newsfirstkannada.com

Shocking news: ಶೂಟಿಂಗ್​ ವೇಳೆ ಕಿಂಗ್​ ಖಾನ್ ಶಾರುಖ್‌ಗೆ ಗಾಯ.. ತೀವ್ರ ರಕ್ತಸ್ರಾವದಿಂದ ವಿದೇಶದಲ್ಲಿ ಶಸ್ತ್ರಚಿಕಿತ್ಸೆ

Share :

04-07-2023

    ಜವಾನ್​ ಶೂಟಿಂಗ್​ ವೇಳೆ ಶಾರುಖ್ ಖಾನ್​​ ಮೂಗಿಗೆ ಗಾಯ

    ತೀವ್ರ ರಕ್ತಸ್ರಾವದಿಂದ ವೈದ್ಯರ ಮೊರೆ ಹೋದ ಶಾರುಖ್​ ಖಾನ್​

    ಅಟ್ಲಿ ಜೊತೆಗೆ ಜವಾನ್​ ಸಿನಿಮಾದ ಶೂಟಿಂಗ್​ ವೇಳೆ ಅವಾಂತರ

ಕಿಂಗ್​​ ಖಾನ್​ ಶಾರುಖ್​ ಖಾನ್​ ಬ್ಲಾಕ್​​ಬಸ್ಟರ್​ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಅದರಂತೆಯೇ ಈ ವರ್ಷ ಬಿಡುಗಡೆಗೊಂಡ ‘ಪಠಾಣ್​’ ಸಿನಿಮಾ 100 ಕೋಟಿ ಬಾಚಿಕೊಂಡಿದೆ. ಇದೀಗ ಮತ್ತೊಂದು ಬ್ಲಾಕ್​ಬಸ್ಟರ್​ ಸಿನಿಮಾ ನೀಡಲು ಕಿಂಗ್​​ ಖಾನ್​ ಮುಂದಾಗಿದ್ದು, ‘ಜವಾನ್​’ ಆಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಆದರೆ ಈ ನಡುವೆ ಶೂಟಿಂಗ್​ ಸೆಟ್​ನಲ್ಲಿ ಆದ ಅಪಘಾತದಿಂದ ಶಾರುಖ್​​ ಖಾನ್​ ವಿದೇಶದಲ್ಲೇ ಶಸ್ತ್ರ ಚಿಕಿತ್ಸೆಗೆ ಒಳಗಾದರು.

ಕಿಂಗ್​ ಖಾನ್​ಗೆ ಅಂಥದ್ದೇನಾಯ್ತು?

ಎಸ್​​ಆರ್​ಕೆ ಸದ್ಯ ಖ್ಯಾತ ನಿರ್ದೇಶಕ ಅಟ್ಲಿ ಜೊತೆಗೆ ಕೈ ಜೋಡಿಸಿಕೊಂಡಿದ್ದಾರೆ. ಜವಾನ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಶೂಟಿಂಗ್​ ಸೆಟ್​ನಲ್ಲಿ ಶಾರುಖ್​ ಖಾನ್​ಗೆ​ ಸಣ್ಣ ಅಪಘಾತವಾಗಿದ್ದು ಅದರ ಶಸ್ತ್ರ ಚಿಕಿತ್ಸೆಗಾಗಿ ಲಾಸ್​ ಏಂಜಲೀಸ್​ನಲ್ಲಿ ಚಿಕಿತ್ಸೆ ಒಳಗಾಗಬೇಕಾಯ್ತು.

ಶಾರುಖ್​ ಮೂಗಿಗೆ ಗಾಯ

ಲಾಸ್​ ಏಂಜಲೀಸ್​ನಲ್ಲಿ ಶೂಟಿಂಗ್​ ನಡೆಸುವ ವೇಳೆ ಶಾರುಖ್​ ಖಾನ್​ ಮೂಗಿಗೆ ಗಾಯವಾಗಿದೆ. ಈ ವೇಳೆ ತೀವ್ರ ರಕ್ತಸ್ರಾವವಾಗಿದೆ. ಆದರೆ ರಕ್ತ ನಿಲ್ಲದ ಹೊರತು ವೈದ್ಯರು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದರ ಜೊತೆಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಅದರಂತೆಯೇ ಕಿಂಗ್​ ಖಾನ್​ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಭಾರತಕ್ಕೆ ಮರಳಿದ್ದಾರೆ. ಮನೆಯಲ್ಲಿಯೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

 ​ ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Shocking news: ಶೂಟಿಂಗ್​ ವೇಳೆ ಕಿಂಗ್​ ಖಾನ್ ಶಾರುಖ್‌ಗೆ ಗಾಯ.. ತೀವ್ರ ರಕ್ತಸ್ರಾವದಿಂದ ವಿದೇಶದಲ್ಲಿ ಶಸ್ತ್ರಚಿಕಿತ್ಸೆ

https://newsfirstlive.com/wp-content/uploads/2023/07/Sharukh-Khan.jpg

Load More