newsfirstkannada.com

ಮೊದಲ ಸೀರಿಯಲ್​ನಲ್ಲೇ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ ಬಿಗ್​ಬಾಸ್​ ಕಿಶನ್​​.. ಭಾರೀ ಮೆಚ್ಚುಗೆ!

Share :

Published July 2, 2024 at 6:08am

    ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ನಟ

    ವಿಭಿನ್ನವಾಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದ ನಟ ಕಿಶನ್

    ಸಸ್ಪೆನ್ಸ್​​ ಕ್ಯಾರೆಕ್ಟರ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಬಿಗ್​ಬಾಸ್​​ ಹೀರೋ

ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಧಾರಾವಾಹಿ ಎಂದರೆ ಅದು ನಿನಗಾಗಿ. ಸಿನಿಮಾ ನಾಯಕಿಯ ಕಥೆ ಇದಾಗಿದ್ದು, ಹೀರೋಯಿನ್ ಬದುಕು ಯಾವಾಗಲು ಬಿಂದಾಸ್​ ಆಗಿರುತ್ತೆ, ಅವ್ರಿಗೇನು ಕಮ್ಮಿ ಅನ್ನೋ ಮಾತುಗಳು ಕೇಳಿ ಬರುವುದು ಸಹಜ. ಆದ್ರೇ ಅಸಲಿಯಲ್ಲಿ ಅವ್ರಿಗೂ ನೋವಿರುತ್ತೆ. ಬಣ್ಣ ಹಚ್ಚಿ ಕಣ್ಣಿಗೆ ಕಲರ್​ಫುಲ್​ ಆಗಿ ಕಾಣಿಸುವಷ್ಟು ಕಲಾವಿದರ ಬದುಕು ಇರೋದಿಲ್ಲ. ಇದೇ ಎಳೆಯನ್ನು ಇಟ್ಕೊಂಡು ಬಂದಿರೋ ನಿನಗಾಗಿ ಸೀರಿಯಲ್​​ ಅನ್ನು ಅದ್ಧೂರಿಯಾಗಿ ಲಾಂಚ್​ ಮಾಡಲಾಗುತ್ತು.

ಇದನ್ನೂ ಓದಿ: ಸಿನಿಮಾವನ್ನೇ ಮೀರಿಸುತ್ತೆ ಈ ಸೀರಿಯಲ್​​.. ದಿವ್ಯಾ ಉರುಡುಗ ನಟನೆಗೆ ಕನ್ನಡಿಗರು ಕೊಟ್ರು ಫುಲ್​ ಮಾರ್ಕ್ಸ್​​!

ಆದರೆ ದಿನ ಕಳೆದಂತೆ ನಿನಗಾಗಿ ಸೀರಿಯಲ್​ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಸೀರಿಯಲ್ ಶುರುವಾದ​ ಮೊದಲ ಸಂಚಿಕೆ ಪ್ರೊಮೋದಲ್ಲೇ ವೀಕ್ಷಕರ ಮನಸ್ಸನ್ನು ಗೆದ್ದುಕೊಂಡಿತ್ತು. ಇದೀಗ ಅದೇ ಸಾಲಿನಲ್ಲಿ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ ನೋಡುಗರ ಕಣ್ಮನ ಸೆಳೆಯುತ್ತಿದ್ದಾರೆ. ಹೌದು, ಮೊನ್ನೆ ಮೊನ್ನೆಯಷ್ಟೇ ನಿನಗಾಗಿ ಸೀರಿಯಲ್​ಗೆ ಎಂಟ್ರಿ ಕೊಟ್ಟ ಕಿಶನ್‌ ಬಿಳಗಲಿ ಈಗ ವಿಲನ್ ಆಗಿಬಿಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಸಸ್ಪೆನ್ಸ್​​ ಕ್ಯಾರೆಕ್ಟರ್​ ಮೂಲಕ ಎಂಟ್ರಿ ಕೊಟ್ಟ ಕಿಶನ್​​ ರಚನಾಳನ್ನು ನೋಡಿ ಫುಲ್​ ಫಿದಾ ಆಗಿಬಿಟ್ಟಿದ್ದಾರೆ. ರಚನಾ ನನ್ನವಳು, ಅವರನ್ನು ಯಾರು ಕಣ್ಣು ಎತ್ತಿ ನೋಡಬಾರದು. ಮಿಸ್​ ಆಗಿ ನೋಡಿದ್ರೆ ಅಷ್ಟೇ ಅವರ ಕತೆ ಅನ್ನೋ ರೀತಿ ಮಾಡಿ ಬಿಡ್ತಾನೆ.

ಇನ್ನ, ಸದಾ ಒಂದಲ್ಲಾ ಒಂದು ವಿಭಿನ್ನವಾಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿರುವ ಕಿಶನ್ ಈಗ ಕಿರುತೆರೆ ಎಂಟ್ರಿ ಕೊಟ್ಟಿರುವುದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಜೊತೆಗೆ ಮೊದಲ ಸೀರಿಯಲ್​ನಲ್ಲಿ ವೀಕ್ಷಕರನ್ನು ಮೆಚ್ಚಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಶನ್​ ಅವರ ಅಭಿನಯದ ಬಗ್ಗೆ ಜೋರಾಗಿ ಮಾತುಕತೆ ನಡೆಯುತ್ತಿದೆ. ಸದ್ಯ ನಿನಗಾಗಿ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಸೀರಿಯಲ್​ನಲ್ಲೇ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ ಬಿಗ್​ಬಾಸ್​ ಕಿಶನ್​​.. ಭಾರೀ ಮೆಚ್ಚುಗೆ!

https://newsfirstlive.com/wp-content/uploads/2024/07/kishan3.jpg

Load More