/newsfirstlive-kannada/media/post_attachments/wp-content/uploads/2024/11/TTD-NEW-RESOLUTION-1.jpg)
ಕಾಳಿಂಗ ಸರ್ಪ, ಏಷಿಯಾದಲ್ಲಿ ಅದರಲ್ಲೂ ಅತಿಹೆಚ್ಚು ಕಾಣಿಸಿಕೊಳ್ಳುವುದು ಭಾರತದಲ್ಲಿಯೇ ವಿಶ್ವದಲ್ಲಿಯೇ ಅತ್ಯಂತ ವಿಷಕಾರಿ ಹಾವುಗಳಲ್ಲಿ ಈ ಕಿಂಗ್ ಕೊಬ್ರಾ ಕೂಡ ಸ್ಥಾನ ಪಡೆದುಕೊಂಡಿದೆ. ಈ ಕಾಳಿಂಗ ಸರ್ಪದ ರಹಸ್ಯವೊಂದನ್ನು ಭೇದಿಸಿದ್ದಾರೆ ವಿಜ್ಞಾನಿ ಪಿ.ಗೌರಿ ಶಂಕರ್​. ಕಾಳಿಂಗ ಸರ್ಪ ಅಂದ್ರೆ ಅದು ಒಂದೇ ಬಗೆಯ ಹಾವು. ನಾಗರಹಾವಿನ ಬಳಿಕ ಅತ್ಯಂತ ವಿಷಕಾರಿ ಹಾವು ಅಂದ್ರೆ ಅದೊಂದೆ ಎಂಬ ನಂಬಿಕೆಗಳು ನಮಗೆಲ್ಲರಿಗೂ ಇದೆ. ಆದ್ರೆ ಕಾಳಿಂಗ ಸರ್ಪದಲ್ಲಿ ಸುಮಾರು ನಾಲ್ಕು ಪ್ರಬೇಧಗಳು ಇವೆ ಎಂದು ವಿಜ್ಞಾನಿ ಗೌರಿ ಶಂಕರ್ ತಮ್ಮ ಸಂಶೋಧನೆಯಲ್ಲಿ ಬಯಲು ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/TTD-NEW-RESOLUTION-3.jpg)
ಉತ್ತರದ ಕಾಳಿಂಗ ಸರ್ಪ, ಸುಂದಾ ಕಾಳಿಂಗ ಸರ್ಪ, ಪಶ್ಚಿಮ ಘಟ್ಟದ ಕಾಳಿಂಗ ಸರ್ಪ ಹಾಗೂ ಲುಜೊನಾ ಕಾಳಿಂಗ ಸರ್ಪ ಎಂಬ ಒಟ್ಟು ನಾಲ್ಕು ಪ್ರಬೇಧಗಳ ಕಾಳಿಂಗ ಸರ್ಪಗಳಿವೆ ಎಂದು ಹೇಳಲಾಗಿದೆ. ನಿರಂತರ 12 ವರ್ಷಗಳ ಸಂಶೋಧನೆಯ ಬಳಿಕ ಆಗುಂಬೆ ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಎಕಾಲಜಿಯಲ್ಲಿ ಈ ಒಂದು ಸತ್ಯ ಬಹಿರಂಗಗೊಂಡಿದೆ. ಕಾಳಿಂಗ ಸರ್ಪ ಕೇವಲ ಒಂದೇ ಒಂದು ಅಲ್ಲ. ಅದರಲ್ಲಿ ನಾಲ್ಕು ಜಾತಿಗಳಿವೆ ಎಂದು ಹೇಳಲಾಗಿದೆ.
ದಕ್ಷಿಣದ ಕಾಳಿಂಗ ಸರ್ಪಗಳು ನಮಗೆ ಹೆಚ್ಚು ಕಾಣುವುದು ಭಾರತದ ನೈರುತ್ಯ ಭಾಗದಲ್ಲಿ ಇವುಗಳ ದೇಹದ ಮೇಲೆ ಸಾಕಷ್ಟು ಬಿಳಿಯ ಪಟ್ಟಿಗಳು ಇರುವುದು ಕಂಡು ಬರುತ್ತದೆ.
ಇದನ್ನೂ ಓದಿ:ಕೋಳಿ ಮುಂಜಾನೆ ಯಾಕೆ ಕೂಗುತ್ತದೆ..? ನಿಮಗೆ ಗೊತ್ತಾ ಈ ಅಚ್ಚರಿ ವಿಚಾರಗಳು..?
ಎರಡನೇ ಮಾದರಿಯ ಅಂದ್ರೆ ಉತ್ತರದ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಾಣ ಸಿಗುವುದು ಭಾರತ, ಪೂರ್ವ ಪಾಕಿಸ್ತಾನ, ಚೀನಾ ಮತ್ತು ಥೈಲ್ಯಾಂಡ್​ನಲ್ಲಿ ಕಾಣಸಿಗುತ್ತವೆ ಇವುಗಳ ದೇಹದ ಮೇಲೆ 5 ರಿಂದ 70 ರಷ್ಟು ಬಿಳಿಯ ಪಟ್ಟಿಗಳು ಇರುವುದನ್ನು ನಾವು ಕಾಣಬಹುದು. ಇನ್ನು ಸುಂದಾ ಕಾಳಿಂಗ ಸರ್ಪವೂ ಕೂಡ ತನ್ನ ದೇಹದ ಮೇಲೆ 70 ಬಿಳಿ ಪಟ್ಟಿಗಳನ್ನು ಹೊಂದಿರುತ್ತವೆ ಎಂದು ಸಂಶೋಧನೆಯಲ್ಲಿ ಬಯಲಾಗಿದೆ.
/newsfirstlive-kannada/media/post_attachments/wp-content/uploads/2024/11/TTD-NEW-RESOLUTION-2.jpg)
ಇನ್ನು ನಾಲ್ಕನೇ ಪ್ರಬೇಧ ಕಾಳಿಂಗ ಸರ್ಪವಾದ ಲುಜೊನಾ ಕಿಂಗ್ ಕೋಬ್ರಾದ ದೇಹದ ಮೇಲೆ ಯಾವುದೇ ಪಟ್ಟಿಗಳು ಇರುವುದಿಲ್ಲ ಎಂದು ಹೇಳಲಾಗಿದೆ. ಇವು ಹೆಚ್ಚು ಕಾಣ ಸಿಗುವುದು ಪಿಲಿಫೈನ್ಸ್​ನ ದಕ್ಷಿಣ ಭಾಗದಲ್ಲಿ ಎಂದು ಸಂಶೋಧನೆಯು ವರದಿ ಮಾಡಿದೆ. ಈ ಒಂದು ಸಂಶೋಧನೆಯನ್ನು ಭಾರತದ ಉತ್ತರ ಭಾಗದಲ್ಲಿ ಅಂದ್ರೆ ಹಿಮಾಲಯ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಅದರ ಜೊತೆಗೆ ಇಂಡೊನೇಷಿಯಾ ಮತ್ತು ಪಿಲಿಫೈನ್ಸ್​ನಲ್ಲಿ ನಡೆಸಲಾಗಿದೆ ಈ ಒಂದು ಸಂಶೋಧನೆಯಿಂದ 1836ರಲ್ಲಿ ಡ್ಯಾನಿಷ್​ನ ಪ್ರಾಣಿಶಾಸ್ತ್ರಜ್ಞ ಥಿಯೋಡರೆ ಎಡ್ವರ್ಡ್​ ಕಾಳಿಂಗ ಸರ್ಪದಲ್ಲಿ ವರ್ಗೀಕರಣಗಳಿಲ್ಲ ಎಂಬ ವಾದವೂ ಬಿದ್ದು ಹೋಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us