newsfirstkannada.com

ಮ್ಯಾನೇಜ್ಮೆಂಟ್​ನಿಂದ ಕೆಟ್ಟ ನಿರ್ಧಾರ.. ಈ 5 ಕಾರಣಗಳಿಂದಾಗಿ ಕೊಹ್ಲಿಗೆ ಭಾರೀ ಮುಖಭಂಗ..!

Share :

Published June 14, 2024 at 9:58am

  T20 ವಿಶ್ವಕಪ್​ನಲ್ಲಿ ಕಿಂಗ್​​​ ಕೊಹ್ಲಿ ಆರ್ಭಟ ಮಾಯ

  ರನ್ ಗಳಿಸಲು ಹೆಣಗಾಟ.. ಒಂದಂಕಿ ದಾಟದೆ ನಿರಾಸೆ

  3 ಪಂದ್ಯಗಳಿಂದ ಕಲೆ ಹಾಕಿದ್ದು ಬರೀ 5 ರನ್​

17ನೇ ಐಪಿಎಲ್​ನಲ್ಲಿ ಕಿಂಗ್ ಕೊಹ್ಲಿ ಸೂಪರ್​​​ ಡೂಪರ್​ ಪರ್ಫಾಮೆನ್ಸ್​ ನೀಡಿದ್ರು. ಆದ್ರೆ ಟಿ20 ವಿಶ್ವಕಪ್​​​ ಯುದ್ಧಭೂಮಿಯಲ್ಲಿ ರನ್ ಗಳಿಸಲು ಹೆಣಗಾಡ್ತಿದ್ದಾರೆ. ವಿರಾಟ್​​​ ಬ್ಯಾಡ್​​​ಫಾರ್ಮ್​ ಕಂಡು ಫ್ಯಾನ್ಸ್​ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಅಷ್ಟಕ್ಕೂ ವಿರಾಟ್​​​​​​​​​​​​​​​​​​​, ವಿಶ್ವಕಪ್​ ಅಖಾಡದಲ್ಲಿ ಫೇಲಾಗ್ತಿರೋದ್ಯಾಕೆ..?

ಐರ್ಲೆಂಡ್​ ವಿರುದ್ಧ 1 ರನ್​
1, 4, ಸೊನ್ನೆ.. ಕ್ರಿಕೆಟ್ ಅನಭಿಷಕ್ತ ದೊರೆ, ಮಾಡ್ರನ್​ ಕ್ರಿಕೆಟ್​ನ ಲೆಜೆಂಡ್​ ಅಂತೆಲ್ಲಾ ಕರೆಸಿಕೊಳ್ಳುವ ಕಿಂಗ್ ಕೊಹ್ಲಿಯ ಟಿ20 ವಿಶ್ವಕಪ್​ನ ಸದ್ಯದ ರಿಪೋರ್ಟ್​ ಇದು. ಇಲ್ಲಿಯತನಕ ಕೊಹ್ಲಿ 3 ಪಂದ್ಯಗಳನ್ನಾಡಿದ್ದಾರೆ. ಒಂದಂಕಿ ಗಡಿ ದಾಟಲು ಪರದಾಡ್ತಿದ್ದು, ಒಟ್ಟಾರೆ ಗಳಿಸಿದ ಸ್ಕೋರ್​ ಕೇವಲ ಐದು. ಕಳೆದ ಬಾರಿ ಟಾಪ್​ ಸ್ಕೋರರ್​ ಕೊಹ್ಲಿ​​, ಈ ಸಲ ರನ್ ಗಳಿಸಲು ಹೆಣಗಾಡ್ತಿರೋದ್ಯಾಕೆ?

ಇದನ್ನೂ ಓದಿ:ದರ್ಶನ್​​ನಿಂದಾಗಿ ಸೈಡ್​​ ವಾಲ್​.. ಶಾಮಿಯಾನ ಹಿಂದಿನ ಅಸಲಿ ರಹಸ್ಯ ರಿವೀಲ್..!

ರೀಸನ್ ನಂ.1: ಏಕಾಏಕಿ ಆರಂಭಿಕನಾಗಿ ಕಣಕ್ಕೆ..!
ಕೊಹ್ಲಿಯ ಈ ವೈಪಲ್ಯಕ್ಕೆ ಮೊದಲ ಕಾರಣವೇ ಆರಂಭಿಕನಾಗಿ ಆಡ್ತಿರೋದು. ಕೊಹ್ಲಿ ನಂ.3 ಸ್ಲಾಟ್​ನಲ್ಲಿ ರನ್ ಸರಮಾಲೆ ಕಟ್ಟಿದ್ದಾರೆ. ಇದು ಗೊತ್ತಿದ್ರೂ, ಏಕಧಮ್​ ವಿಶ್ವಕಪ್​​ನಲ್ಲಿ ಮಿಡಲ್ ಆರ್ಡರ್​ನಿಂದ ಆರಂಭಿಕರಾಗಿ ಬಡ್ತಿ ನೀಡಿದ್ರು. ಟೀಮ್​​ ಮ್ಯಾನೇಜ್​​​​ಮೆಂಟ್​ ಮಾಡಿದ ಮಹಾಪ್ರಮಾದ ಕೂಡ ಕೊಹ್ಲಿ ಬ್ಯಾಡ್​ಫಾರ್ಮ್​ಗೆ ಒಂದು ಕಾರಣ.

ರೀಸನ್ ನಂ.2: ತಡವಾಗಿ ಅಮೆರಿಕಾಗೆ ಪ್ರಯಾಣ
ಪೂರ್ವ ಸಿದ್ಧತೆ ದೃಷ್ಟಿಯಿಂದ ಬಹುತೇಕ ಆಟಗಾರರು ಒಂದು ವಾರ ಮೊದಲು ಅಮೆರಿಕಾಗೆ ಫ್ಲೈಟ್​ ಏರಿದ್ರು. ಆದ್ರೆ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ತಡವಾಗಿ ತಂಡ ಸೇರಿಕೊಂಡ್ರು. ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯವನ್ನ ಸಹ ಆಡಲಿಲ್ಲ. ನೇರವಾಗಿ ವಿಶ್ವಕಪ್​ ಅಖಾಡಕ್ಕೆ ಧುಮುಕಿದ್ರು. ಇದು ಕೂಡ ವ್ಯತಿರಿಕ್ತ ಪ್ರದರ್ಶನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಇನ್ನೂ ಮೂವರು ನಿಗೂಢ ನಾಪತ್ತೆ.. ಯಾರು ಅವರು..?

ರೀಸನ್ ನಂ.3: ತಾಳ್ಮೆ ಮಾಯ..ಅಗ್ರೆಸ್ಸಿವ್​​ ಅಪ್ರೋಚ್​​​..!
ಕೆಲ ವರ್ಷಗಳಿಂದ ಕೊಹ್ಲಿ ಸ್ಟ್ರೈಕ್​​ರೇಟ್​ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿತ್ತು. 2024ನೇ ಐಪಿಎಲ್​ನಲ್ಲಿ 150 ಪ್ಲಸ್ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿ ಎಲ್ಲರ ಬಾಯಿ ಮುಚ್ಚಿಸಿದ್ರು. ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಅದೇ ಅಗ್ರೆಸ್ಸಿವ್​ ಅಪ್ರೋಚ್ ಮೈಂಡ್​​ಸೆಟ್​​​ನಲ್ಲಿ ಆಡಲು ಮುಂದಾದ್ರು. ಟ್ರಿಕ್ಕಿ ಪಿಚ್​​​ನಲ್ಲಿ ತಾಳ್ಮೆಯ ಆಟವಾಡ್ಲಿಲ್ಲ. ಹೀಗಾಗಿ ಸುಲಭವಾಗಿ ವಿಕೆಟ್​ ಒಪ್ಪಿಸಿ ಟೀಕೆಗೆ ಗುರಿಯಾಗ್ತಿದ್ದಾರೆ.

ರೀಸನ್ ನಂ.4: ಅತಿಯಾದ ಆತ್ಮವಿಶ್ವಾಸ..!
ಕಿಂಗ್ ಕೊಹ್ಲಿ ವಿಶ್ವಕಪ್​​​​ ಟೂರ್ನಿಗೂ ಮುನ್ನ ಸಾಲಿಡ್​​ ಟಚ್​​​​ನಲ್ಲಿದ್ರು. ಐಪಿಎಲ್ ಸೇರಿದಂತೆ ದ್ವಿಪಕ್ಷೀಯ ಸರಣಿಗಳಲ್ಲಿ ಅಬ್ಬರಿಸಿ ಬೊಬ್ಬಿರಿದ್ರು. ಫಾರ್ಮ್​ನಲ್ಲಿರೋ ಆತ್ಮವಿಶ್ವಾಸದಲ್ಲಿ ವಿಶ್ವಕಪ್​​ಗೆ ಸರಿಯಾಗಿ ಸಿದ್ಧತೆ ನಡೆಸಲಿಲ್ಲ. ಈ ಅತಿಯಾದ ಆತ್ಮವಿಶ್ವಾಸ ಕೂಡ ರನ್​ ಮಷೀನ್​ಗೆ ಮುಳುವಾಗಿದೆ.

ರೀಸನ್ ನಂ.5: ಒತ್ತಡಕ್ಕೆ ಸಿಲುಕಿ ವೈಫಲ್ಯ
ಹೇಳಿ ಕೇಳಿ ಕಿಂಗ್ ಕೊಹ್ಲಿ ಓರ್ವ ಮ್ಯಾಚ್ ವಿನ್ನರ್​​​. ಪ್ರತಿ ಬಾರಿ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿರುತ್ತೆ. ಆ ನಿರೀಕ್ಷೆಯನ್ನ ವಿರಾಟ್ ಹುಸಿಗೊಳಿಸಿದ್ದೆ ಕಮ್ಮಿ. ಈ ಬಾರಿಯೂ ಅದೇ ಭರವಸೆ ಇಡಲಾಗಿತ್ತು. ಇದು ಸಹಜವಾಗಿ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದ್ದು, ಅಸಲಿ ಆಟವಾಡಲು ಸಾಧ್ಯವಾಗ್ತಿಲ್ಲ.

ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?

ಕಿಂಗ್ ಕೊಹ್ಲಿ ಓರ್ವ ಅಪ್ರತಿಮ ಆಟಗಾರ. ಬ್ಯಾಡ್​ಫಾರ್ಮ್​ನಿಂದ ಹೊರಬರುವ ಕೆಪಾಸಿಟಿ ಅವರಿಗಿದೆ. ತಮ್ಮ ಸುದೀರ್ಘ ಕರಿಯರ್​ನಲ್ಲಿ ಇಂತಹ ಹಲವು ಏಳು-ಬೀಳುಗಳನ್ನ ಕಂಡಿದ್ದಾರೆ. ಎಲ್ಲಾ ಬಾರಿಯೂ ಸಾಲಿಡ್​ ಕಮ್​ಬ್ಯಾಕ್​ ಮಾಡಿದ್ದಾರೆ. ಮಿಸ್ಟೇಕ್ಸ್​ ಮೇಲೆ ವರ್ಕೌಟ್​ ಮಾಡಿ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಕಿಂಗ್ ಕೊಹ್ಲಿಯ ಅಸಲಿ ಖದರ್​​​ ತೋರಿಸುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಮೃತದೇಹ ಬಿಸಾಡುವಾಗ ನಡೆಯಿತು ಯಡವಟ್ಟು.. ಪ್ಲಾನ್ ಉಲ್ಟಾ ಹೊಡೆದಿದ್ದೇ ಇಲ್ಲಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮ್ಯಾನೇಜ್ಮೆಂಟ್​ನಿಂದ ಕೆಟ್ಟ ನಿರ್ಧಾರ.. ಈ 5 ಕಾರಣಗಳಿಂದಾಗಿ ಕೊಹ್ಲಿಗೆ ಭಾರೀ ಮುಖಭಂಗ..!

https://newsfirstlive.com/wp-content/uploads/2024/06/VIRAT_KOHLI-12.jpg

Load More