newsfirstkannada.com

ಪ್ರೀತಿಸಿದ ತಪ್ಪಿಗೆ ಯುವಕನ ಕಿಡ್ನಾಪ್;​ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

Share :

16-07-2023

    ಕಾಲೇಜಿಗೆ ತೆರಳುತಿದ್ದ ವೇಳೆ ಯುವಕನನ್ನು ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು

    ಕೈ ಕಾಲು ಕಟ್ಟಿಹಾಕಿ ಬಳಿಕ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಕಿರಾತಕರು

    ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು

ಬೆಂಗಳೂರು: ಪ್ರೀತಿಸಿದ ತಪ್ಪಿಗೆ ಯವಕನೋರ್ವನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಕಾಲೇಜಿಗೆ ತೆರಳುತಿದ್ದ ವೇಳೆ ಯುವಕನನ್ನು ಕಿಡ್ನಾಪ್ ಮಾಡಿದ ಕಿರಾತಕರು ಈ ಕೃತ್ಯವೆಸಗಿದ್ದಾರೆ.

ಆರ್ ಆರ್‌ ನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್​ ಮೇಲೆ ಕಿರಾತಕರು ಪೆಟ್ರೋಲ್​ ಸುರಿದು ಬೆಂಕಿ ಹಾಕಿದ್ದಾರೆ. ಶಶಾಂಕ್ ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸುತಿದ್ದ. ಆದರೆ ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕಳೆದ ಸೋಮವಾರದಂದು ಮೈಸೂರಿನಿಂದ ಬೆಂಗಳೂರಿಗೆ ಯುವತಿ ಬಂದಿದ್ದಳು.

ತನ್ನನ್ನು ನಂಬಿ ಬೆಂಗಳೂರಿಗೆ ಬಂದ ಯುವತಿಯ‌ನ್ನು ಶಶಾಂಕ್ ಮನೆಗೆ ಕರೆದೊಯ್ದಿದ್ದನು. ಈ ವೇಳೆ ಯುವತಿಯ ಪೋಷಕರು ಶಶಾಂಕ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಯುವತಿ ಸಹವಾಸಕ್ಕೆ ಹೋಗಲ್ಲ ಎಂದು ಹೇಳಿ ಶಶಾಂಕ್ ತನ್ನ ಪಾಡಿಗೆ ಕಾಲೇಜಿಗೆ ಹೋಗಿದ್ದಾನೆ.

ನಿನ್ನೆ ಬೆಳಗ್ಗ ತಂದೆ ರಂಗನಾಥ ಶಶಾಂಕ್​​ನನ್ನು  ಕಾಲೇಜಿಗೆ ಡ್ರಾಪ್ ಮಾಡಿದ್ದಾರೆ.ಈ ವೇಳೆ ಬಸ್ ನಿಲ್ದಾಣದಲ್ಲಿ‌ ಬಸ್​ಗೆ ಕಾಯುತಿದ್ದ ಶಶಾಂಕ್​​​ನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೈ ಕಾಲು ಕಟ್ಟಿಹಾಕಿದ್ದಾರೆ. ಬಳಿಕ ಪೆಟ್ರೋಲ್​ ಸುರಿದು ಬೆಂಕಿ ಇಟ್ಟಿದ್ದಾರೆ.

ಸದ್ಯ ಶಶಾಂಕ್ ಬೆಂಕಿಯ ತಗುಲಿ ತೀವ್ರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಈ ಪ್ರಕರಣ ಸಂಬಂಧಿಸಿದಂತೆ ಕುಂಬಳಗೋಡು ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿದ ತಪ್ಪಿಗೆ ಯುವಕನ ಕಿಡ್ನಾಪ್;​ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

https://newsfirstlive.com/wp-content/uploads/2023/07/Manu.jpg

Load More