newsfirstkannada.com

ಕಿಂಗ್ ಕೊಹ್ಲಿಗೆ ಈ ಸ್ಪಿನ್ನರ್ಸ್ ಕಂಟಕ.. ವಿಶ್ವಕಪ್​​ನಲ್ಲಿ ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಕಂಟಕ..!

Share :

14-09-2023

    ಲಂಕಾ ವಿರುದ್ಧ ಕೊಹ್ಲಿ ವಿಕ್ನೇಸ್ ಎಕ್ಸ್​ಪೋಸ್..!

    2021ರಿಂದ ಕೊಹ್ಲಿ ಔಟ್ ಆಗ್ತಿರೋದು ಹೇಗೆ ಗೊತ್ತಾ..?

    ರನ್ ಮಷಿನ್​ಗೆ ಅವರ ಕಂಡರೆ ಭಯನಾ..?

ವಿರಾಟ್​ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್​​ನ ರನ್ ಸಾಮ್ರಾಟ. ಈ ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿಗೆ ಈ ಬೌಲರ್​​​ಗಳೆಂದ್ರೆ ನಡುಕ. ವಿಕ್ನೇಸ್ ಎಕ್ಸ್​ಪೋಸ್ ಮಾಡಿರೋ ವಿರಾಟ್​, ಇದರಿಂದ ಎಚ್ಚೆತ್ತುಕೊಳ್ಳದಿದ್ರೆ ಟೀಮ್ ಇಂಡಿಯಾಗೆ ಸಂಕಷ್ಟ ತಪ್ಪಿದ್ದಿಲ್ಲ. ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​ನ ರನ್ ಸಾಮ್ರಾಟ.. ಈತನ ಅಪ್ರತಿಮ ಬ್ಯಾಟಿಂಗ್​ಗೆ ದಿಗ್ಗಜರ ದಾಖಲೆಗಳು ಚಿಂದಿ ಚಿಂದಿಯಾಗಿವೆ. ಕ್ಲಾಸ್ ಅಂಡ್ ಮಾಸ್ ಪರ್ಫಾಮೆನ್ಸ್​ಗೆ ವಿಲವಿಲ ಒದ್ದಾಡೋ ಬೌಲರ್​​ಗಳು, ವಿರಾಟ್​ ವಿಕೆಟ್ ಪಡೆಯೋದಕ್ಕೆ ಹರಸಾಹಸವನ್ನೇ ಪಡ್ತಾರೆ. ಕಿಂಗ್​ ಕೊಹ್ಲಿ ಕ್ರೀಸ್​​ಗೆ ಇಳಿದ್ರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತದೆ.

ಕೊಹ್ಲಿಯ ರನ್ ರೌದ್ರಾವತಾರಕ್ಕೆ ಎದುರಾಳಿಗಳು ಉಡೀಸ್ ಆಗಿ ಹೋಗ್ತಾರೆ. ಅಷ್ಟರಮಟ್ಟಿಗೆ ಆನ್​​ಫೀಲ್ಡ್​ನಲ್ಲಿ ಅಬ್ಬರಿಸಿ ಬೊಬ್ಬೆರೆಯುವ ವಿತಾಟ್​, ಒಂದಿಲ್ಲೊಂದು ದಾಖಲೆಗಳನ್ನ ಸೃಷ್ಟಿಸೋ ವೀರಾಧಿವೀರನಿಗೆ ಲೆಫ್ಟಿ ಪೇಸರ್​ಗಳ ವಿಕ್ನೇಸ್​ ಅನ್ನೋದು ಈಗಾಗಲೇ ಬಟಾಬಯಲಾಗಿದೆ. ಆದ್ರೀಗ ಇದೇ ಕೊಹ್ಲಿಗೆ ಲೆಫ್ಟಿ ಸ್ಪಿನ್ನರ್​​ಗಳ ಕೂಡ ಕಾಟ ತಪ್ಪಿಲ್ಲ.

ಲಂಕಾ ವಿರುದ್ಧ ಕೊಹ್ಲಿ ವೀಕ್ನೆಸ್ ಎಕ್ಸ್​ಪೋಸ್

ಪಾಕ್​ ಎದುರು ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ್ದ ವಿರಾಟ್, ಶ್ರೀಲಂಕಾ ವಿರುದ್ಧ ಅಬ್ಬರಿಸುವ ನಿರೀಕ್ಷೆಯಿತ್ತು. ಆದ್ರೆ, ಅಬ್ಬರಿಸಬೇಕಿದ್ದ ವಿರಾಟ್​ ಮಂಕಾದ್ರು. ಬರೋಬ್ಬರಿ 12 ಎಸೆತಗಳನ್ನ ಎದುರಿಸಿದ ವಿರಾಟ್, ಜಸ್ಟ್​ 3 ರನ್​ಗಳಿಗೆ ಲೆಗ್ ಸ್ಪಿನ್ನರ್ ದುನಿತ ವೆಲ್ಲಲಾಗೆ ವಿಕೆಟ್ ಒಪ್ಪಿಸಿದ್ರು. ಆ ಮೂಲಕ ಶ್ರೀಲಂಕಾ ವಿರುದ್ಧದ ಸೂಪರ್-4 ಮ್ಯಾಚ್​ನಲ್ಲಿ ಮತ್ತೊಮ್ಮೆ ವಿಕ್ನೇಸ್​​ ಎಕ್ಸ್​ಪೋಸ್ ಆಗಿದೆ. ಕುತೂಹಲದ ವಿಷ್ಯ ಅಂದ್ರೆ ಇದೊಂದೇ ಪಂದ್ಯದಲ್ಲಿ ಕೊಹ್ಲಿ ಲೆಗ್ ಸ್ಪಿನ್ನರ್​​ಗೆ ಬಲಿಯಾಗಿದ್ರೆ ಇಷ್ಟೊಂದು ಸುದ್ದಿಯಾಗ್ತಿರಲಿಲ್ಲ. ಇದಕ್ಕೆ ಕಾರಣವೂ ಇದೆ.

ಲೆಗ್​ ಸ್ಪಿನ್ನರ್​ಗಳ ಎದುರು ಕಿಂಗ್ ಕೊಹ್ಲಿ ಡಲ್..!

ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್​ಮನ್​ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಇದೇ ಕೊಹ್ಲಿಗೀಗ ಲೆಗ್ ಸ್ಪಿನ್ನರ್​​​ಗಳು ಅಂದ್ರೆ, ಭಯನಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ 2021ರಿಂದ ಲೆಗ್ ಸ್ಪಿನ್ನರ್​ಗಳ ಎದುರು ವಿರಾಟ್​ ಕೊಹ್ಲಿ, ಬ್ಯಾಟ್ ಬಿಸಿದ ಪರಿಯೇ ಆಗಿದೆ. ಯಾಕಂದ್ರೆ ಅಷ್ಟರ ಮಟ್ಟಿಗೆ ವಿರಾಟ್ ಪರದಾಡ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳು.

2021ರಿಂದ ಲೆಗ್ ಸ್ಪಿನ್ನರ್​ಗಳ ಎದುರು ಕೊಹ್ಲಿ!

2021ರಿಂದ ಲೆಗ್ ಸ್ಪಿನ್ನರ್​​​ಗಳ ಎದುರು 104 ರನ್ ಗಳಿಸಿರುವ ಕೊಹ್ಲಿ, ಬರೋಬ್ಬರಿ 159 ಎಸೆತವನ್ನು ಎದುರಿಸಿದ್ದಾರೆ. 79 ಎಸೆತಗಳನ್ನು ಡಾಟ್ ಮಾಡಿರೋ ವಿರಾಟ್, 8 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ದಯನೀಯ ಅಂದ್ರೆ 13ರ ಸರಾಸರಿಯಲ್ಲಿ ರನ್​ ಗಳಿಸಿರೋದು ಆಗಿದೆ. ಇಂಟ್ರೆಸ್ಟಿಂಗ್ ವಿಚಾರವಂದ್ರೆ ಈ ವರ್ಷ ಆಡಿರೋ 12 ಏಕದಿನ ಇನ್ನಿಂಗ್ಸ್​ಗಳ ಪೈಕಿ 10 ಬಾರಿ ಔಟಾಗಿರುವ ಕೊಹ್ಲಿ ಲೆಫ್ಟ್​ ಆರ್ಮ್ ಸ್ಪಿನ್​​​ಗೆ 4 ಬಾರಿ ಬಲಿಯಾಗಿದ್ದಾರೆ. ಲೆಫ್ಟ್​ ಆರ್ಮ್ ಪೇಸ್​ಗೆ 2 ಬರಿ ಔಟ್​ ಆಗಿದ್ದಾರೆ. ಇದು ಜಸ್ಟ್​ ಒಂದು ವರ್ಷದ ಏಕದಿನ ಫಾರ್ಮೆಟ್​ನ ಟ್ರ್ಯಾಕ್ ರೆಕಾರ್ಡ್​ ಮಾತ್ರ. ಇದು ನಿಜಕ್ಕೂ ಟೀಮ್ ಇಂಡಿಯಾಗೆ ಅಘಾತಕಾರಿ ವಿಚಾರವೇ ಆಗಿದೆ.

ವಿಶ್ವಕಪ್ ದೃಷ್ಟಿಯಿಂದ ಎಚ್ಚೆತ್ತುಕೊಳ್ಳಬೇಕು ಕೊಹ್ಲಿ

ಈ ಬಾರಿಯ ಏಕದಿನ ವಿಶ್ವಕಪ್ ಟೀಮ್ ಇಂಡಿಯಾ ಪಾಲಿಗೆ ಪ್ರತಿಷ್ಠೆಯ ಸಮರವಾಗಿದೆ. ಭಾರತದಲ್ಲೇ ನಡೆಯುತ್ತಿರುವ ಈ ಮೆಗಾ ಟೂರ್ನಿ ಗೆಲ್ಲಬೇಕಾದ ಸವಾಲು ಟೀಮ್ ಇಂಡಿಯಾ ಮುಂದಿದೆ. ಇಂಡಿಯನ್ ಕಂಡೀಷನ್ಸ್​ನಲ್ಲಿ ಸ್ಪಿನ್ನರ್​ಗಳೇ ಮೇಲುಗೈ ಟ್ರಂಪ್ ಕಾರ್ಡ್ಸ್​. ಹೀಗಾಗಿ ಬಹುತೇಕ ತಂಡಗಳು ಸ್ಪಿನ್ ಅಸ್ತ್ರದೊಂದಿಗೆಯೇ ಭಾರತಕ್ಕಿಳಿಯುತ್ತಿವೆ. ಇದು ವಿಶ್ವಕಪ್​​ನಲ್ಲಿ ಕೊಹ್ಲಿಗೆ ಕಂಟಕವಾಗಿ ಪರಿಣಮಿಸಬಲ್ಲದು. ಈ ದೃಷ್ಟಿಯಿಂದ ಕಿಂಗ್​​ ಕೊಹ್ಲಿ, ಆದಷ್ಟು ಬೇಗ ಈ ವೀಕ್ನೆಸ್​​​ನಿಂದ ಹೊರಬರಬೇಕಿದೆ. ಟೀಮ್ ಇಂಡಿಯಾ ಅಪಾಯಕ್ಕೆ ಸಿಲುಕೋದು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಿಂಗ್ ಕೊಹ್ಲಿಗೆ ಈ ಸ್ಪಿನ್ನರ್ಸ್ ಕಂಟಕ.. ವಿಶ್ವಕಪ್​​ನಲ್ಲಿ ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಕಂಟಕ..!

https://newsfirstlive.com/wp-content/uploads/2023/09/VIRAT_KOHLI_BAT.jpg

Load More