರಾತ್ರಿ 11 ಗಂಟೆವರೆಗೆ ಸುದೀಪ್ ಮನೆ ಮುಂದೆ ಇದ್ದೆ. ಅವರು ಮನೆಯಲ್ಲಿ ಇದ್ರೋ, ಇಲ್ವೋ ಗೊತ್ತಿಲ್ಲ. ಆದರೆ ಅಲ್ಲಿದ್ದವರು ಸುದೀಪ್ ಎಲ್ಲ ಹೋಗು ಎಂದು ಹೇಳಿದ್ರು ಎಂದು ರೈತ ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಬಿಗ್​ಬಾಸ್​ನಲ್ಲಿ ನನಗೂ ಅವಕಾಶ ಕೊಡಿ’.. ಕಿಚ್ಚ ಸುದೀಪ್​ ಮನೆ ಮುಂದೆ ಧರಣಿ ಕುಳಿತ್ತಿದ್ದ ರೈತನಿಗೆ ಆವಾಜ್

https://newsfirstlive.com/wp-content/uploads/2023/11/BIG_BOSS.jpg

Load More