newsfirstkannada.com

VIDEO: ಫೇಮಸ್‌ ಟಿಕ್‌ಟಾಕ್ ಸ್ಟಾರ್ ಪತಿಯ ಕಿಡ್ನಾಪ್.. ಗಂಡನ ಸುರಕ್ಷತೆಗಾಗಿ ನಟಿ ಕಣ್ಣೀರು

Share :

05-09-2023

    ಫೇಮಸ್ ಟಿಕ್‌ಟಾಕ್ ಸ್ಟಾರ್ ಹರೀಂ ಶಾ ಗಂಡನ ಅಪಹರಣ

    ಒಂದು ವಾರದಿಂದ ಗಂಡನಿಗಾಗಿ ಟಿಕ್‌ಟಾಕ್ ಸ್ಟಾರ್ ಪರದಾಟ

    ವಿಡಿಯೋ ಬಿಡುಗಡೆ ಮಾಡಿದ ಹರೀಂ ಶಾ ಕಣ್ಣೀರಿನ ಮನವಿ

ಇಸ್ಲಾಮಾಬಾದ್‌: ಪಾಕಿಸ್ತಾನದ ಫೇಮಸ್ ಟಿಕ್‌ಟಾಕ್ ಸ್ಟಾರ್ ಹರೀಂ ಶಾ ಅವರ ಗಂಡನನ್ನು ಕಿಡ್ನಾಪ್ ಮಾಡಲಾಗಿದೆ. ಕಳೆದ ಒಂದು ವಾರದ ಹಿಂದೆ ಯಾರೋ ಅಪರಿಚಿತರು ಬಂದು ನನ್ನ ಪತಿ ಬಿಲಾಲ್‌ ಅನ್ನು ಅಪಹರಿಸಿದ್ದಾರೆ. ದಯವಿಟ್ಟು ಸುರಕ್ಷಿತವಾಗಿ ಅವರನ್ನು ಹುಡುಕಿಕೊಡಿ ಎಂದು ಟಿಕ್‌ಟಾಕ್ ಸ್ಟಾರ್ ಹರೀಂ ಶಾ ಮೊರೆ ಇಡುತ್ತಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಹರೀಂ ಶಾ, ಕಣ್ಣೀರು ಹಾಕುತ್ತಾ ಪಾಕಿಸ್ತಾನದ ISI ನೆರವು ಬೇಡಿಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ಹರೀಂ ಶಾ ಹಾಗೂ ಬಿಲಾಲ್ ದಂಪತಿಗೆ ಲಂಡನ್‌ಗೆ ಹೋಗಿದ್ದರು. ಆದ್ರೆ, ಹರೀಂ ಶಾರನ್ನು ಲಂಡನ್‌ನಲ್ಲೇ ಬಿಟ್ಟು ಬಿಲಾಲ್ ಪಾಕಿಸ್ತಾನಕ್ಕೆ ವಾಪಸ್ ಆಗಿದ್ದಾರೆ. ಪಾಕಿಸ್ತಾನದ ಮನೆ ಬಳಿ ಯಾರೋ ಅಪರಿಚಿತರು ವಾಹನದಲ್ಲಿ ಬಂದು ಅಪಹರಿಸಿಕೊಂಡು ಹೋಗಿದ್ದಾರೆ. ನನ್ನ ಪತಿಯ ಜೀವಕ್ಕೆ ಅಪಾಯವಿದೆ. ದಯವಿಟ್ಟು ಅವರನ್ನು ಸುರಕ್ಷಿತವಾಗಿ ಹುಡುಕಿಕೊಡಬೇಕು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಇದನ್ನು ಗಂಭೀರವಾಗಿ ಪರಿಗಣಿಸಿ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಹರೀಂ ಶಾ ಪಾಕಿಸ್ತಾನದಲ್ಲಿ ಫೇಮಸ್ ಟಿಕ್‌ಟಾಕ್ ಸ್ಟಾರ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತನ್ನ ಗಂಡನ ಕಿಡ್ನಾಪ್‌ಗೆ ಕಂಗಾಲಾಗಿರೋ ಹರೀಂ ಶಾ, ಸಹಾಯ ಕೇಳುತ್ತಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿರೋ ಹರೀಂ ಶಾ, ನನ್ನ ಗಂಡ ಯಾವುದೇ ರಾಜಕೀಯ, ಪ್ರತ್ಯೇಕತಾವಾದಿಗಳ ಗುಂಪಿನಲ್ಲಿ ಸೇರಿಲ್ಲ. ನನ್ನ ಗಂಡನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ಪಾಕಿಸ್ತಾನ ಸರ್ಕಾರವನ್ನು ಕೇಳಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

VIDEO: ಫೇಮಸ್‌ ಟಿಕ್‌ಟಾಕ್ ಸ್ಟಾರ್ ಪತಿಯ ಕಿಡ್ನಾಪ್.. ಗಂಡನ ಸುರಕ್ಷತೆಗಾಗಿ ನಟಿ ಕಣ್ಣೀರು

https://newsfirstlive.com/wp-content/uploads/2023/09/Pak-Tik-Tak-Star.jpg

Load More