ಕುಟುಂಬ ಸಮೇತ ಆಗಮಿಸಿ ಕಾವೇರಿ ನದಿಯಲ್ಲಿ ಅಸ್ತಿ ವಿಸರ್ಜನೆ
ಅಸ್ತಿಯನ್ನು ವಿಸರ್ಜನೆ ಮಾಡುವಾಗ ಕಣ್ಣೀರು ಹಾಕಿದ ಸುದೀಪ್
ಸುದೀಪ್ ತಾಯಿ ಸರೋಜಮ್ಮ ಇಹಲೋಕ ತ್ಯಜಿಸಿ 3 ದಿನಗಳು
ಮಂಡ್ಯ: ನಟ ಕಿಚ್ಚ ಸುದೀಪ್ ಅವರ ತಾಯಿ ವಿಧಿವಶರಾಗಿ ಇಂದಿಗೆ 3 ದಿನಗಳು ಕಳೆದಿವೆ. ಈ ಹಿನ್ನೆಯಲ್ಲಿ ಸುದೀಪ್ ಅವರು ತಮ್ಮ ಕುಟುಂಬ ಸಮೇತ ಆಗಮಿಸಿ ಕಾವೇರಿ ನದಿಯಲ್ಲಿ ತಾಯಿ ಸರೋಜಾ ಅಸ್ತಿಯನ್ನು ವಿಸರ್ಜನೆ ಮಾಡಿದ್ದಾರೆ. ಈ ವೇಳೆ ಸುದೀಪ್ ಅವರು ಕಣ್ಣೀರು ಹಾಕಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಸುದೀಪ್ ಅವರು ತಾಯಿಯ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಪ್ರಾರ್ಥಿಸಿದರು. ಸುದೀಪ್ ಜೊತೆ ಕುಟುಂಬಸ್ಥರು ವಿಧಿ ವಿಧಾನ ಕಾರ್ಯದಲ್ಲಿ ಭಾಗಿಯಾಗಿದ್ದರು. ತಾಯಿಯ ಅಸ್ತಿ ವಿಸರ್ಜನೆ ಕಾರ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯದಂತೆ ಸುದೀಪ್ ಅವರು ಮನವಿ ಮಾಡಿದ ಹಿನ್ನೆಲೆ ಯಾರು ಫೋಟೋ ವಿಡಿಯೋ ತೆಗೆಯಲಿಲ್ಲ. ತಾಯಿಯ ಅಸ್ತಿ ವಿಸರ್ಜನೆ ಮಾಡುವಾಗ ಸುದೀಪ್ ಅವರು ತೀವ್ರ ದುಃಖಿತರಾಗಿದ್ದರು.
ತಾಯಿಯ ಕಾರ್ಯ ಇರುವುದರಿಂದ ಇಂದು ಬೆಳಗ್ಗೆ 9 ಗಂಟೆಗೆ ಆಗಮಿಸಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಬಳಿಕ ವಿಧಿವಿಧಾನಗಳನ್ನ ಸುದೀಪ್ ಅವರು ನೆರವೇರಿಸಿದರು. ಈ ಎಲ್ಲ ಕಾರ್ಯಗಳು ಮುಗಿದ ಮೇಲೆ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದರು.
ಸುದೀಪ್ ಅವರ ತಾಯಿ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೇ ಅಕ್ಟೋಬರ್ 20ರ ಬೆಳಗ್ಗೆ ಇಹಲೋಕ ತ್ಯಜಿಸಿದ್ದರು. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ