ಸೂರ್ಯಕುಮಾರ್ಗೆ ಆಫರ್ ನೀಡಿರುವ ಟೀಮ್ ಯಾವುದು.?
ಪಾಂಡ್ಯ ಕ್ಯಾಪ್ಟನ್ ಆದ ಮೇಲೆ ಮುಂಬೈ ತಂಡದಲ್ಲಿ ಬೆಳವಣಿಗೆ
ರೋಹಿತ್ಗಿಂತ ಸೂರ್ಯಕುಮಾರ್ಗೆ ಬೇಡಿಕೆ ಹೆಚ್ಚು ಯಾಕೆ..?
2025ರ ಐಪಿಎಲ್ನ ರಿಟೈನ್-ರಿಲೀಸ್ಗಳು ಆರಂಭವಾದ ದಿನದಿಂದಲೂ ಸಖತ್ ಸುದ್ದಿಯಲ್ಲಿರೋ ಫ್ರಾಂಚೈಸಿ ಅಂದ್ರೆ ಅದು ಮುಂಬೈ ಇಂಡಿಯನ್ಸ್. ಈ ಟೀಮ್ಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆದ ಮೇಲಂತೂ ಸಾಕಷ್ಟು ಬೆಳವಣಿಗೆಗಳು ಕಳೆದ ವರ್ಷದಿಂದ ನಡೆಯುತ್ತಲೇ ಇವೆ. ಹೀಗಾಗಿ ಟೀಮ್ನಿಂದ ಸ್ಟಾರ್ ಪ್ಲೇಯರ್ಸ್ ಬೇರೆ ಟೀಮ್ಗೆ ಹೋಗ್ತಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ಹೊಸ ದಾಳ ಉರುಳಿಸಿದೆ.
ಇದನ್ನೂ ಓದಿ: ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಗಳು.. ಸ್ಯಾಲರಿ ಎಷ್ಟು, ಕೊನೆ ದಿನಾಂಕ?
ಮುಂಬೈ ತಂಡ ರೋಹಿತ್ ಶರ್ಮಾರಿಂದ ಕ್ಯಾಪ್ಟನ್ಸಿಯನ್ನು ಕಸಿದುಕೊಂಡ ಮೇಲೆ ಹಿಟ್ಮ್ಯಾನ್ ಕುಗ್ಗಲಿಲ್ಲ. ಮುಂಬೈ ಫ್ರಾಂಚೈಸಿಗೆ ಮುಟ್ಟಿ ನೋಡಿಕೊಳ್ಳುವಾಗೆ ಟಿ20 ವಿಶ್ವಕಪ್ ಗೆದ್ದು ತಮ್ಮ ಇಮೇಜ್ ಇನ್ನಷ್ಟು ಜಾಸ್ತಿ ಮಾಡಿಕೊಂಡರು. ಹೀಗಾಗಿ ಈ ಸಲದ ಐಪಿಎಲ್ನಲ್ಲಿ ಹಿಟ್ಮ್ಯಾನ್ ಮೇಲೆ ಬೇರೆ ಬೇರೆ ಐಪಿಎಲ್ ತಂಡಗಳು ಕಣ್ಣೀಟ್ಟಿವೆ. ರೋಹಿತ್ ಯಾವ ಟೀಮ್ಗೆ ಹೋಗ್ತಾರೆ ಎನ್ನುವುದಕ್ಕೆ ಆನ್ಸರ್ 2025 ಆಕ್ಷನ್ನಲ್ಲಿ ಸಿಗಲಿದೆ. ಮುಂಬೈ ಇಂಡಿಯನ್ಸ್ ಕಥೆ ಇಲ್ಲಿಗೆ ಮುಗಿದಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಿಂದ ಕೈದಿಗಳಿಗೆ ಗುಡ್ನ್ಯೂಸ್.. 2 ತಿಂಗಳಲ್ಲಿ ಬಿಡುಗಡೆ ಭಾಗ್ಯ
ಏಕೆಂದರೆ ರೋಹಿತ್ಗೆ ಬೇರೆ ಟೀಮ್ಗಳಿಂದ ಬೇಡಿಕೆ ಇದೆ. ಇದರ ಜೊತೆಗೆ ಟೀಮ್ ಇಂಡಿಯಾದ ಟಿ20 ಟೀಮ್ನ ಹೊಸ ಕ್ಯಾಪ್ಟನ್ ಸೂರ್ಯಕುಮಾರ್ಗೂ ಐಪಿಎಲ್ನ ಚಾಂಪಿಯನ್ ತಂಡ ಗಾಳ ಬೀಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಸದ್ಯ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ಸೂರ್ಯಕುಮಾರ್ನ್ನ ತಮ್ಮ ಟೀಮ್ಗೆ ಕರೆದುಕೊಂಡು ಬಂದರೆ ಸೂಕ್ತ ಎಂದು ಅದು ಅಂದುಕೊಂಡಿದೆ. ಇದರಿಂದ ಸೂರ್ಯಕುಮಾರ್ರನ್ನ ಕೋಲ್ಕತ್ತಾ ಫ್ರಾಂಚೈಸಿ ಸಂಪರ್ಕ ಮಾಡಿದೆ ಎಂದು ಹೇಳಲಾಗುತ್ತಿದೆ.
ಕಳೆದ ಸೀಸನ್ನಲ್ಲಿ ಮುಂಬೈ ಫ್ರಾಂಚೈಸಿ ಅವಮಾನಕರ ರೀತಿಯಲ್ಲಿ ನಾಯಕತ್ವದಿಂದ ಕೆಳಗಿಳಿಸಾದಗಲೇ ರೋಹಿತ್ ತಂಡದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ರು. ರೋಹಿತ್ ಜೊತೆ ಸೂರ್ಯಕುಮಾರ್ ಕೂಡ ಅಸಮಾಧಾನಗೊಂಡಿದ್ದರು. ಇದರಿಂದ ಈ ಸಲ ತಂಡ ತೊರೆದು ಬೇರೆ ಫ್ರಾಂಚೈಸಿಗೆ ಇಬ್ಬರು ಕಾಲಿಡುತ್ತಾರಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ