newsfirstkannada.com

ಮೈದಾನದಲ್ಲಿ ಕೊಹ್ಲಿ ಮಾಡ್ತಿದ್ದ ಈ ಮ್ಯಾಜಿಕ್ ಮಾಯ.. ವಿರಾಟ್ ಅಭಿಮಾನಿಗಳಿಗೆ ಭಾರೀ ನಿರಾಸೆ.. ಏನದು..?

Share :

02-11-2023

    ಅಂದು ಟಾಪರ್​​​​.. ಇಂದು ಟಾಪ್​​​-5ನಲ್ಲಿಲ್ಲ ಪ್ಲೇಸ್​

    ಅಕ್ಟೋಬರ್​​​ 18, ಕಿಂಗ್ ಕೊಹ್ಲಿ ನಂ.1 ಫೀಲ್ಡರ್

    ನವೆಂಬರ್​​​​ 1 ಸೆಂಚುರಿ ಸರದಾರನಿಗೆ 6ನೇ ಸ್ಥಾನ

ಕಿಂಗ್​​ ಕೊಹ್ಲಿ ಅಂದ್ರೆ ಭರವಸೆ. ಬರೀ ಬ್ಯಾಟಿಂಗ್ ಅಷ್ಟೇ ಅಲ್ಲ, ಫೀಲ್ಡಿಂಗ್​​ನಲ್ಲೂ ಕೂಡ. ವಿಶ್ವಕಪ್​​​​​​​​​ನ ಬೆಸ್ಟ್​ ಫೀಲ್ಡರ್​ ಪಟ್ಟ ರನ್​​ ಮಷೀನ್​​​​ಗೆ ಒಲಿಯುತ್ತೆ ಅನ್ನೋ ಫ್ಯಾನ್ಸ್​ ನಿರೀಕ್ಷೆಯಾಗಿತ್ತು. ಬಟ್​​ ಫಸ್ಟ್​​​​​​​​ ಹಾಫ್​​ ಬಳಿಕ ಆ ಆಸೆ ಕಮರಿದೆ. ಆರಂಭದಲ್ಲಿ ಫೀಲ್ಡಿಂಗ್​​ನಲ್ಲಿ ಚಿರತೆಯಂತೆ ಹಾರಿದ್ದ ಕಿಂಗ್ ಕೊಹ್ಲಿ ಈಗ ಸೈಲೆಂಟಾಗಿದ್ದಾರೆ.

ಒನ್ಡೇ ವಿಶ್ವಕಪ್​​​..! ಬರೀ ರನ್​, ವಿಕೆಟ್​ಗಳ ಬ್ಯಾಟಲ್ ಅಲ್ಲ. ದಂಗು ಬಡಿಸುವ ಕ್ಯಾಚ್​ಗಳ ದಂಗಲ್ ಕೂಡ. ಎಸ್ಪೆಷಲಿ ಪ್ರಸಕ್ತ ಏಕದಿನ ವಿಶ್ವಕಪ್​ ಅಂತೂ ಹಿಂದೆಂದೂ ಕಾಣದ ಸ್ಟನ್ನಿಂಗ್​ ಕ್ಯಾಚ್​ಗಳಿಗೆ ಅಣಿಯಾಗಿದೆ. ಚಿರತೆಯಂತೆ ಹಾರಿ ಹಿಡಿಯುವ ಕ್ಯಾಚಸ್ ನೋಡುಗರನ್ನ ಸಾಕಷ್ಟು ಇಂಪ್ರೆಸ್ಸಿವ್​ ಮಾಡುತ್ತಿವೆ. ಅದ್ರಲ್ಲೂ ಕಿಂಗ್ ಕೊಹ್ಲಿಯಂತೂ ಫೀಲ್ಡಿಂಗ್​​​ನಲ್ಲಿ ನೆಕ್ಸ್ಟ್​​​​ಲೆವೆಲ್​​ ಬಿಡಿ.

ಅಕ್ಟೋಬರ್​ 18 ಅಂದ್ರೆ ಒನ್ಡೆ ವಿಶ್ವಕಪ್​ ಆರಂಭವಾಗಿ ಎರಡು ವಾರ ಕಳೆದಿತ್ತಷ್ಟೇ. ಕಿಂಗ್ ಕೊಹ್ಲಿ ನಂ.1 ಬೆಸ್ಟ್​​ ಫೀಲ್ಡರ್ ಆಗಿ ಹೊರಹೊಮ್ಮಿದ್ರು. ಐಸಿಸಿ ಪ್ರಕಟಿಸಿದ ಬೆಸ್ಟ್​​​​ ಫೀಲ್ಡರ್​ ಇಂಪ್ಯಾಕ್ಟ್​ ಲಿಸ್ಟ್​​ನಲ್ಲಿ ರನ್​ ಮಾಸ್ಟರ್ 22.30 ರೇಟಿಂಗ್ಸ್​​ ಪಾಯಿಂಟ್ಸ್​ ನೊಂದಿಗೆ ಫೀಲ್ಡಿಂಗ್​ ಕಿಂಗ್ ಅನ್ನಿಸಿಕೊಂಡಿದ್ರು. ಆದ್ರೀಗ ಕೊಹ್ಲಿ ಫೀಲ್ಡಿಂಗ್​​ನಲ್ಲಿ ಅದೇ ಚಮತ್ಕಾರ ಉಳಿಸಿಕೊಳ್ಳುವಲ್ಲಿ ಫೇಲಾಗಿದ್ದಾರೆ. ಅಕ್ಟೋಬರ್​​​ 18ಕ್ಕೆ ನಂ.1 ಫೀಲ್ಡರ್ ಅನ್ನಿಸಿಕೊಂಡಿದ್ದ ವಿರಾಟ್​​ಗೀಗ ಟಾಪ್​​​​-5 ಬೆಸ್ಟ್​ ಫೀಲ್ಡರ್​​ನಲ್ಲಿ ಸ್ಥಾನವೇ ಇಲ್ಲವಾಗಿದೆ. ಜಸ್ಟ್​ ಎರಡೇ ವಾರದಲ್ಲಿ ಕೊಹ್ಲಿ ದಿ ಬೆಸ್ಟ್​​ ಫೀಲ್ಡರ್ ಅನ್ನೋ ಪಟ್ಟವನ್ನು ಕಳೆದುಕೊಂಡು ನಿರಾಸೆ ಮೂಡಿಸಿದ್ದಾರೆ.

ಕೊಹ್ಲಿಗೆ ಮಿಸ್​​​​, ಜಡ್ಡುಗೆ ಟಾಪ್​​​​-5 ನಲ್ಲಿ ಪ್ಲೇಸ್​​
ಕಿವೀಸ್​​​-ಆಸೀಸ್​ ಆಟಗಾರರದ್ದೇ ದರ್ಬಾರ್​

ವರ್ಲ್ಡ್ ನಂ.1 ಬ್ಯಾಟ್ಸ್​​ಮನ್​​ ವಿರಾಟ್ ಕೊಹ್ಲಿಗೆ ಸದ್ಯ ವಿಶ್ವಕಪ್​​ನಲ್ಲಿ ನಂ.1 ಫೀಲ್ಡರ್​ ಪಟ್ಟ ಮಿಸ್ ಆಗಿರಬಹುದು. ಹಾಗಂತ ಬೇಸರ ಪಡಬೇಕಿಲ್ಲ. ಯಾಕಂದ್ರೆ ವಿರಾಟ್​​ಗೆ ಟಾಪರ್​​​​​​​​​​​​​​​​ ಪ್ಲೇಸ್​ ಇಲ್ಲವಾದರೂ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಟಾಪ್​​​-5 ನಲ್ಲಿ ಸ್ಥಾನ ಪಡೆದು ಕಮಾಲ್​ ಮಾಡಿದ್ದಾರೆ.

ವಿಶ್ವಕಪ್​​ನ ಟಾಪ್​​​-6 ಫೀಲ್ಡರ್ಸ್​

ಐಸಿಸಿ ಬಿಡುಗಡೆಗೊಳಿಸಿರುವ ನೂತನ ಫೀಲ್ಡರ್​​​ ಇಂಪ್ಯಾಕ್ಟ್​​ ಪ್ಲೇಯರ್​ ಲಿಸ್ಟ್​​ನಲ್ಲಿ ನ್ಯೂಜಿಲೆಂಡ್​​ನ ಮಿಚೆಲ್ ಸ್ಯಾಂಟ್ನರ್​ 43.28 ರೇಟಿಂಗ್ಸ್​​ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಡೇವಿಡ್​ ಮಿಲ್ಲರ್​ 41.19 ಹಾಗೂ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​​ 40.82 ರೇಟಿಂಗ್ಸ್​​​​​ನೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​​ನ ಲಿಯಾಮ್​ ಲೀವಿಂಗ್​ಸ್ಟೋನ್​ 34.77 ರೇಟಿಂಗ್ಸ್​​ನೊಂದಿಗೆ 4, ಟೀಮ್ ಇಂಡಿಯಾದ ರವೀಂದ್ರ ಜಡೇಜಾ 33.77 ರೇಟಿಂಗ್ಸ್​ ಸಂಪಾದಿಸಿ 5ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 33.46 ರೇಟಿಂಗ್ಸ್​​​​ ಹೊಂದಿ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಡೋಂಟ್​ವರಿ ಕೊಹ್ಲಿ ಮತ್ತೆ ಮಾಡ್ತಾರೆ ಮ್ಯಾಜಿಕ್​​​..!

ವೀಕ್ಷಕರೇ ಕಿಂಗ್ ಕೊಹ್ಲಿಗೆ ಎರಡೇ ವಾರದಲ್ಲಿ ನಂ.1 ಫೀಲ್ಡರ್​​ ಪಟ್ಟ ಮಿಸ್​ ಆಯ್ತು ಎಂದು ಬೇಸರಪಟ್ಟುಕೊಳ್ಳಬೇಡಿ. ಯಾಕಂದ್ರೆ ಕಾಂಪಿಟೇಷನ್​​​​​ ಅಂತ ಬಂದ್ರೆ ವಿರಾಟ್ ಒಂದು ಹೆಜ್ಜೆ ಮುಂದೆ ಇರ್ತಾರೆ. ಎಷ್ಟೇ ಕಷ್ಟ ಆದ್ರೂ ಸೈ ಕಮ್​​ಬ್ಯಾಕ್ ಮಾಡೋ ಜಾಯಮಾನ ಅವರದ್ದು. ಸೋ, ಇನ್ನು 3 ವಾರಗಳ ವಿಶ್ವಕಪ್​ ಟೂರ್ನಿ ಬಾಕಿ ಇದೆ. ಬೆಸ್ಟ್​​ ಫೀಲ್ಡರ್​​ ಇಂಪ್ಯಾಕ್ಟ್​ ಲಿಸ್ಟ್​​ನಲ್ಲಿ ಏನೂ ಬೇಕಾದ್ರೂ ಆಗಬಹುದು. ಕೊಹ್ಲಿ 6ನೇ ಸ್ಥಾನದಿಂದ ಮತ್ತೆ 1ನೇ ಸ್ಥಾನಕ್ಕೆ ಜಿಗಿದ್ರೂ ಆಶ್ಚರ್ಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮೈದಾನದಲ್ಲಿ ಕೊಹ್ಲಿ ಮಾಡ್ತಿದ್ದ ಈ ಮ್ಯಾಜಿಕ್ ಮಾಯ.. ವಿರಾಟ್ ಅಭಿಮಾನಿಗಳಿಗೆ ಭಾರೀ ನಿರಾಸೆ.. ಏನದು..?

https://newsfirstlive.com/wp-content/uploads/2023/11/VIRAT_KOHLI-10.jpg

Load More