newsfirstkannada.com

ಚಿನ್ನಸ್ವಾಮಿಯಲ್ಲೇ ಸಿಡಿಯುತ್ತಾ ಕೊಹ್ಲಿ 50ನೇ ಶತಕ? ಖುಷಿ ಮಧ್ಯೆ ಅಭಿಮಾನಿಗಳಿಗೆ ಆತಂಕ; ಕಾರಣವೇನು?

Share :

12-11-2023

    ವಿರಾಟ್​ ಆರ್ಭಟ ನೋಡಲು ಕಾಯ್ತಿದ್ದಾರೆ ಕ್ರಿಕೆಟ್‌ ಅಭಿಮಾನಿಗಳು

    ಇವತ್ತು ಕಿಂಗ್ ಕೊಹ್ಲಿ​ ಆಟದ ಮೇಲೆ ಅಭಿಮಾನಿಗಳ ಬೆಟ್ಟದಷ್ಟು ನಿರೀಕ್ಷೆ

    ಚಿನ್ನಸ್ವಾಮಿಯಲ್ಲೇ ಸಿಡಿಯುತ್ತಾ ವಿರಾಟ್‌ ಕೊಹ್ಲಿ 50ನೇ ODI ಶತಕ..?

ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್​ ವೀರಾವೇಶ ನೋಡೋಕೆ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ವಿರಾಟ ಘರ್ಜನೆ ಕಣ್ತುಂಬಿಕೊಳ್ಳಬೇಕು. ಶತಕದ ಅರ್ಧಶತಕ ಕನಸು ಕಾಣ್ತಿದ್ದಾರೆ. ಆದ್ರೆ, ಇದು ನಿಜವಾಗುತ್ತಾ..? ಈ ಬಗ್ಗೆ ನಿಜಕ್ಕೂ ಆತಂಕ ಇದೆ. ಅದ್ಯಾಕೆ ಬನ್ನಿ ನೋಡೋಣ.

ವಿರಾಟ್​ ಕೊಹ್ಲಿ ಟೀಮ್ ಇಂಡಿಯಾದ ಒನ್​ ಆ್ಯಂಡ್ ಒನ್ಲಿ ಮಾಸ್ಟರ್​ ಪೀಸ್‌. ಸದ್ಯ ವಿಶ್ವಕಪ್​ನಲ್ಲಿ ಅಬ್ಬರಿಸಿ ಬೊಬ್ಬೆರೆಯುತ್ತಿರುವ ಕಿಂಗ್ ಕೊಹ್ಲಿ, ರನ್​ಗಳ ಬೋರ್ಗರೆತವನ್ನೇ ಸೃಷ್ಟಿಸ್ತಿದ್ದಾರೆ. ಈ ಚೇಸಿಂಗ್ ಮಾಸ್ಟರ್​ನ ಮಾಸ್ಟರ್​ ಕ್ಲಾಸ್ ಆಟವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅಂತೂ ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ. ಕಿಂಗ್ ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿನ್ನಸ್ವಾಮಿಯ ಚಿನ್ನ.. ಅಭಿಮಾನಿಗಳ ನೆಚ್ಚಿನ ಬಂಟ ವಿರಾಟ್ ಕೊಹ್ಲಿ. ಐಪಿಎಲ್​ ಬಳಿಕ ಫಸ್ಟ್​ ಟೈಮ್ ಸೆಕೆಂಡ್ ಹೋಮ್​ಗ್ರೌಂಡ್​ನಲ್ಲಿ ಪ್ಯಾಡ್​ ಕಟ್ತಿದ್ದಾರೆ. ಹೀಗಾಗಿ ವಿರಾಟ್​ ಅಬ್ಬರ ನೋಡಿದ್ರೆ, ಸಾಕು ಅಂತಾ ಅಭಿಮಾನಿ ದೇವರುಗಳು ಕಾಯ್ತಿದ್ದಾರೆ. ಚಿನ್ನಸ್ವಾಮಿಯಲ್ಲಿ ಚಿನ್ನದಂತ ಇನ್ನಿಂಗ್ಸ್​ ನೋಡುವ ಖುಷಿಯಲ್ಲಿದ್ದಾರೆ.

ಚಿನ್ನಸ್ವಾಮಿಯಲ್ಲಿ ಸಿಡಿಯುತ್ತಾ 50ನೇ ಏಕದಿನ ಶತಕ?
ವಿರಾಟ್​ ಮೇಲೆ ಅಭಿಮಾನಿಗಳ ಬೆಟ್ಟದಷ್ಟು ನಿರೀಕ್ಷೆ..!

ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಮೋಘ ಫಾರ್ಮ್​ನಲ್ಲಿರುವ ವಿರಾಟ್​, ಬರೋಬ್ಬರಿ 108ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೀತಿದ್ದಾರೆ. ಕ್ರಿಕೆಟ್​ ದೇವರು ಸಚಿನ್​ ತೆಂಡುಲ್ಕರ್​ರ 49 ಸೆಂಚುರಿಗಳ ದಾಖಲೆಯನ್ನೂ ಸರಿಗಟ್ಟಿದ್ದಾಗಿದೆ. ಈಗ ಗರಿಷ್ಠ ಶತಕ ದಾಖಲೆಯನ್ನ ಚಿನ್ನಸ್ವಾಮಿಯಲ್ಲೇ ಸೃಷ್ಟಿಸಬೇಕು ಆಸೆ ಅಭಿಮಾನಿಗಳದ್ದಾಗಿದೆ. ಕಿಂಗ್ ಕೊಹ್ಲಿಯ ಶತಕದ ಸಂಭ್ರಮ ಸೆಲಬ್ರೇಟ್ ಮಾಡೋಕೆ ಹುಮ್ಮಸ್ಸಿನಲ್ಲಿದ್ದಾರೆ.

ಖುಷಿಯ ನಡುವೆ ಅಭಿಮಾನಿಗಳಿಗೆ ಇದೆ ಆತಂಕ..!

ಸದ್ಯ ಸಾಲಿಡ್ ಫಾರ್ಮ್​ನಲ್ಲಿರುವ ವಿರಾಟ್ ಬ್ಯಾಟಿಂಗ್ ಜೊತೆ ಚಿನ್ನಸ್ವಾಮಿಯಲ್ಲಿ ಶತಕ ಸಿಡಿಸ್ತಾರೆ ಎಂಬ ನಿರೀಕ್ಷೆ ಸಹಜವಾಗೇ ಫ್ಯಾನ್ಸ್​ ಮನದ ಸಂತಸಕ್ಕೆ ಕಾರಣವಾಗಿದೆ. ಆದ್ರೆ, ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್​ ಮಾತ್ರ ಆತಂಕಕ್ಕೆ ಸಿಲುಕಿದೆ.

ಏಕದಿನ ಫಾರ್ಮೆಟ್​ನಲ್ಲಿ ನಡೆದಿದ್ದ ಕೊಹ್ಲಿ ಆರ್ಭಟ

ವಿರಾಟ್​ ಕೊಹ್ಲಿ.. ಏಕದಿನ ಫಾರ್ಮೆಟ್​ನ ಗ್ರೇಟೆಸ್ಟ್​ ಬ್ಯಾಟರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಆದ್ರೆ, ಇದೇ ಗ್ರೇಟೆಸ್ಟ್​ ಬ್ಯಾಟ್ಸ್​ಮನ್, ಚಿನ್ನಸ್ವಾಮಿಯಲ್ಲಿ ರನ್​ ಬ್ಯಾಟಲ್​ನಲ್ಲಿ ರನ್​​​ಗಳಿಸಲು ಪರದಾಡಿದ್ದಾರೆ. ಇನ್​​ಫ್ಯಾಕ್ಟ್ ಚಿನ್ನಸ್ವಾಮಿ ​​ಕೊಹ್ಲಿ ಪಾಲಿನ ಸೆಕೆಂಡ್ ಹೌಮ್​ ಗ್ರೌಂಡ್​ ಆಗಿದ್ರೂ, ಏಕದಿನ ಫಾರ್ಮೆಟ್​ನಲ್ಲಿ ಅಟ್ಟರ್​ ಪ್ಲಾಫ್ ಪರ್ಫಾಮೆನ್ಸ್ ನೀಡಿದ್ದಾರೆ. ಇದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ..

ಚಿನ್ನಸ್ವಾಮಿಯಲ್ಲಿ ಕೊಹ್ಲಿ!

ಪಂದ್ಯ 06
ರನ್ 152
ಸರಾಸರಿ 25
ಅರ್ಧಶತಕ 01

ದಾಖಲೆ ಏನೇ ಹೇಳಿದ್ರೂ ನಡೆಯಲಿದೆ ಕೊಹ್ಲಿ ಅಬ್ಬರ!

ಈ ಹಿಂದಿನ ದಾಖಲೆಗಳು ಏನೇ ಹೇಳಿದ್ರೂ, ಇಂದು ಚಿನ್ನಸ್ವಾಮಿಯಲ್ಲಿ ವಿರಾಟ್​ ಕೊಹ್ಲಿ, ವಿರಾಟ ದರ್ಶನ ಕನ್ಫರ್ಮ್​.. ಅಭಿಮಾನಿಗಳಿಗಾಗಿ ಸ್ಪೆಷಲ್​ ಗ್ರೌಂಡ್​ನಲ್ಲಿ ಬ್ಯಾಟಿಂಗ್ ಟ್ರೀಟ್ ನೀಡೋದು ಖಾಯಂ. ಯಾಕಂದ್ರೆ, ತನ್ನನ್ನ ಅತಿಯಾಗಿ ಪ್ರೀತಿಸೋ ಬೆಂಗಳೂರಿನ ಫ್ಯಾನ್ಸ್​ ಎದುರು ಶ್ರೇಷ್ಠ ಇನ್ನಿಂಗ್ಸ್​ ಆಡಬೇಕೆಂಬ ಬಯಕೆ ಕೊಹ್ಲಿಯದ್ದಾಗಿದೆ. ಇನ್​ಫ್ಯಾಕ್ಟ್​- ಸದ್ಯ ಶ್ರೇಷ್ಠ ಲಯದಲ್ಲಿರುವ ವಿರಾಟ್​ಗೆ ಇದು ಜಸ್ಟ್​ ಮ್ಯಾಟರ್ ಆಫ್ ದಿ ಟೈಮ್ ಅಷ್ಟೇ.

ಅದೇನೇ ಆಗಲಿ..! ಚಿನ್ನಸ್ವಾಮಿಯಲ್ಲಿ ವಿರಾಟ್​​ ಕೊಹ್ಲಿಯ ಹಿಂದಿನ ರೆಕಾರ್ಡ್ಸ್​ ಏನೇ ಹೇಳೀದ್ರೂ, ಸದ್ಯ ಶ್ರೇಷ್ಠ ಲಯದಲ್ಲಿರುವ ವಿರಾಟ್​, ಫ್ಯಾನ್ಸ್​ಗೆ ಸಖತ್ ಟ್ರೀಟ್ ನೀಡಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚಿನ್ನಸ್ವಾಮಿಯಲ್ಲೇ ಸಿಡಿಯುತ್ತಾ ಕೊಹ್ಲಿ 50ನೇ ಶತಕ? ಖುಷಿ ಮಧ್ಯೆ ಅಭಿಮಾನಿಗಳಿಗೆ ಆತಂಕ; ಕಾರಣವೇನು?

https://newsfirstlive.com/wp-content/uploads/2023/11/Virat-Kohli-2.jpg

Load More