newsfirstkannada.com

500ನೇ ಅಂತರಾಷ್ಟ್ರೀಯ ಪಂದ್ಯ ಆಡಲಿದ್ದಾರೆ ಕಿಂಗ್​ ಕೊಹ್ಲಿ.. 76ನೇ ಶತಕ ಸಿಡಿಸಲಿದ್ದಾರಾ ವಿರಾಟ್​​?

Share :

18-07-2023

  500ನೇ ಅಂತರಾಷ್ಟ್ರೀಯ ಪಂದ್ಯ ಆಡಲು ಕಿಂಗ್ ಕೊಹ್ಲಿ ರೆಡಿ..!

  ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡಿಯುತ್ತಾರಾ ಕೊಹ್ಲಿ..?

  ದಿ ಗ್ರೇಟ್​​ ಸಚಿನ್​​​​-ಧೋನಿ ಸಾಲಿಗೆ ಸೇರಲಿರುವ ಕಿಂಗ್ ಕೊಹ್ಲಿ..!

ಟ್ರಿನಿಡಾಡ್​ ಟೆಸ್ಟ್​​​​. ಸರಣಿ ಗೆಲುವಿನ ದೃಷ್ಟಿಯಿಂದ ಈ ಪಂದ್ಯ ಟೀಮ್ ಇಂಡಿಯಾಗೆ ತುಂಬಾನೇ ಇಂಪಾರ್ಟೆಂಟ್​​​​. ಸರಣಿಯಲ್ಲಿ 1-0 ಮುನ್ನಡೆಯಲ್ಲಿರೋ ಭಾರತಕ್ಕೆ ಈ ಪಂದ್ಯ ಎಷ್ಟು ಮುಖ್ಯನೋ, ರನ್​ ರಾಕ್ಷಸ ವಿರಾಟ್ ಕೊಹ್ಲಿಗೂ ಅದಕ್ಕಿಂತ ಮಹತ್ವವೆನಿಸಿದೆ. ಯಾಕಂದ್ರೆ ಟ್ರಿನಿಡಾಡ್​ ಟೆಸ್ಟ್​, ಕೊಹ್ಲಿ ಪಾಲಿಗೆ ಬರೀ ಪಂದ್ಯ ಆಗಿರಲ್ಲ. ಅದೊಂದು ವೃತ್ತಿಜೀವನದ ರಿಮಾರ್ಕೆಬಲ್ ಇನ್ನಿಂಗ್ಸ್​​​ ಅನ್ನಿಸಿಕೊಳ್ಳಲಿದೆ.

ಟ್ರಿನಿಡಾಡ್​ ಟೆಸ್ಟ್​​​ ವಿಶ್ವಸಾಮ್ರಾಟನಿಗೆ ವೆರಿ ಸ್ಪೆಷಲ್​​

ಜುಲೈ 20. ಅಂದ್ರೆ ಭಾರತ-ವೆಸ್ಟ್​ಇಂಡೀಸ್ ನಡುವಿನ 2ನೇ ಟೆಸ್ಟ್​ ಆರಂಭಗೊಳ್ಳುವ ದಿನ. ಈ ದಿನ ಮಾಡ್ರನ್​ ಕ್ರಿಕೆಟ್ ದೊರೆ ಅನ್ನಿಸಿಕೊಂಡ ವಿರಾಟ್ ಕೊಹ್ಲಿ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಅಂದು ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ಸಾಕು, ಹೊಸ ಭಾಷ್ಯ ರಚನೆಯಾಗಲಿದೆ. ಇಡೀ ಕ್ರಿಕೆಟ್​ ಜಗತ್ತು ಅಂದು ಕೊಹ್ಲಿ ಜಪ ಮಾಡಲಿದೆ. ಯಾಕಂದ್ರೆ ಅಂದು ರನ್ ಮಷೀನ್ ಆಡ್ತಿರೋದು ಸಾಮಾನ್ಯ ಪಂದ್ಯವಲ್ಲ, ಅದು 500ನೇ ಅಂತರಾಷ್ಟ್ರೀಯ ಪಂದ್ಯ ಆಗಿರಲಿದೆ.

ಹೌದು, ಬರೀ ಕೊಹ್ಲಿಯಷ್ಟೇ ಅಲ್ಲ, ಅಭಿಮಾನಿಗಳ ಭಕ್ತ ವರ್ಗ ಕೂಡ ಆ ಕ್ಷಣವನ್ನ ಕಣ್ತುಂಬಿಕೊಳ್ಳಲು ಬಲು ಜತನದಿಂದ ಕಾಯ್ತಿದ್ದಾರೆ. ವಿರಾಟ್ ಮೂರು ಮಾದರಿ ಕ್ರಿಕೆಟ್​ನಲ್ಲಿ ಈವರೆಗೆ ಒಟ್ಟು 499 ಪಂದ್ಯಗಳನ್ನ ಆಡಿದ್ದಾರೆ. ವಿಂಡೀಸ್ ವಿರುದ್ಧ 2ನೇ ಟೆಸ್ಟ್​​ನಲ್ಲಿ ಕಣಕ್ಕಿಳಿದು ಬಿಟ್ರೆ ಕೊಹ್ಲಿ ಪಾಲಿಗೆ ಅದು 500ನೇ ಅಂತರಾಷ್ಟ್ರೀಯ ಪಂದ್ಯವಾಗಿರಲಿದೆ. ಜೊತೆಗೆ ಇದು ಭಾರತ-ವಿಂಡೀಸ್ ನಡುವಿನ 100ನೇ ಟೆಸ್ಟ್​ ಕೂಡ. ಈ ಎರಡು ಕಾರಣಕ್ಕಾಗಿ ಟ್ರಿನಿಡಾಡ್​ ಟೆಸ್ಟ್​​, ಸೆಂಚುರಿ ಸ್ಪೆಷಲಿಸ್ಟ್ ಕೊಹ್ಲಿಗೆ ವೆರಿ ವೆರಿ ಸ್ಪೆಷಲ್​ ಅನ್ನಿಸಿದೆ.

ದಿ ಗ್ರೇಟ್​​ ಸಚಿನ್​​​​-ಧೋನಿ ಸಾಲಿಗೆ ಕಿಂಗ್ ಕೊಹ್ಲಿ..!

ಕಿಂಗ್ ಕೊಹ್ಲಿ ಮನೋಜ್ಞ ಆಟಕ್ಕೆ ಉಡೀಸ್ ದಾಖಲೆಗಳಿಗೆ ಲೆಕ್ಕವಿಲ್ಲ. ಈ ದಾಖಲೆಗಳ ಒಡೆಯ ಈಗ ಕ್ರಿಕೆಟ್ ದೇವರು ಸಚಿನ್​ ತೆಂಡುಲ್ಕರ್​ ಮತ್ತು ಎಂಎಸ್​ ಧೋನಿ ಸಾಲಿಗೆ ಸೇರುವ ಸಮಯ ಬಂದಿದೆ. ವಿಂಡೀಸ್ ಎದುರು 2ನೇ ಟೆಸ್ಟ್ ಆಡಿಬಿಟ್ರೆ ಭಾರತ ಪರ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ 4ನೇ ಹಾಗೂ ವಿಶ್ವದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಭಾರತ ಪರ 500* ಪಂದ್ಯ ಆಡಿದವರಿವರು
ಸಚಿನ್​​​ ತೆಂಡೂಲ್ಕರ್​ – 668
ಎಂಎಸ್ ಧೋನಿ – 538
ರಾಹುಲ್​ ದ್ರಾವಿಡ್​ – 509
ವಿರಾಟ್ ಕೊಹ್ಲಿ – 499

ಮೂರು ಮಾದರಿಯಲ್ಲಿ ಒಟ್ಟು 668 ಅಂತರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್​​ ಅಗ್ರಸ್ಥಾನದಲ್ಲಿದ್ದಾರೆ. ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ 538 ಪಂದ್ಯ ಆಡಿದ್ದು 2ನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಹಾಲಿ ಹೆಡ್​​ಕೋಚ್​​​ ರಾಹುಲ್​ ದ್ರಾವಿಡ್​​​ 509 ಪಂದ್ಯವನ್ನಾಡಿ ಧೋನಿ ನಂತರದ ಸ್ಥಾನದಲ್ಲಿದ್ರೆ, 499 ಪಂದ್ಯ ಆಡಿರುವ ವಿರಾಟ್ ಕೊಹ್ಲಿ 4ನೇ ಸ್ಥಾನ ಸಂಪಾದಿಸಿದ್ದಾರೆ.

ಸ್ಪೆಷಲ್ ಪಂದ್ಯದಲ್ಲಿ ಮೂಡಿ ಬರುತ್ತಾ 76ನೇ ಶತಕ..!

ವಿರಾಟ್ ಕೊಹ್ಲಿಗೆ ಟ್ರಿನಿಡಾಡ್ ಟೆಸ್ಟ್​​​ 500ನೇ ಪಂದ್ಯ ಆಗಿರೋದ್ರಿಂದ ಭಾರೀ ನಿರೀಕ್ಷೆಗಳು ಗರಿಗೆದರಿವೆ. ಯಾಕಂದ್ರೆ ವಿಂಡೀಸ್ ಎದುರಿನ ಮೊದಲ ಟೆಸ್ಟ್​​ನಲ್ಲಿ ವಿರಾಟ್ ರನ್ ಭರಾಟೆ ನಡೆಸಿದ್ರು. ಅತ್ಯಾಮೂಲ್ಯ 76 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಸೆಂಚುರಿ ಸನಿಹದಲ್ಲಿ ಎಡವಿದ್ದ ರನ್​ ಮಷೀನ್​​ ತ್ರಿಬಲ್​ ಡಿಜಿಟ್​ ದಾಟಲು ಹಪಾಹಪಿಸ್ತಿದ್ದಾರೆ. ಹೀಗಾಗಿ ಟ್ರಿನಿಡಾಡ್​​​​ ಟೆಸ್ಟ್​​ನಲ್ಲಿ ಕಿಂಗ್ ಕೊಹ್ಲಿ ಸೆಂಚುರಿ ಹೊಡೆಯುವ ನಿರೀಕ್ಷೆ ಹೆಚ್ಚಿದೆ. ಹಾಗೇನಾದ್ರು ಆಗಿಬಿಟ್ರೆ ಸ್ಪೆಷಲ್​​​​ ಪಂದ್ಯದಲ್ಲಿ 76ನೇ ಶತಕ ದಾಖಲಾಗಲಿದೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡಿತಾರಾ ಕೊಹ್ಲಿ..?

ಟ್ರಿನಿಡಾಡ್​ ಪಂದ್ಯದಲ್ಲಿ ವಿಶ್ವಸಾಮ್ರಾಟನಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಸುವರ್ಣ ಅವಕಾಶವಿದೆ. ಅದೇನಂದ್ರೆ ಟೆಸ್ಟ್​​ನಲ್ಲಿ 29ನೇ ಶತಕದ ಜೊತೆ ವಿದೇಶಿ ನೆಲದಲ್ಲಿ 4 ವರ್ಷಗಳ ಬಳಿಕ ಶತಕ ಸಿಡಿಸಿದಂತಾಗಲಿದೆ. ಕೊಹ್ಲಿ 2019 ರಲ್ಲಿ ಆಸೀಸ್ ವಿರುದ್ಧ ಏಷ್ಯದಾಚೆಗೆ ಕೊನೆ ಬಾರಿ ಶತಕ ಹೊಡೆದಿದ್ರು. ವಿಂಡೀಸ್ ಎದುರಿನ 2ನೇ ಟೆಸ್ಟ್​​ನಲ್ಲಿ ಮೂರಂಕಿ ದಾಟಿದ್ರೆ ಸುದೀರ್ಘ ವಿದೇಶಿ ಸೆಂಚುರಿ ಬರ ಕೊನೆಗೊಳ್ಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

500ನೇ ಅಂತರಾಷ್ಟ್ರೀಯ ಪಂದ್ಯ ಆಡಲಿದ್ದಾರೆ ಕಿಂಗ್​ ಕೊಹ್ಲಿ.. 76ನೇ ಶತಕ ಸಿಡಿಸಲಿದ್ದಾರಾ ವಿರಾಟ್​​?

https://newsfirstlive.com/wp-content/uploads/2023/07/Kohli-2.jpg

Load More